ಮಾಜಿ ಡಿಸಿಎಂ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಬಿತ್ತು ಬೀಗ: ಬೆಸ್ಕಾಂ – ಗ್ರಾ ಪಂ ಚೆಲ್ಲಾಟ ಕುಡಿಯುವ ನೀರಿಗೆ ಪರದಾಟ.

ಬೆಸ್ಕಾಂ-ಗ್ರಾಪಂಚೆಲ್ಲಾಟದಿಂದ
ಆರೋಗ್ಯಕ್ಕೆ ಕುತ್ತುನೀರಿನ ಘಟಕಗಳ ವಿದ್ಯುತ್ಸಂ ಪರ್ಕ ಕಡಿತ
..

ಆಡಳಿತ ವೈಫಲ್ಯಕ್ಕೆ ಆರೋಗ್ಯ ಆತಂಕ..
ಬೆಸ್ಕಾಂ-ಗ್ರಾಪಂನ ಚೆಲ್ಲಾಟ-ಕುಡಿಯುವ ನೀರಿಗೆ ಪರದಾಟ
..

67ಲಕ್ಷ ವಿದ್ಯುತ್ ಶುಲ್ಕಕ್ಕೆ 17ಲಕ್ಷ ಬಡ್ಡಿ.. ಕೊರಟಗೆರೆಯಲ್ಲಿ ಮಾತ್ರ ಬೆಸ್ಕಾಂ ಕಾರ್ಯಚರಣೆ ಏಕೆ..?
ಕೊರಟಗೆರೆ:- 2019-20ರಲ್ಲಿ 24ಗ್ರಾಪಂಗಳ 154ಘಟಕದ ವಿದ್ಯುತ್ ಬಾಕಿ ಶುಲ್ಕ 64ಸಾವಿರ ಮಾತ್ರ.. 154ಘಟಕ ನಿರ್ವಹಣೆ ಮಾಡುತ್ತೀದ್ದ ಆಂದ್ರಮೂಲದ ಗುತ್ತಿಗೆದಾರರು 5ವರ್ಷದ ಅವಧಿಯು 2020ಕ್ಕೆ ಮುಕ್ತಾಯ.. ಬೆಸ್ಕಾಂ ಇಲಾಖೆಗೆ 4ವರ್ಷದಿಂದ ವಿದ್ಯುತ್ ಶುಲ್ಕ ಪಾವತಿಸದೇ ಪ್ರಸ್ತುತ ವಿದ್ಯುತ್ ಶುಲ್ಕ 67ಲಕ್ಷಕ್ಕೆ ಏರಿದೆ..67ಲಕ್ಷಕ್ಕೆ ಬಡ್ಡಿಯೇ ಈಗ 17ಲಕ್ಷ ಬಂದಿದ್ದು ಒಟ್ಟು 84ಲಕ್ಷ ಬಾಕಿ ಕಟ್ಟಬೇಕಿದೆ. ಬೆಸ್ಕಾಂ ಮತ್ತು ಗ್ರಾಪಂ ಚೆಲ್ಲಾಟಕ್ಕೆ ಕೊರಟಗೆರೆಯಲ್ಲಿ ಈಗ ಶುದ್ದ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ 24ಗ್ರಾಪಂಯಲ್ಲಿ 154 ಶುದ್ದ ಕುಡಿಯುವ ನೀರಿನ ಘಟಕಗಳಿವೆ. 154ಘಟಕಗಳಲ್ಲಿ 20ಘಟಕ ಗ್ರಾಪಂಗೆ ಹಸ್ತಾಂತರ ಆಗಿವೆ. 77ಘಟಕಗಳಿಗೆ ಮರುಟೆಂಡರ್‌ಗೆ ಆಹ್ವಾನಿಸಿ 2ವರ್ಷ ಕಳೆದಿದೆ.ಇನ್ನೂಳಿದ ಬಹುತೇಕ ನೀರಿನ ಘಟಕ ದುಸ್ಥಿತಿಗೆ ತಲುಪಿವೆ. ಘಟಕಗಳ ನಿರ್ವಹಣೆ ವಿಚಾರದಲ್ಲಿ ಅಧಿಕಾರಿಗಳ ಆಡಳಿತ ವೈಫಲ್ಯ ಕಂಡುಬAದಿದೆ. 4ವರ್ಷದಿಂದ ಬಾಕಿ ಉಳಿದಿರುವ 84ಲಕ್ಷ ವಿದ್ಯುತ್ಶು ಶುಲ್ಕ ಪಾವತಿಸದ ಪರಿಣಾಮ ಈಗ ಬೆಸ್ಕಾಂ ಇಲಾಖೆಯು ವಿದ್ಯುತ್ ಸಂಪರ್ಕ ಕಡಿತ ಮಾಡಿದೆ.4ವರ್ಷದಿಂದ 24ಗ್ರಾಪಂಯ 154ಶುದ್ದ ನೀರಿನ ಘಟಕಗಳ ವಸೂಲಾತಿ ಹಣದ ಅಂಕಿಅAಶ ಎಷ್ಟು..ಜನರಿಂದ ವಸೂಲಿ ಮಾಡಿದ ಲಕ್ಷಾಂತರ ರೂ ಹಣದಲ್ಲಿ ವಿದ್ಯುತ್ ಶುಲ್ಕ ಪಾವತಿಗೆ ತಡಮಾಡಿದ್ದೇಕೆ.4ವರ್ಷದಿಂದ ಬೆಸ್ಕಾಂ ಇಲಾಖೆಯು 154ಘಟಕಗಳ ವಿದ್ಯುತ್ ಶುಲ್ಕ ವಸೂಲಿ ಮಾಡದೇ ಹಾಗೇ ಬಿಡಲು ಕಾರಣವೇನು. ಗ್ರಾಪಂ ಪಿಡಿಓ ನಮಗೇ ಗೊತ್ತೇ ಇಲ್ಲ ಅಂತಾರೇ.. ಬೆಸ್ಕಾಂ ಸಿಬ್ಬಂದಿ ನಾವು ಪ್ರತಿ ತಿಂಗಳು ಬಿಲ್ ಕೊಟ್ಟಿದ್ದೀವಿ ಅಂತಾರೇ. ಗ್ರಾಪಂ ಮತ್ತು ಬೆಸ್ಕಾಂ ಚೆಲ್ಲಾಟದಿಂದ ಈಗ ಜನರ ಆರೋಗ್ಯಕ್ಕೆ ಆತಂಕ ಎದುರಾಗಿದೆ.

