ಕೊರಟಗೆರೆ : ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಗ್ರಾಮದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಪಾಠಶಾಲೆ ಶತಮಾನದ ಅಂಚಿನಲ್ಲಿರುವ ಶಾಲೆ 1932ರಲ್ಲಿ ಇಲ್ಲಿ ಪ್ರಾಥಮಿಕ ಶಾಲೆ ನಿರ್ಮಾಣವಾಗಿ 92 ವರ್ಷ ಕಳೆದರೂ ಒಂದು ಪ್ರೌಢಶಾಲೆ ನಿರ್ಮಿಸಲು ಸಾಧ್ಯವಾಗಿಲ್ಲ. ಈ ಶಾಲೆಯಲ್ಲಿ ಓದಿ ಕಲಿತ ನೂರಾರು ವಿಧ್ಯಾರ್ಥಿಗಳು ಉನ್ನತ ಮಟ್ಟದ ಹುದ್ದೆಗಳನ್ನು ಅಲಂಕಾರಿಸಿದ್ದಾರೆ, ಇಂದಿಗೂ ಈ ಶಾಲೆಯಿಂದ ಬೆಳೆಯುತ್ತಿರುವ ಮಕ್ಕಳು ಉನ್ನತ್ತ ಮಟ್ಟದ ಹುದ್ದೆ ಅಲಂಕಾರಿಸಲಿದ್ದಾರೆ ಇಲ್ಲಿಯವರೆವಿಗೂ ಈ ಶಾಲೆಗೆ ಪ್ರೌಢಶಾಲೆ ಇಲ್ಲ ಎಂಬುದು ದುರ್ದೈವದ ಸಂಗತಿ.
1ರಿಂದ 8ನೇ ತರಗತಿ ಓದಿದ ನಂತರದ ವಿದ್ಯಾಭ್ಯಾಸಕ್ಕೆ ಪ್ರೌಢಶಾಲೆ ಇಲ್ಲದೆ ವಿದ್ಯಾರ್ಥಿಗಳು ಅನಿವಾರ್ಯವಾಗಿ ಖಾಸಗೀ ಶಾಲೆ ಸೇರುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿಧ್ಯಾರ್ಥಿಗಳು ತನ್ನ ಮುಂದಿನ ವಿಧ್ಯಾಭ್ಯಾಸಕ್ಕೆ ಖಾಸಗಿ ಶಾಲೆ ಅವಲಂಬಿಸಬೇಕಾಗಿದೆ, ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಶಾಸಗಿಶಾಲೆಯಲ್ಲಿ ಓದಲು ಸಾಧ್ಯವಿಲ್ಲ, ಖಾಸಗಿ ಶಾಲೆಯಲ್ಲಿ ಡೋನೇಷನ್, ಫೀಜ್, ಇನ್ನು ಇತರೆ ಹಣ ಕಟ್ಟಲು ಸಾಧ್ಯವಿಲ್ಲ. ಏಕೆಂದರೆ ಅ ಮಕ್ಕಳು ರೈತ ಮಕ್ಕಳು, ಮಧ್ಯಮ ವರ್ಗಕ್ಕಿಂತ ಕೆಳಮಟ್ಟದ ಕುಟುಂಬದ ಮಕ್ಕಳು. ಅರ್ನಿವಾಯವಾಗಿ ಕೊರಟಗೆರೆ ಅಥವಾ ತುಮಕೂರಿನ ಶಾಲೆಗಳಿಗೆ ದಾವಿಸುತ್ತಿದ್ದಾರೆ.
