ಪಾವಗಡ: ಪೆರೋಲ್ ರಜೆಯ ಮೇಲೆ ಪರಪ್ಪನ ಅಗ್ರಹಾರದಿಂದ ಹೊರಬಂದಿದ್ದ ಆರೋಪಿ ನರಸಿಂಹರೆಡ್ಡಿ(46) ಎಂಬುವರು ತಲೆಮರೆಸಿಕೊಂಡಿದ್ದಾರೆ ಎಂದು ಪಟ್ಟಣ ಠಾಣೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಜೆಯ ಮೇಲೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದ ಆರೋಪಿ ಸ್ವಯಂ ಶರಣಾಗಬೇಕಿತ್ತು. ಆದರೆ ಆಂಧ್ರದ ಅನಂತಪುರ ಜಿಲ್ಲೆ ರಾಪ್ತಾಡು ಮಂಡಲಂ ಪುಲಕೊಂಡ ಗ್ರಾಮದ ನರಸಿಂರೆಡ್ಡಿ ತಲೆಮರೆಸಿಕೊಂಡಿದ್ದಾರೆ. ಪಟ್ಟಣದಲ್ಲಿ 2013ರಲ್ಲಿ ನಡದೆ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಸಜಾ ಬಂಧಿಯಾಗಿದ್ದರು. ಆರೋಪಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಪಟ್ಟಣ ಠಾಣೆಯ ದೂರವಾಣಿ ಸಂಖ್ಯೆ 08136-245666, ಪೊಲೀಸ್ ಇನ್ ಸ್ಪೆಕ್ಟರ್ ಮೊಬೈಲ್ ಸಂಖ್ಯೆ 9480802941 ಗೆ ಮಾಹಿತಿ ನೀಡುವಂತೆ ಪೊಲೀಸ್ ಇನ್ ಸ್ಪೆಕ್ಟರ ಅಜಯಸಾರಥಿ ತಿಳಿಸಿದ್ದಾರೆ