ಹೊಸಕೆರೆ : ವೀರಶೈವ ಲಿಂಗಾಯಿತ ಮುಖಂಡರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡುವ ಶಾಸಕ ಶ್ರೀನಿವಾಸ್ ವೀರಶೈವ ಸಮುದಾಯದ ಮತ ಬೇಡವೆಂದು ಹೇಳಲಿ ಎಂದು ಶಾಸಕರಿಗೆ ಹಾಗೂ ಅವರ ಬೆಂಬಲಿಗರಿಗೆ ಸವಾಲ್ ಹಾಕಿ ಮಾತನಾಡಿದ ಶಿವನೇಹಳ್ಳಿ ವೀರಶೈವ ಮುಖಂಡ ಸುರೇಶ್.
ಹಾಗಲವಾಡಿ ಹೋಬಳಿಯ ಶಿವನೇ ಹಳ್ಳಿ ಕಂತೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಗುಬ್ಬಿ ಶಾಸಕರೇ ತಾಲೂಕಿನ ವೀರಶೈವ ಲಿಂಗಯುತರ ಮತ ಬೇಡ ಎಂದು ಒಮ್ಮೆ ಹೇಳಿಕೆ ಕೊಡಿ ಆಮೇಲೆ ನಾವು ಏನು ಎಂಬುದನ್ನು ತೋರಿಸುತ್ತೇವೆ ನಿಮ್ಮ ಹಿಂಬಾಲಕರ ಮೂಲಕ ಜಿ ಎಸ್ ಪ್ರಸನ್ನ ಕುಮಾರ್ ವಿರುದ್ಧ ಹೇಳಿಕೆ ಕೊಡಿಸುವುದನ್ನು ಬಿಟ್ಟು ನೀವೇ ಬನ್ನಿ ಲಿಂಗಯುತ ಸಮಾಜದ ಮುಖಂಡರ ಮುಂದಕ್ಕೆ ನಮ್ಮ ಸಮಾಜದವರು ಇರುವ ಕೆಡೆ ಯಾವ ಕೆಲಸ ಮಾಡಿದ್ದೀರಾ ? ಎನ್ನುವುದನ್ನು ತೋರಿಸಿ ಯಾರೋ ನಾಲ್ಕು ಜನ ಲಿಂಗಾಯತ ಸಮಾಜದವರನ್ನು ಮುಂದೆ ಇಟ್ಟುಕೊಂಡು ಪತ್ರಿಕಾ ಗೋಷ್ಠಿ ಮಾಡಿಸುತ್ತಿರ, ಮಾತನಾಡಿರುವವರು ಎಷ್ಟು ಜನರನ್ನ ಕರೆದು ಕೊಂಡು ಬರುತ್ತಾರೆ ತೋರಿಸಲಿ.
ಜಿ ಎಸ್ ಪ್ರಸನ್ನ ಕುಮಾರ್ ಶಿವನೇಹಳ್ಳಿಯವರೇ ಎಂ ಎಚ್ ಪಟ್ಟಣದಲ್ಲಿ ಅವರ ಮತ ವಿದೆ, ಅಂತಹದರಲ್ಲಿ ಅವರು ಗುಬ್ಬಿ ತಾಲೂಕಿನವರೇ ಅಲ್ಲ ಎಂದು ಹೇಳುತ್ತಿದ್ದೀರಲ್ಲ ನೀವು ಅದೆಷ್ಟು ಹೇಳಿಕೆ ನೀಡುತ್ತಿರೋ ಅದರ ಡಬ್ಬಲ್ ಹೇಳಿಕೆಯನ್ನು ನಾವು ನೀಡುತ್ತೇವೆ ಫೋನ್ ಮಾಡಿ ಪ್ರಸನ್ನಕುಮಾರ್ ಅವರನ್ನು ಬೆದರಿಕೆ ಹಾಕುವ ತಂತ್ರಕ್ಕೆ ನೀವು ಮುಂದಾದರೆ ನಮಗೂ ಗೊತ್ತಿದೆ ಏನು ಮಾಡಬೇಕು ಎಂದು ಸಮುದಾಯ ವಿಚಾರ ಇಟ್ಟುಕೊಂಡು ರಾಜಕೀಯ ಮಾಡಲು ಮುಂದಾದರೆ ಮುಂದೆ ನೀವೇ ಅನುಭವಿಸಬೇಕಾಗುತ್ತದೆ. ಜಿಎಸ್ ಪ್ರಸನ್ನ ಕುಮಾರ್ ಸಿದ್ದರಾಮ ಜಯಂತಿಗೆ 50 ಲಕ್ಷ ದೇಣಿಗೆ ನೀಡಿದ್ದಾರೆ ತಾಲೂಕಿನಲ್ಲಿ ಐದರಿಂದ ಆರು ಸಾವಿರ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಂಪ್ಯೂಟರ್ ಶಿಕ್ಷಣ ಕಲಿಸಿದ್ದಾರೆ, ನಮ್ಮ ಸಂಸ್ಕೃತಿ ಸಂಸ್ಕಾರ ಬಳಸಲು ಗುಬ್ಬಿ ಸರಿ ಮಾಡುವ ಮೂಲಕ ರೈತರಿಗೆ ಉರಿದುಂಬಿಸುವ ಕೆಲಸ ಮಾಡಿದ್ದಾರೆ, ನೀವು ಇಪ್ಪತ್ತು ವರ್ಷ ಶಾಸಕರಾಗಿ ನಮ್ಮ ಸಮಾಜದ ಕಾರ್ಯಕ್ರಮಕ್ಕೆ ಎಷ್ಟನೀಡಿದ್ದೀರಿ ಹೇಳಿ ಎಂದರು. ಕಾಂಗ್ರೆಸ್ ಪಕ್ಷ ಪ್ರಸನ್ನಕುಮಾರ್ ಗೆ ಟಿಕೆಟ್ ನೀಡಿದರೆ ಇಡೀ ನಮ್ಮ ಸಮುದಾಯ ಅವರ ಹಿಂದೆ ಹೋಗುತ್ತದೆ. ಇಲ್ಲಿಗೇ ನಿಮ್ಮ ಹೇಳಿಕೆಗಳನ್ನು ನಿಲ್ಲಿಸದೆ ಹೋದರೆ ಮುಂದಿನ ದಿನಮಾನದಲ್ಲಿ ನೇರ ನೇರವಾಗಿಯೇ ತಾಲೂಕಿನಲ್ಲಿ ಪ್ರತಿ ಹೇಳಿಕೆಗಳು ಶುರುವಾಗುತ್ತವೆ ಎಂಬುದನ್ನ ಮರೆಯದಿರಿ ಎಂದು ಎಚ್ಚರಿಕೆಯನ್ನು ನೀಡಿದರು.
ವೀರಶೈವ ಮುಖಂಡ ಜಗದೀಶ್ ಮಾತನಾಡಿ ರಾಜ್ಯದಲ್ಲೇ ಅತಿ ಹಿರಿಯ ಸಂಸದರಾದ ಜಿಎಸ್ ಬಸವರಾಜ್ ವಿರುದ್ಧ ಮಾತನಾಡಿದಾಗಲೇ ವೀರಶೈವ ಸಮಾಜ ನಿಮ್ಮ ವಿರುದ್ಧ ನಿಲ್ಲಬೇಕಾಗಿತ್ತು ಆದರೆ ತಾಲೂಕಿನಲ್ಲಿ ಯಾವುದೇ ರೀತಿಯ ಸಮಸ್ಯೆ ಆಗಬಾರದೆಂದು ನಾವೆಲ್ಲ ಸುಮ್ಮನಿದ್ದೆವೇ ಮತ್ತೆ ಈಗ ಪ್ರಸನ್ನ ಕುಮಾರ್ ವಿರುದ್ಧ ಬೇಕಾಬಿಟ್ಟಿಯಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಇಲ್ಲದೆ ಹೋದರೆ ನಾವು ಸಹ ಬೀದಿಗೆ ನಿಲ್ಲುತ್ತೇವೆ ಎಂದು ತಿಳಿಸಿದರು.
ವೀರಶೈವ ಮುಖಂಡ ಮಲ್ಲೇಶ್ ಮಾತನಾಡಿ ನಾಲ್ಕು ಬಾರಿಯಿಂದ ಶಾಸಕರಾಗಿದ್ದೀರಾ ನಿಮಗೆ ಬೇಕಾದವರಿಗೆ ವೈಯಕ್ತಿಕವಾಗಿ ಸಹಾಯ ಮಾಡಿದ್ದೀರಾ ಹೊಸಕೆರೆ ಗ್ರಾಮದಲ್ಲಿ ಯಾವ ಅಭಿವೃದ್ಧಿ ಮಾಡಿದ್ದೀರಾ ಹೊಸ ಆಸ್ಪತ್ರೆ ನಿರ್ಮಾಣ ಮಾಡಬಹುದಿತ್ತು ಆದರೂ ಮಾಡಿಲ್ಲ ನಿಮ್ಮನ್ನು ಒಲಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಒಂದು ಸಮಾಜದ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಲಿ ಎಂದರು.
ಇದೇ ಸಂದರ್ಭದಲ್ಲಿ ಆನಂದ್ ಕುಮಾರ್, ಬಸವರಾಜು, ಪಣಗಾರ್ ಈಶ್ವರಪ್ಪ, ಜಗದೀಶ್, ಉಮೇಶ್ ಪಣಗಾರ್, ಜಯಣ್ಣ, ಪಂಚಾಕ್ಷರಿ ಸೇರಿದಂತೆ ಇನ್ನಿತರರು ಹಾಜರಿದ್ದರು.