ಕೊರಟಗೆರೆ, : ಕೊರಟೆಗೆರೆ ತಾಲೂಕು ಆಸ್ಪತ್ರೆಯನ್ನು 1೦೦ ಹಾಸಿಗೆಯ ಉನ್ನತ ಗುಣಮಟ್ಟದ ಆಸ್ಪತ್ರೆಯಾಗಿ ಮೇಲ್ದರ್ಜೆಗೆರಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಭರವಸೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಇಂದು ಜಿಲ್ಲೆಯ ಕೊರಟೆಗೆರೆ ತಾಲೂಕಿನ ದೊಡ್ಡಸಾಗ್ಗೆರೆ ಗ್ರಾಮದಲ್ಲಿ ರೂ 262ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವ್ಯೆದ್ಯಾಧಿಕಾರಿಗಳ ವಸತಿ ಗೃಹವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕೊರಟಗೆರೆ ತಾಲೂಕಿನ 5೦ ಹಾಸಿಗೆಗಳ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ 1೦೦ ಹಾಸಿಗೆಯ ತಾಲೂಕು ಆಸ್ಪತ್ರೆಯಾಗಿ ಅಭಿವೃದ್ಧಿ ಪಡಿಸಲಾಗುವುದು, ಕೋವಿಡ್-19ರ ಸಂದರ್ಭದಲ್ಲಿ ಮಂದಿರ, ಮಸೀದಿ, ಚರ್ಚುಗಳನ್ನು ಮುಚ್ಚಿದರು, ಕೊನೆಗೆ ಕೆಲಸ ಮಾಡುವ ಕಚೇರಿಗಳು ಮತ್ತು ಮಕ್ಕಳು ಓದುವ ಶಾಲೆಗಳನ್ನೂ ಮುಚ್ಚಲಾಯಿತು, ಆದರೆ ಆಸ್ಪತ್ರೆಗಳನ್ನು ಮಾತ್ರ ದಿನದ 24 ಗಂಟೆಯೂ ತೆರೆಯಲಾಗಿತ್ತು ಎಂಬುದನ್ನು ಮರೆಯಬಾರದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಈ ವ್ಯಾಪ್ತಿಯಲ್ಲಿ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಚಿಕಿತ್ಸಾ ಕೇಂದ್ರವನ್ನು 24ಗಂಟೆಗಳ ಕಾಲ ಕಾರ್ಯನಿರ್ವಹಿಸುವಂತೆ ಕ್ರಮ ವಹಿಸಲಾಗಿದೆ, ಪ್ರಸ್ತುತ ವರ್ಷ ರಾಜ್ಯದಾದ್ಯಂತ 1೦೦ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನು ಸಮುದಾಯ ಚಿಕಿತ್ಸಾ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗಿದೆ, ಆರೋಗ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಶಸ್ತ್ಯದಲ್ಲಿ ಸರ್ಕಾರ ವಿಶೇಷ ಒತ್ತು ನೀಡುತ್ತಿದೆ ಎಂದರು.
2.10ಕೋಟಿ ವೆಚ್ಚದಲ್ಲಿ ಬುಕ್ಕಾಪಟ್ಟಣ ಗ್ರಾಮದ ನೂತನ : ನಂತರ ಸಚಿವರು ಕೊರಟೆಗೆರೆ ತಾಲೂಕಿನ ಬುಕ್ಕಾಪಟ್ಟಣ ಗ್ರಾಮದಲ್ಲಿ ರೂ 2.10ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಿ.ಹೆಚ್.ಸಿ.ಒ ಗೃಹವನ್ನು ಲೋಕಾರ್ಪಣೆಗೊಳಿಸಿದರು.

