ಗ್ರಾಮ ಪಂಚಾಯಿತಿಯ ಮುಂದೆ ಶವವಿಟ್ಟು ಪ್ರತಿಭಟನೆ

ಶವ ಸಂಸ್ಕಾರ ಮಾಡಲು ಜಾಗವಿಲ್ಲದೆ ಕುಟುಂಬಸ್ಥರ ಪರದಾಟ.

ಎಸ್.ಸಿ.ಎಸ್.ಟಿ.ಹಾಗೂ ಸಾರ್ವಜನಿಕ ಸ್ಮಾಶನ ಸಹ ಇಲ್ಲದಂತಾಗಿದೆ.ಎಂದು ಆಕ್ರೋಶ.

ಅಂತ್ಯಸಂಸ್ಕಾರ ಮಾಡಲು ಜಾಗವಿಲ್ಲದೆ ಕಳೆದ 24 ಘಂಟೆಯಿಂದ ಮನೆಯಲ್ಲಿಯೇ ಉಳಿದ ಮೃತ ದೇಹ

ಕೊರಟಗೆರೆ ತಾಲ್ಲೂಕಿನ ನೀಲಗೋಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐ.ಕೆ. ಕಾಲೋನಿಯಲ್ಲಿ ಘಟನೆ.

ಗ್ರಾಮದ ವೆಂಕಟಮ್ಮ (೮೦)ವರ್ಷದ ವೃದ್ದೆ ಬಾನುವಾರ ಬೇಳಿಗ್ಗೆ ಸಾವನ್ನಪ್ಪಿದ್ದಾರೆ.ಆದರೆ ಇದುವರೆಗೂ ಸಾರ್ವಜನಿಕ ಸ್ಮಾಶನ ಇಲ್ಲದೆ ಮನೆಯಲ್ಲಿಯೇ ಮೃತ ದೇಹವನ್ನು ಇಟ್ಟುಕೊಂಡು ಜಾಗಕ್ಕಾಗಿ ಪರದಾಡುತ್ತಿದ್ದಾರೆ.

ಇಷ್ಟೆಲ್ಲಾ ಆದರೂ ಯಾವ ಅಧಿಕಾರಿಯೂ ಇತ್ತಾ ತಿರುಗಿ ಸಹ ನೋಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ನೀಲಗೊಂಡನಹಳ್ಳಿ ಗ್ರಾಮ ಪಂಚಾಯತ್ ಮುಂದೆ ಶವ ಸಂಸ್ಕಾರ ಮಾಡುತ್ತೆವೆ ಎಂದು ಸ್ಥಳಿಯ ಸಾರ್ವಜನಿಕರು ಹೇಳಿಕೆ ನೀಡಿದ್ದಾರೆ

ಸುಮಾರು ವರ್ಷಗಳಿಂದ ಸ್ಮಶಾನಕ್ಕೆ ಭೂಮಿ ಗುರುತಿಸಿಕೊಡಲು ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿದ್ದಾರೆ.

ಇದಕ್ಕೆ ಅಧಿಕಾರಿಗಳು ಎಲ್ಲೊ ಬಂಡೆ ಇರುವ ಕಡೆ ಅಲ್ಲಿ ಗುಂಡಿ ತೆಗೆಯಲು ಆಗದ ಜಾಗದಲ್ಲಿ ಗುರುತಿಸಿದ್ದಾರೆ.

ಹಳ್ಳಿಯ ಬಡ ರೈತರ ಮೇಲೆ ಇಷ್ಷೊಂದು ತಾತ್ಸಾರ ಮನೋಭಾವ ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ನಾವು ಸುಮಾರು 70 ವರ್ಷಗಳಿಂದ ಇಲ್ಲಿ ವಾಸವಿದ್ದವೆ ಆದರೆ ನಮಗೆ ವಾಸ ಮಾಡಲು ಮನೆ ಇಲ್ಲಾ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಸ್ಮಶಾನ ಇಲ್ಲ ನಮ್ಮನ್ನು ಬಡವರೆಂದು ಹಾಗೂ ಜಾಮೀನು ಇಲ್ಲದವರೆಂದು ಕಡೆಗಣಿಸಿದ್ದಾರೆಯೇ?

ಈ ಎಲ್ಲಾ ಮೂಲಭೂತ ಸೌಕರ್ಯ ಪಡೆಯಲು ನಾವು ಯಾರ ಕಾಲಿಗೆ ಬಿಳಬೇಕು.ಎಂದು ತಮ್ಮ ಅಳಲನ್ನು ತೋಡಿಕೊಂಡರು.

ವರದಿ :-ಹರೀಶ್ ಬಾಬು ಬಿ. ಹೆಚ್ ಕೊರಟಗೆರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!