.
ನೀರಿಗೆ ಕತ್ತರಿ ಹಾಕಿದ ಬೆಸ್ಕಾಂ ಇಲಾಖೆ..ಎಲೆರಾಂಪುರ, ನೀಲಗೊಂಡನಹಳ್ಳಿ, ಹಂಚಿಹಳ್ಳಿ, ಹುಲೀಕುಂಟೆ ಗ್ರಾಪಂ ವ್ಯಾಪ್ತಿಯ ಬೋಡಬಂಡೇನಹಳ್ಳಿ, ಕೆರೆಯಾಗಲಹಳ್ಳಿ ಡಿ.ನಾಗೇನಹಳ್ಳಿ, ತಂಗನಹಳ್ಳಿ, ದೊಡ್ಡಪಾಲನಹಳ್ಳಿ, ಬೈಚೇನಹಳ್ಳಿ,ಎಲೆರಾಂಪುರ, ಐ.ಕೆ.ಕಾಲೋನಿ,ಅಳಾಲಸಂದ್ರ, ಎ.ವೆಂಕಟಾಪುರ,ಕಾಮರಾಜನಹಳ್ಳಿ, ಗೌರಗಾನಹಳ್ಳಿ ಗ್ರಾಮದ ನೀರಿನ ಘಟಕದ ವಿದ್ಯುತ್ ಸಂಪರ್ಕಕಡಿತವಾದ ಪರಿಣಾಮ ೩ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ನೀರು ಮರೀಚಿಕೆ ಆಗಿದೆ.ಜನರ ಆರೋಗ್ಯ ಏರುಪೇರು ಸಾಧ್ಯತೆ..ಪ್ಲೋರೈಡ್‌ಯುಕ್ತ ನೀರಿನ ಸಮಸ್ಯೆ ನಿವಾರಣೆಗೆ ಕೊರಟಗೆರೆ ತಾಲೂಕಿನಲ್ಲಿ 154ಶುದ್ದ ನೀರಿನ ಘಟಕ ನಿರ್ಮಾಣವಾಗಿದೆ.
ಬೆಸ್ಕಾಂ ಮತ್ತು ಗ್ರಾಪಂ ಅಧಿಕಾರಿಗಳ ಚೆಲ್ಲಾಟದಿಂದ 154ಘಟಕಗಳಿಗೆ ವಿದ್ಯುತ್ಸಂ ಪರ್ಕ ಕಡಿತಕ್ಕೆ ಬೆಸ್ಕಾಂ ಇಲಾಖೆ ಮುಂದಾಗಿದೆ. 7ವರ್ಷದಿಂದ ಶುದ್ದಕುಡಿಯುವ ನೀರು ಬಳಕೆ ಮಾಡುತ್ತೀರುವ 50ಸಾವಿರಕ್ಕೂ ಅಧಿಕ.ಕುಟುಂಬಗಳಿಗೆ ನೀರಿನ ಸಮಸ್ಯೆ ಎದುರಾಗಲಿದೆ. ಮತ್ತೇ ಪ್ಲೋರೈಡ್‌ಯುಕ್ತ ನೀರಿನ ಸೇವನೆಯಿಂದ ಜನರ ಆರೋಗ್ಯದಲ್ಲಿ ಏರುಪೇರು ಉಂಟಾದರೇ ಜವಾಬ್ದಾರಿ ಯಾರು ಎಂಬುದೇಯಕ್ಷಪ್ರಶ್ನೆ..?