ಒಂದರಿಂದ ಎಂಟನೇ ತರಗತಿ ಪ್ರಾಥಮಿಕ ಶಿಕ್ಷಣದ ಪರಿಧಿ ಎಂದು ಪರಿಗಣಿಸಿದಾಗ ಏಳನೇ ತರಗತಿಯಿಂದ ಮೇಲ್ದರ್ಜೆ ಎಂಟನೇ ತರಗತಿಯನ್ನು ಸರ್ಕಾರ ಮಂಜೂರು ಮಾಡಿದೆ. ತೋವಿನಕೆರೆ ಸುತ್ತಲಿನ 50 ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆ ಸಾವಿರದ ನಾಲ್ಕುನೂರಕ್ಕೂ ಅಧಿಕವಿದೆ. ಒಂಭತ್ತನೇ ಮತ್ತು ಹತ್ತನೇ ತರಗತಿಯನ್ನೂ ಮಂಜೂರು ಮಾಡಿದ್ದರೆ ಅಷ್ಟೂ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿತ್ತು. ಸಾಕಷ್ಟು ಮಕ್ಕಳು ರವೀಂದ್ರ ಭಾರತಿ, ಕಣ್ವ, ಕಿಡ್ಸ್, ಸೆಂಟ್ ಮೆರಿಸ್, ಜೈನ್ ಶಾಲೆಗಳಿಗೆ ಹೋಗುತ್ತಿದ್ದು, ಕೆಳ ಮಧ್ಯಮ ವರ್ಗದ ತಂದೆ ತಾಯಿಗಳು ಸ್ತ್ರೀಶಕ್ತಿ ಸಂಘ ಹಾಗೂ ಧರ್ಮಸ್ಥಳ ಸಂಘಗಳಲ್ಲಿ ಸಾಲ ತೆಗೆದು ಖಾಸಗೀ ಶಾಲೆಗಳ ಡೊನೇಶನ್ ಕಟ್ಟುತ್ತಿದ್ದಾರೆ. ಅಲ್ಲದೇ ಒಂದು ಸಾವಿರಕ್ಕೂ ಅಧಿಕ ದಲಿತ ಕುಟುಂಬಗಳು ಇಲ್ಲಿ ವಾಸವಿದ್ದು, ಅವರ ಮಕ್ಕಳು ದುಬಾರಿಯಾದ ಶಿಕ್ಷಣದ ಕಾರಣಕ್ಕೆ ಶಾಲೆಯಿಂದ ದೂರ ಉಳಿಯುತ್ತಿದ್ದಾರೆ
1932ರಲ್ಲಿ ಇಲ್ಲಿ ಪ್ರಾಥಮಿಕ ಶಾಲೆ ನಿರ್ಮಾಣವಾಗಿ 92ವರ್ಷ ಕಳೆದರೂ ಒಂದು ಪ್ರೌಢಶಾಲೆ ನಿರ್ಮಿಸಲು ಸಾಧ್ಯವಾಗಿಲ್ಲ. ಪ್ರತೀ ವರ್ಷ ನೂರಾರು ಮಕ್ಕಳು ಎಂಟನೇ ತರಗತಿ ಪೂರ್ಣಗೊಳಿಸುತ್ತಿದ್ದಾರೆ. ಅವರ ಮುಂದೆನ ಆಯ್ಕೆ ಸರ್ಕಾರಿ ಶಾಲೆಯಲ್ಲ, ಬದಲಿಗೆ ಖಾಸಗೀ ಶಾಲೆ. ಬಡವರ, ರೈತರ ಮಕ್ಕಳು ದುಬಾರಿ ವೆಚ್ಚದಲ್ಲು ವಿದ್ಯಾಭ್ಯಾಸ ಪೂರೈಸಲು ಸಾಧ್ಯವಿದೆಯಾ? ಗ್ರಾಮಸ್ಥರು ಎಷ್ಟು ಬಾರಿ ಮನವಿ ಮಾಡಿಕೊಂಡರೂ ಸರ್ಕಾರವಂತೂ ಇತ್ತ ಗಮನ ಹರಿಸಿಲ್ಲ. ಸರ್ಕಾರದ ಬಡವರ ಮಕ್ಕಳ ಮೇಲಿನ ಈ ಮಲತಾಯಿ ಧೋರಣೆ ಸರಿಯಲ್ಲ.
