ಹದಿನಾರು ಗಂಟೆಯಲ್ಲಿ ಎರಡು ಅಪಘಾತ : ಅರು ಜನರ ಸಾವು

ಗುಬ್ಬಿ: ಪ್ರತ್ಯೇಕ ಎರಡು ಭೀಕರ ಅಪಘಾತದಲ್ಲಿ ಒಟ್ಟು ಆರು ಜನ ಮೃತಪಟ್ಟ ದುರ್ಘಟನೆ ಗುಬ್ಬಿ ತಾಲ್ಲೂಕು ಕೊಂಡ್ಲಿ ಕ್ರಾಸ್ ಬಳಿ ರಾ.ಹೆ. 206 ರಲ್ಲಿ ನಡೆದಿದೆ.

ಬುಧವಾರ ಮದ್ಯಾಹ್ನ ಕಾರು ಮತ್ತು ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಒಟ್ಟು ನಾಲ್ವರಲ್ಲಿ ಮೂವರು ಸ್ಥಳದಲ್ಲೇ ಮೃತ ಪಟ್ಟು ಓರ್ವ ಮಹಿಳೆ ಗಂಭೀರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾಸ್ಪತ್ರೆಯತ್ತ ಸೇರಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲ್ಲೂಕು ಗೋಡೆಕೆರೆ ಸಮೀಪದ ನಡುವನಹಳ್ಳಿ ಗ್ರಾಮ ಮೂಲದ ಒಂದೇ ಕುಟುಂಬದ ಸದಸ್ಯರು ಎಂದು ಹೇಳಲಾಗುತ್ತಿದೆ. ಈ ಜೊತೆಗೆ ಕಾರಿನಲ್ಲಿ ಸಾಕು ನಾಯಿ ಸಹ ಸ್ಥಳದಲ್ಲೇ ಮೃತಪಟ್ಟಿದೆ.

ಮಂಗಳವಾರ ಸಂಜೆ ವೇಳೆ ಇದೇ ಹೆದ್ದಾರಿಯಲ್ಲಿ ಕೊಂಡ್ಲಿ ಸಮೀಪದ ಎನ್.ಹೊಸಹಳ್ಳಿ ಗೇಟ್ ಬಳಿ ಬೈಕ್ ಮತ್ತು ಸರ್ಕಾರಿ ಬಸ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಗುಬ್ಬಿ ತಾಲ್ಲೂಕು ಹೊಸಹಟ್ಟಿ ಹಾಗೂ ಮುದ್ದುಪುರ ಗೊಲ್ಲರಹಟ್ಟಿ ಗ್ರಾಮದ ಮೂಲದ ಯುವಕರು ಎಂದು ತಿಳಿದು ಬಂದಿದೆ. ಮುತ್ತುರಾಜ್ ಮತ್ತು ಪ್ರಭು ಎಂಬ ಯುವಕರು ಮೃತಪಟ್ಟ ದುರ್ದೈವಿಗಳು ಎನ್ನಲಾಗಿದೆ.

ರಾಷ್ಟ್ರೀಯ ಹೆದ್ದಾರಿ 206 ರಸ್ತೆ ಮೆಲ್ಡರ್ಜೆಗೇರಿಸಿದ ಹಿನ್ನಲೆ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನಲೆ ಹಲವು ಕಡೆ ರಸ್ತೆ ಪೂರ್ಣವಾಗಿಲ್ಲ. ಈ ಹಿನ್ನಲೆ ಸರಣಿ ಅಪಘಾತ ನಡೆದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಅಪಘಾತ ನಡೆದ ಸಂದರ್ಭದಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು ಸುಮಾರು ನಾಲ್ಕು ಕಿಮೀ ದೂರ ವಾಹನ ದಟ್ಟಣೆ ಕಂಡಿತು. ಇವೆಲ್ಲಕ್ಕೂ ನಡೆಯುತ್ತಿರುವ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಅವಶ್ಯ ಸಂಚಾರ ಸುಗಮಗೊಳಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!