ಮದುಗಿರಿ : ಕಸಬಾ ಹೋಬಳಿ ಸಿದ್ದಾಪುರ ಕೆರೆ ಏರಿ ಹತ್ತಿರ ಟ್ಯಾಕ್ಟರ್ ಹಾಗೂ ದ್ವಿಚಕ್ರ ವಾಹನ ಮತ್ತು ಆಟೋರಿಕ್ಷಾ ನಡುವೆ ಅಪಘಾತ ಸಂಭವಿಸಿದ ಘಟನೆ ನಡೆದಿದೆ.
ದ್ವಿಚಕ್ರ ವಾಹನದ ಸವಾರನಾದ ಕೊರಟಗೆರೆ ತಾಲ್ಲೂಕು ವೆಂಟಾಪುರ ಗ್ರಾಮದ ನಿವಾಸಿ ರಂಗನಾಥ್ ರವರಿಗೆ ಕಾಲು ಮುರಿದು ತಲೆಗೆ ತೀರುವ ಪೆಟ್ಟಾಗಿ ಗಂಭೀರ ಸ್ಥಿತಿಯಲ್ಲಿದ್ದು ಅದೇ ರೀತಿ ಆಟೋ ಚಾಲಕ ಸೇರಿದಂತೆ ಮೂರು ಮಂದಿಗೆ ತೀವ್ರ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ 5 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಸಿ ಪಿ ಐ ಸರದಾರ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ
ವರದಿ : ರಘುನಾಥ್ ಮದುಗಿರಿ