ಬೆಸ್ಕಾಂ ಇಲಾಖೆ, 24ಗ್ರಾಪಂ ಪಿಡಿಓ, ತಾಪಂ ಇಓ, ಗ್ರಾಮೀಣ ಕುಡಿಯುವ ನೀರು ಎಇಇ ಮತ್ತು ಕೊರಟಗೆರೆ ಆಡಳಿತ ವೈಫಲ್ಯದಿಂದ ಕೊರಟಗೆರೆ ಕ್ಷೇತ್ರದ ಜನರಿಗೆ ಶುದ್ದ ನೀರಿನ ಸಮಸ್ಯೆ ಎದುರಾಗಿದೆ. ಪಾವಗಡದಲ್ಲಿ 4 ಕೋಟಿಗೂ ಅಧಿಕ ನೀರಿನ ವಿದ್ಯುತ್‌ಶುಲ್ಕ ಬಾಕಿಇದೆ. ತುಮಕೂರು ಜಿಲ್ಲೆಯಲ್ಲಿಯೇ ಇಲ್ಲದಂತಹ ಬೆಸ್ಕಾಂ ಇಲಾಖೆಯ ವಸೂಲಾತಿ ಕಾರ್ಯಚರಣೆ ಕೊರಟಗೆರೆಯಲ್ಲೇ ಮಾತ್ರ ಏಕೆ ಎಂಬುದಕ್ಕೆ ಶಾಸಕ, ಸಂಸದ, ಸಚಿವರೇ ಕೊರಟಗೆರೆಯ ಜನರಿಗೆ ಉತ್ತರ ನೀಡಬೇಕಿದೆ.


67ಲಕ್ಷ ವಿದ್ಯುತ್ ಶುಲ್ಕಕ್ಕೆ 17ಲಕ್ಷ ಬಡ್ಡಿ.. 2019-20ನೇ ಸಾಲಿನಲ್ಲಿ 154 ಶುದ್ದ ಕುಡಿಯುವ ನೀರಿನ ಘಟಕಗಳ ವಿದ್ಯುತ್ ಶುಲ್ಕದ ಬಾಕಿ ಕೇವಲ 64,624ರೂ ಮಾತ್ರ. 2020-21 2022-23 ಮತ್ತು 2022-23 ರ ಅಕ್ಟೋಬರ್ ವೇಳೆ 154 ಘಟಕಗಳ ವಿದ್ಯುತ್ ಶುಲ್ಕ67.16.194 ದಾಟಿದೆ. ಇದಕ್ಕೆ ಬಡ್ಡಿ 17.31,475ರೂ ಸೇರಿ ಒಟ್ಟು 84.47670ರೂ ಆಗಿದೆ. 4ವರ್ಷದಿಂದ ವಿದ್ಯುತ್ಶು ಶುಲ್ಕ ಕಟ್ಟಿಸಿಕೊಳ್ಳದೇ ಬೆಸ್ಕಾಂ ಇಲಾಖೆಯ ಮೌನಕ್ಕೆ ಕಾರಣವೇನು. ಘಟಕದಿಂದ ವಸೂಲಿ ಮಾಡಿರುವ ಲಕ್ಷಾಂತರ ಹಣ ಗ್ರಾಪಂಯು ಯಾರಬಳಿ ಶೇಖರಣೆ ಮಾಡಿದೆ ಎಂಬುದು ತನಿಖೆಯಿಂದ ಹೊರಗಡೆ ಬರಬೇಕಿದೆ.