12.40 ಕೋಟಿ ವೆಚ್ಚದಲ್ಲಿ ಸಮುದಾಯ ಚಿಕಿತ್ಸಾ ಕೇಂದ್ರವಾಗಿ ಮೇಲ್ದರ್ಜೆಗೆ : ಕೊರಟಗೆರೆ ತಾಲೂಕಿನ ತೋವಿನಕೆರೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು, ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಸಚಿವರು ಶಂಕುಸ್ಥಾಪನೆ ನೆರವೇರಿಸಿದರು, 2023ರ ಜನವರಿ ತಿಂಗಳಿನಲ್ಲಿ ಕಾಮಗಾರಿ ಆರಂಭವಾಗಲಿದೆ, 12.40ಕೋಟಿ ವೆಚ್ಚದಲ್ಲಿ ಸಮುದಾಯ ಚಿಕಿತ್ಸಾ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲಾಗುವುದು, ಸಮುದಾಯ ಚಿಕಿತ್ಸಾ ಕೇಂದ್ರಗಳಲ್ಲಿ 8 ಮಂದಿ ತಜ್ಞ ವೈದ್ಯರಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವಹಿಲಿರುವ ಕಾರಣ ಅನಾರೋಗ್ಯ ಪೀಡಿತರಿಗೆ ಇದು ಹೆಚ್ಚಿನ ಸಹಕಾರಿಯಾಗಲಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ 1೦ ನಮ್ಮ ಕ್ಲಿನಿಕ್ ಗಳನ್ನು ನೀಡಲಾಗಿದೆ: ರಾಜ್ಯದಲ್ಲಿ ಒಂದೇ ದಿನ ಏಕ ಕಾಲದಲ್ಲಿ 114 ನಮ್ಮ ಕ್ಲಿನಿಕ್ ಗಳನ್ನು ಉದ್ಘಾಟಿಸುವ ಮೂಲಕ ಸರ್ಕಾರ ಇತಿಹಾಸ ಸೃಷ್ಟಿಸಿದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರು ನಗರ ಹಾಗೂ ಪಟ್ಟಣ ಪ್ರದೇಶದ ಬಡ ದುರ್ಬಲ ವರ್ಗದ ಜನರಿಗೆ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ‘ನಮ್ಮ ಕ್ಲಿನಿಕ್’ಗಳನ್ನು ರಾಜ್ಯದಾದ್ಯಂತ ಆರಂಭಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಅಮೂಲಾಗ್ರ ಸುಧಾರಣೆಗೆ ಕಾರಣವಾಗಿದ್ದಾರೆ
ನಗರ ಪ್ರದೇಶದ ಬಡ, ದುರ್ಬಲ ವರ್ಗದ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ನಗರ ಪ್ರದೇಶದ ವ್ಯಾಪ್ತಿಯಲ್ಲಿ 438 ‘ನಮ್ಮ ಕ್ಲಿನಿಕ್ ‘ಗಳನ್ನು ಆರಂಭಿಸಲು ಸರ್ಕಾರ ಯೋಜನೆ ರೂಪಿಸಿದೆ, ನಗರದ ಜನಸಂಖ್ಯೆಗೆ ಅನುಗುಣವಾಗಿ ಉತ್ತಮ ಸೇವೆ ನೀಡುವ ನಮ್ಮ ಕ್ಲಿನಿಕ್‌ಗಳ ಸ್ಥಾಪಿಸಲಾಗುತ್ತಿದ್ದು, ನಗರಗಳ ಆರೋಗ್ಯ ವ್ಯವಸ್ಥೆಯ ಸುಧಾರಣೆಯ ನಿಟ್ಟಿನಲ್ಲಿ ಅತಿ ದೊಡ್ಡ ಹೆಜ್ಜೆಯಾಗಿವೆ, ಜನರು ನಿಯಮಿತವಾಗಿ ನಮ್ಮ ಕ್ಲಿನಿಕ್‌ಗೆ ಬೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆಯ ಸೇವೆ ಪಡೆಯಬೇಕು, ನಮ್ಮ ಸರ್ಕಾರ ಉಚಿತ ಔಷಧಗಳ ಹಾಗೂ ಪ್ರಯೋಗಾಲಯ ಸೇವೆ ನೀಡುವುದರೊಂದಿಗೆ ೆ ಹಾಗೂ ಚಿಕಿತ್ಸೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಸುಧಾರಣೆ ತರುತ್ತಿದೆ ಎಂದರು.

ಗ್ರಾಮೀಣ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ : ರಾಜ್ಯದ್ಯಂತ ಗುಣಮಟ್ಟದ ಆಸ್ಪತ್ರೆಯನ್ನು ಗ್ರಾಮೀಣ ಭಾಗಕ್ಕೆ ನೀಡಿರುವುದು ಸಂತಸ ತಂದಿದೆ, ಸರ್ಕಾರವು ಶಿಕ್ಷಣ ಮತ್ತು ಆರೋಗ್ಯಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದ್ದು, ಕೋವಿಡ್ ನಂತರ ಮೂಲ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ, ಇದರಲ್ಲಿಯೇ ಆರೋಗ್ಯ ಕ್ಷೇಮ ಕೇಂದ್ರಗಳನ್ನು ಸ್ಥಾಪಿಸಲಾಗಿದೆ, 7 ಸಾವಿರ ಸಿಎಚ್‌ಒ ಗಳನ್ನು ಕಳೆದ ಒಂದು ವರ್ಷದಲ್ಲಿ ನೇಮಿಸಲಾಗಿದೆ. ಈ ಕೇಂದ್ರಗಳಲ್ಲಿ ಸುಮಾರು 14 ಪರೀಕ್ಷೆಗಳಿಗೆ ಅವಕಾಶವಿದೆ, ಹಾಗೂ 5೦ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಲಿದೆ ಎಂದು ಸಚಿವರು ವಿವರಿಸಿದರು.