ಸರ್ಕಾರಿ ಶಾಲೆಗಳು ಕರ್ನಾಟಕದಲ್ಲಿ ನಿರ್ಗತಿಕ ಸ್ಥಾನಕ್ಕೆ ತಲುಪಿರುವುದರಲ್ಲಿ ಬಂಡವಾಳಶಾಹಿ ರಾಜಕಾರಣಿಗಳ ಪಾತ್ರ ದೊಡ್ಡದು. ಇಷ್ಟೆಲ್ಲ ಅಡೆ ತಡೆಗಳ ನಡುವೆಯೂ ಬಡವರ, ರೈತರ ಮಕ್ಕಳು ಹೆಣಾಗಡಿಯಾದರೂ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸುತ್ತಿದ್ದಾರೆ. ಅವರ ಶೈಕ್ಷಣಿಕ ಪ್ರಗತಿಗೆ ಹೆಗಲು ಕೊಡುವ ಉದಾರತೆ ಈಗಿನ ಸರ್ಕಾರಗಳಿಗಿಲ್ಲ ಎಂಬುದು ಸರ್ಕಾರಿ ಶಾಲೆಗಳ ದುಸ್ಥಿಯಿಂದ ಸಾಭೀತಾಗಿದೆ. ಆದರೆ ತೋವಿನಕೆರೆ ಹಾಗೂ ಸುತ್ತಮುತ್ತಲಿನ ಐವತ್ತಕ್ಕೂ ಹೆಚ್ಚಿನ ಗ್ರಾಮದ ಜನರು ಕೃಷಿಯನ್ನೇ ಅವಲಂಬಿಸಿ ಬದುಕುತ್ತಿದ್ದಾರೆ. ಅವರ ಜೀವನ ಹೊಟ್ಟೆ ಬಟ್ಟೆಗೆ ಸಲೀಸಾಗುತ್ತದಷ್ಟೆ. ಇನ್ನು ಖಾಸಗೀ ಶಾಲೆಗಳ ಶುಲ್ಕ, ಬಟ್ಟೆ ಬರೆ, ಶೂ, ಬಸ್ ವ್ಯವಸ್ಥೆ ಹಾಗೂ ಇಲ್ಲ ಸಲ್ಲದ ಶುಲ್ಕಗಳನ್ನು ಭರಿಸಿ ಬಡ ಜನರು ಹೈರಾಣಾಗುತ್ತಿದ್ದಾರೆ. ಬಡವರ ಮಕ್ಕಳನ್ನು ಶುಲ್ಕ ಕಟ್ಟುವ ಶಾಲೆಗೆ ಕುತ್ತಿಗೆ ಹಿಡಿದು ದೂಡಿದಂತಾಗಿದೆ. ಇಂತ ಪ್ರಕರಣಗಳು ಒಂದೆರಡಲ್ಲ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಸರ್ಕಾರ ತಲೆ ಕೆಡಿಸಿಕೊಳ್ಳಸಿರುವುದು ದುರ್ದೈವದ ಸಂಗತಿ.

1400ಕ್ಕಿಂತ ಹೆಚ್ಚು ಮಕ್ಕಳು ಇಂಗ್ಲೀಷ್ ಮಾಧ್ಯಮಕ್ಕಾಗಿ ಬೇರೆ ಶಾಲೆಗಳಲ್ಲಿ ಓದುತ್ತಿರುವುದು