ಸರಕಾರಿ ಕಚೇರಿಯ ವಿದ್ಯುತ್ ಶುಲ್ಕ ಬಾಕಿಇದ್ರೇ ಮುಲಾಜಿಲ್ಲದೇ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತೇವೆ. ಈಗ ನಾವು ಯಾರ ಸಬೂಬು ಕೇಳೊದಿಲ್ಲ. ನಾವು ಯಾರಿಗೂ ಕಾಯುವ ಪ್ರಶ್ನೆಯು ಇಲ್ಲ. ನಮ್ಮ ಎಚ್ಚರಿಕೆಯ ನೊಟೀಸ್‌ಗೆ ಗ್ರಾಪಂಯಿAದ ಉತ್ತರ ಬಂದಿಲ್ಲ. ನೀರಿನ ಸಮಸ್ಯೆ ಆದರೇ ಘಟಕಗಳ ಮೇಲ್ವಿಚಾರಕರೇ ಜವಾಬ್ದಾರಿ.
ಜಗದೀಶ್. ಇಇ. ಬೆಸ್ಕಾಂ ಇಲಾಖೆ. ಮಧುಗಿರಿ
ನಮ್ಮ ಮನವಿಗೆ ಸ್ಪಂಧಿಸದೇ ಕೊರಟಗೆರೆಯಲ್ಲಿ ಮಾತ್ರ ಬೆಸ್ಕಾಂ ಇಲಾಖೆ ಕಾರ್ಯಚರಣೆ ನಡೆಸುತ್ತೀದೆ. ಜಿಲ್ಲಾಧಿಕಾರಿ ಕಚೇರಿಯ ವಿಶೇಷ ತಂಡ ಈಗಾಗಲೇ ಜಿಲ್ಲೆಯಲ್ಲಿ ಘಟಕದ ಮಾಹಿತಿ ಪಡೆಯುತ್ತೀದೆ. ಕುಡಿಯುವ ನೀರಿಗೆ ಸಮಸ್ಯೆ ಆದರೇ ಅದರ ಹೊಣೆ ಯಾರು.ಕೊರಟಗೆರೆ ಸಮಸ್ಯೆಯ ಬಗ್ಗೆ

ತುಮಕೂರು ಜಿಪಂ ಸಿಇಓ ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತರುತ್ತೇನೆ.
ರವೀಶ್. ಇಇ. ತುಮಕೂರು
ಕೊರಟಗೆರೆಯ ನೀರಿನ ಘಟಕಗಳ ವಿದ್ಯುತ್ ಸಂಪರ್ಕ ಕಡಿತದ ಬಗ್ಗೆ ತಕ್ಷಣ ಪರಿಶೀಲನೆ ನಡೆಸುವಂತೆ ತುಮಕೂರು ಜಿಪಂ ಸಿಇಓಗೆ ಸೂಚಿಸುತ್ತೇನೆ. ಮೇಲ್ವಿಚಾರಣೆ ವಹಿಸಿರುವ ಗ್ರಾಪಂಯಿAದ ಬೆಸ್ಕಾಂ ಇಲಾಖೆಗೆ ಪ್ರತಿತಿಂಗಳು ಬೆಸ್ಕಾಂ ಇಲಾಖೆಗೆ ವಿದ್ಯುತ್ಶು ಶುಲ್ಕ ಪಾವತಿಸಬೇಕು. ಕುಡಿಯುವ ನೀರಿನ ವಿಚಾರದಲ್ಲಿ ಅಧಿಕಾರಿವರ್ಗ ಜಾಗೃತಿವಹಿಸಬೇಕಿದೆ.
ಅತೀಕ್.ಎಲ್.ಕೆ. ಅಪರ ಮುಖ್ಯ ಕಾರ್ಯದರ್ಶಿ.
ಗ್ರಾಮೀಣಾಭಿವೃದ್ದಿ ಇಲಾಖೆ

ವಿಶೇಷ ವರದಿ :- ಹರೀಶ್ ಬಾಬು ಬಿ. ಹೆಚ್ ಕೊರಟಗೆರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!