ಹೊಸಕೆರೆ : ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಹಲಸಿನ ನಾಗೇನಹಳ್ಳಿ ಗ್ರಾಮದ ಸಿದ್ದರಾಮಯ್ಯ ಎಂಬುವರ ಪುತ್ರ ಯಶವಂತ್ ಎಂಬ ವಿದ್ಯಾರ್ಥಿ ಮೈಸೂರು ಕೇಂದ್ರಿಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದು, ಉಡುಪಿಯಲ್ಲಿ ಇತ್ತೀಚಿಗೆ ನಡೆದ ಹತ್ತು ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ದಕ್ಷಿಣ ಭಾರತ ರಾಷ್ವ್ರೀಯ ಮಟ್ಟದ ಕರಾಟೆಯಲ್ಲಿ ಚಿನ್ನದ ಪದಕ ಮತ್ತು ಕಟ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಶಾಲೆಗೆ ಹಾಗೂ ಊರಿಗೆ ಕೀರ್ತಿ ತಂದಿದ್ದಾನೆ. ಯಶವಂತ್ ಗೆ ತಾಲ್ಲೂಕ್ ಪಂಚಾಯಿತಿ ಸದಸ್ಯ ಅ.ನ.ಲಿಂಗಪ್ಪ ಹಾಗೂ ಊರಿನ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.