ತೋವಿನಕೆರೆ ಹಾಗೂ ಸುತ್ತ ಮುತ್ತಲಿನ ಐವತ್ತು ಹೆಚ್ಚು ಹಳ್ಳಿಗಳಿಂದ 1400ಕ್ಕಿಂತ ಹೆಚ್ಚು ಮಕ್ಕಳು 8 ಮತ್ತು 9ನೇ ತರಗತಿಗೆ ರವೀಂದ್ರ ಭಾರತಿ ೫೮ ಮಕ್ಕಳು 17 ಕಣ್ವ ೮ ಕಿಡ್ಸ್ 5೦, ಎಂಪ್ರೇಸ್‌ನಲ್ಲಿ ಹೆಣ್ಣು ಮಕ್ಕಳು ೩35 ಸೆಂಟ್ ಮೆರಿಸ್ , ಜೈನ್ 18, ವಸತಿಶಾಲೆ, ಕಿತ್ತೂರು ಚೆನ್ನಮ್ಮ ಶಾಲೆ, ಮೊರರ್ಜಿ ಶಾಲೆಗೆ ಇಂಗ್ಲೀಷ್ ಮಾಧ್ಯಮ ಶಾಲೆಗೋಸ್ಕರ ಹೊರ ಹೋಗುತ್ತಿದ್ದಾರೆ
ಮನವಿಗೆ ಮರುಗದ ಸರ್ಕಾರ: ಮೂಗು ಮುರಿಯುವ ಹಾಲಿ ಶಾಸಕ ಪರಮೇಶ್ವರ
ತೋವಿನಕೆರೆ ಸರ್ಕಾರಿ ಶಾಲೆಗೆ ೯9ಮತ್ತು 1೦ ನೇ ತರಗತಿ ಮಂಜೂರಾತಿಗಾಗಿ ತೋವಿನಕೆರೆ ಶಾಲಾಭಿವೃದ್ಧಿ ಸಮಿತಿ ಹಾಗೂ ಹಳೆಯ ವಿದ್ಯಾರ್ಥಿಗಳ ಒಕ್ಕೂಟವನ್ನು ಬೆಂಬಲಿಸುವಂತೆ ಸಿದ್ದರಬೆಟ್ಟದ ಬಾಳೆಹೊನ್ನೂರು ಶಾಖಾ ಮಠದ ಸ್ವಾಮೀಜಿಯವರನ್ನು ಕೋರಲಾಗಿದೆ ಸ್ವಾಮೀಜಿಯವರು ಸದಾ ನಿಮ್ಮೊಂದಿಗೆ ಇರುವೆ ಎಂದು ಬೆಂಬಲ ಸೂಚಿಸಿ ಸಂಬಂಧಪಟ್ಟ ಶಿಕ್ಣ ಸಚಿವರ ಜೊತೆ ಮಾತನಾಡುವೆ ಎಂದಿದ್ದಾರೆ. ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಅರಗ ಜ್ಞಾನೇಂದ್ರ ಅವರಿಗೂ ಮನವಿ ಪತ್ರ ಸಲ್ಲಿಸಲಾಗಿದೆ. ಮಾಜಿ ಉಪ ಮುಖ್ಯಂಮತ್ರಿಗಳಾಗಿದ್ದ ಡಾ.ಜಿ.ಪರಮೇಶ್ವರ ಅವರ ಸ್ವಕ್ಷೇತ್ರದಲ್ಲಿ ಹೀಗಾಗಿರುವುದು ಅವರ ಜನಪರ ಕಾಳಜಿಯನ್ನು ತೋರಿಸುತ್ತದೆ. ಹಾಲಿ ಶಾಸಕರಾಗಿದ್ದು, ಬಡ ಮಕ್ಕಳು ಕಲಿಯುವ ಶಾಲೆಯ ಉನ್ನತೀಕರಣಕ್ಕೆ ಮಿಡಿಯದಿರುವುದೇ ಕೊರಟಗೆರೆ ಶಾಲೆಗಳ ಅನಾಥಕ್ಕೆ ಕಾರಣ. ನಿಜಕ್ಕೂ ಇವರಿಗೆ ಬಡವರ ಬಗ್ಗೆ ಕಾಳಜಿ ಇದ್ದರೆ ಪ್ರೌಢ ಶಾಲೆ ಮಂಜೂರಾತಿಗಾಗಿ ಶ್ರಮಿಸಲಿ, ಇಲ್ಲವಾದರೆ ರಾಜೀನಾಮೆ ಕೊಟ್ಟು ನಡೆಯಲಿ ಎಂದು ಜನರು ಆಗ್ರಹಿಸುತ್ತಿದ್ದಾರೆ.
ಶಾಸಕರ ಜೊತೆ ಖಾಸಗೀ ಶಾಲೆಗಳ ಒಳ ಒಪ್ಪಂದವೇ!
