ಮಧುಗಿರಿ : ತಾಲ್ಲೂಕು ಮಿಡಿಗೇಶಿ ಹೋಬಳಿಯ ನೇರಳೆಕೆರೆ ಪಂಚಾಯಿತಿ ವ್ಯಾಪ್ತಿ ವೀರಾಪುರ ಗ್ರಾಮದ ಇಂದು ಬೆಳಗಿನ ಜಾವ ರಾಮೇಗೌಡ ಎಂಬುವರ ಜಮೀನಿನಲ್ಲಿ ಬೋನಿಗೆ ಬಿದ್ದಿರುವು1 ವರ್ಷದ ಗಂಡು ಚಿರತೆ.
ಹಲವಾರು ದಿನಗಳಿಂದ ಚಿರತೆ ಹಾವಳಿಯಿಂದಾಗಿ ರೈತರು ಸಾಕಿರುವ ಪ್ರಾಣಿಗಳನ್ನು ತಿಂದು ಹಾಕಿತ್ತು
ಚಿರತೆ ಹಿಡಿಯುವಂತೆ ರೈತರು ಅರಣ್ಯ ಇಲಾಖೆಗೆ ಒತ್ತಾಯ ಮಾಡಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಬೋನಿನನ ಒಳಗೆ ನಾಯಿಯನ್ನು ಹಾಕಿ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿ ರವಿ ,ಹಾಗೂ ಮುತ್ತುರಾಜ್ ಇದ್ದರು.
ಚಿರತೆಯನ್ನು ಬನ್ನೇರುಘಟ್ಟ ಅರಣ್ಯಾಲಯಕ್ಕೆ ಕಳುಹಿಸಲಾಗುವುದು ಎಂದು ಅರಣ್ಯ ಅಧಿಕಾರಿ ರವಿ ತಿಳಿಸಿದ್ದಾರೆ.
ವರದಿ :
ರಘುನಾಥ್ ಮಧುಗಿರಿ