ಖಾಸಗೀ ಶಾಲೆಗಳು ನಾಯಿ ಕೊಡೆಗಳಂತೆ ತಲೆ ಎತ್ತಿದ್ದು, ಸರ್ಕಾರೀ ಶಾಲೆಯ ಉನ್ನತೀಕರಣಕ್ಕೆ ತಡೆಯಾಗಿವೆ. ಅವರಿಗೆ ಪ್ರೋತ್ಸಾಹ ನಿಡಲೆಂದೇ ಹಾಲಿ ಶಾಸಕರು ಜನರ ಮನವಿಗೆ ಸ್ಪಂದಿಸುತ್ತಿಲ್ಲ. ಏಕೆಂದರೆ ಹಾಲಿ ಶಾಸಕರು ಡಿಸಿಎಂ ಆದಾಗಲು ಈ ಶಾಲೆಯನ್ನು ಕಡೆಗಣಿಸಿದರು.ಈಗಲೂ ಕಡೆಗಣಿಸುತ್ತಿದ್ದಾರೆ. ಖಾಸಗೀ ಶಾಲೆಗಳ ಜೊತೆ ಶಾಸಕರಿಗೆ ಒಳ ಒಪ್ಪಂದ ಇದೆಯೇ ಎಂಬ ಗುಮಾನಿ ಎಲ್ಲರನ್ನೂ ಕಾಡುತ್ತಿದೆ.
:
ಉಗ್ರ ಹೋರಾಟಕ್ಕೆ ಸಿದ್ಧವಾದ ವಿಧ್ಯಾರ್ಥಿ ಒಕ್ಕೂಟ
ಮಕ್ಕಳ ವಿಧ್ಯಾಭ್ಯಾಸಕ್ಕೆ ತೊಂದರೆಯಾಗಬಾರದು. ಮಕ್ಕಳ ಭವಿಷ್ಯ ಹಾಳಗಬಾರದು. ಪ್ರಾಥಮಿಕ ಶಾಲೆಗೆ ಪ್ರೌಢಶಾಲೆಯೂ ಸೇರಿದರೆ ಒಳ್ಳೆಯದಾಗುತ್ತೆ.
ಇಲ್ಲಿಯವರೆವಿಗೂ ಯಾವುದೇ ಜನಪ್ರತಿನಿಧಿಗೆ ಈ ಶಾಲೆಯ ಹಾಗೂ ಮಕ್ಕಳ ಬಗ್ಗೆ ಕಾಳಜಿ ಇಲ್ಲ. ಅವರಿಗೆ ಓಟು ಮುಖ್ಯವೇ ಹೊರತು ಮಕ್ಕಳ ವಿದ್ಯಾಬ್ಯಾಸವಲ್ಲ. ಏಕೆಂದರೆ ಮಕ್ಕಳು ಓಟು ಹಾಕುವುದಿಲ್ಲವಲ್ಲ! ಹಳೆ ವಿದ್ಯಾರ್ಥಿಗಳೆಲ್ಲ ಸೇರಿ ಪ್ರೌಡಶಾಲೆ ತರಲೇಬೇಕು ಎಂದು ದೃಢ ಸಂಕಲ್ಪ ಮಾಡಿದ್ದಾರೆ. ಈಗಾಗಲೇ ಶಾಲೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಶಾಲೆಗೆ ಬೇಕಾದ ಸಂಪನ್ಮೂಲಗಳನ್ನು ಕ್ರೂಢೀಕರಿಸುತ್ತಿದ್ದಾರೆ.
ಸತತ ಹತ್ತು ವರ್ಷಗಳಿಂದ ರಾಜಕಾರಣಿಗಳ ಮನೆಗೆ ಹೋಗಿ ಮನವಿ ಕೊಟ್ಟರು ಪ್ರಯೋಜನವಾಗಿಲ್ಲ. ವಿಧಾನಸೌಧಕ್ಕೆ ನೂರಾರು ಬಾರಿ ತಿರುಗಿ ಸಂಬಂಧಪಟ್ಟ ಶಿಕ್ಷಣ ಸಚಿವರು, ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ್ದರೂ ಕಿಂಚಿತ್ತೂ ಲಕ್ಷ್ಯ ವಹಿಸಿಲ್ಲ. ಈ ಶಾಲೆಯಲ್ಲಿ ಓದಿದ ಹಳೇ ವಿಧ್ಯಾರ್ಥಿಗಳೆಲ್ಲ ಸೇರಿಕೊಂಡು ಒಕ್ಕೂಟ ಮಾಡಿಕೊಂಡು ಪ್ರೌಡಶಾಲೆ ತರಲು ಹೋರಟಿದ್ದಾರೆ. ಸರ್ಕಾರ ಶಾಲೆ ಮಂಜೂರು ಮಾಡುವವರೆಗೂ ಒಕ್ಕೂಟದ ಪ್ರಯತ್ನ ನಡೆಯುತ್ತಲೆ ಇರುತ್ತದೆ ಹಾಗೂ ಶಾಸಕರು, ಸರ್ಕಾರ ಏನಾದರು ಈ ಶಾಲೆಯ ಮನವಿಯನ್ನು ಕಡೆಗಣಿಸಿದ್ದಾರೆ ಉಗ್ರಹೋರಾಟಕ್ಕೂ ಒಕ್ಕೂಟ ನಿರ್ಧರಿಸಿದೆ.
ಬಡಮಕ್ಕಳ ವಿದ್ಯಾಬ್ಯಾಸಕ್ಕೆ ಅನುಕೂಲವಾಗುವ ಪ್ರೌಢಶಾಲೆಯನ್ನು ಸರ್ಕಾರ ಅದಷ್ಡುಬೇಗ ಮಂಜೂರು ಮಾಡುತ್ತದೆ ಎಂದು ಸಾವಿರಾರು ಹಳೇ ವಿಧ್ಯಾರ್ಥಿಗಳು ಆಶಯವಾಗಿದೆ
–
:
ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಕಳೆದೆರಡು ವರ್ಷದಿಂದ ಕೋವಿಡ್, ಬರಗಾಲದಿಂದ ರೈತರು ತತ್ತರಿಸಿದ್ದಾರೆ. ಆ ಕುಟುಂಬದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಒದಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯಕರ್ತವ್ಯ, ತೋವಿನಕೆರೆ ಸರ್ಕಾರಿ ಶಾಲೆಗೆ 8 ಮತ್ತು 9 ನೇತರಗತಿ ಅತ್ಯವಶ್ಯವಾಗಿದೆ. ಆದ್ದರಿಂದ ಸರ್ಕಾರ ಅದಷ್ಟು ಬೇಗ ಪ್ರೌಡಶಾಲೆ ಮಂಜೂರು ಮಾಡಲಿ.
ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ
ಬಾಳೆ ಹೊನ್ನೂರು ಶಾಖಾ ಮಠ, ಸಿದ್ದರಬೆಟ್ಟ
1 ರಿಂದ 8ನೇ ತರಗತಿ ವರೆಗೂ ಪ್ರಾಥಮಿಕ ಶಾಲೆ ಇದೆ. ಹೈಸ್ಕೂಲ್ ಗೆ ಹೋಗಬೇಕಾದರೆ ಹದಿನೈದರಿಂದ ಇಪ್ಪತ್ತು ಕಿ.ಮೀ ಕ್ರಮಿಸಬೇಕು. ಪ್ರಾಥಮಿಕ ಶಿಕ್ಷಣ ಮುಗಿದ ನಂತರ 9 ಮತ್ತು 10 ನೇ ತರಗತಿಗೆ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು. ಈ ಕುರಿತು ಸರ್ಕಾರ ಚಿಂತನೆ ನಡೆಸಬೇಕಿದೆ. ನಮ್ಮೂರಿನಲ್ಲೇ ಶಾಲೆ ಆರಂಭವಾದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ಖಾಸಗೀ ಶಾಲೆಗಳಿಗೆ ಸ್ತ್ರೀಶಕ್ತಿ ಸಂಘಗಳಿಂದ ಸಾಲ ತೆಗೆದು ತಮ್ಮ ಮಕ್ಕಳನ್ನು ಓದಿಸುತ್ತಿದ್ದಾರೆ. ಇಂತಹ ದಯನೀಯ ಸ್ಥಿತಿ ಸುಧಾರಿಸಲು ನಮ್ಮೂರಿಗೆ ಅಗತ್ಯವಾಗಿ ಒಂದು ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಬೇಕಿದೆ.
ರೇಖಾ ಹನುಂಮತರಾಯಪ್ಪ,
ಸದಸ್ಯರು, ತೋವಿನಕೆರೆ ಗ್ರಾಪಂ.