ಕೋವಿಡ್ ನಿಯಮ ಪಾಲಿಸಲು ಕರೆ: ರಾಜ್ಯದಲ್ಲಿ 9೦೦ ಪ್ರಾಥಮಿಕ ಆರೋಗ್ಯ ಕೇಂದ್ರಗಳು ದಿನದ 24 ಗಂಟೆಯು ಕಾರ್ಯನಿರ್ವಹಿಸುತ್ತಿವೆ, ಮತ್ತೆ ಕೋವಿಡ್ ಬರುವ ಆತಂಕ ಹೆಚ್ಚಾಗಿದೆ, ಚೀನಾ ದೇಶದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬೂಸ್ಟರ್ ಡೋಸ್ ಪಡೆಯದವರು ಕೂಡಲೇ ಪಡೆಯಬೇಕು, ಜನಸಂದಣಿ ಹೆಚ್ಚಾಗಿರುವ ಜಾಗದಲ್ಲಿ ಎಲ್ಲರೂ ತಪ್ಪದೆ ಮಾಸ್ಕ್ ಧರಿಸಬೇಕು ಎಂದು ಕರೆ ನೀಡಿದರು.
ಸಾರ್ವಜನಿಕರು ಕನಿಷ್ಟ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿ: ಅನಾರೋಗ್ಯ ಕಾಣಿಸಿದ ನಂತರ ಆಸ್ಪತ್ರೆಗೆ ಬೇಟಿ ನೀಡಿದಾರಯಿತು ಎಂಬ ಮನಸ್ಥಿತಿ ತುಂಬಾ ಅಪಾಯಕಾರಿಯಾಗಿದ್ದು, ಗ್ರಾಮೀಣ ಜನರೂ ವರ್ಷಕ್ಕೆ ಒಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸುವುದನ್ನು ರೂಡಿಸಿಕೊಳ್ಳಬೇಕು, 3೦ ವರ್ಷ ಮೇಲ್ಪಟ್ಟ ಎಲ್ಲರೂ ಅದರಲ್ಲಿಯೂ ಮುಖ್ಯವಾಗಿ ಮಹಿಳೆಯರು ಆಗ್ಗಾಗ್ಗೆ ತಪಾಸಣೆಗೆ ಒಳಪಡಬೇಕು. ಇದರಿಂದ ಆರಂಭಿಕ ಹಂತದಲ್ಲಿಯೇ ಹಲವು ಕಾಯಿಲೆಗಳನ್ನು ಗುರ್ತಿಸಿ, ಚಿಕಿತ್ಸೆ ನೀಡುವುದರಿಂದ ಸಂಪೂರ್ಣ ಗುಣಮುಖವಾಗಲು ಸಹಕಾರಿಯಾಗಲಿದೆ ಎಂದರು.
ಡಾ. ಸುಧಾಕರ್ ಆರೋಗ್ಯ ಸಚಿವರಾಗಿ ಅತ್ಯುತ್ತಮ ಕಾರ್ಯನಿರ್ವಹಣೆ : ಪರಮೇಶ್ವರ್ ಮುಕ್ತಕಂಠದಿAದ ಶ್ಲಾಘನೆ
ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಪರಮೇಶ್ವರ್, ಸಚಿವ ಸುಧಾಕರ್ ಅವರ ಕಾರ್ಯವೈಖರಿಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು, ಸಚಿವ ಸುಧಾಕರ್ ಅವರ ಪ್ರಮಾಣೀಕ ಕರ್ತವ್ಯ ನಿರ್ವಹಣೆಯಿಂದಾಗಿ ಕೋವಿಡ್-19 ಹಿಮ್ಮೆಟ್ಟಿಸಲು ಸಾಧ್ಯವಾಯಿತು, ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ಅವರು ಕೈಗೊಂಡ ಕ್ರಮಗಳಿಂದ ಇವತ್ತು ಅತ್ಯುತ್ತಮ ಮಟ್ಟದ ಸೌಲಭ್ಯಗಳು ಸಾರ್ವಜನಿಕರಿಗೆ ಸಿಗುತ್ತಿವೆ, ಈಗಲೂ ಮತ್ತೆ ಕೋವಿಡ್ ಹರಡುವ ಸೂಚನೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸೂಚನೆ ನೀಡುತ್ತಿದ್ದಾರೆ. ಅದನ್ನು ಎಲ್ಕರೂ ಪಾಲಿಸಬೇಕು, ಪಕ್ಷಾತೀತವಾಗಿ ಅವರ ಕೆಲಸಕ್ಕೆ ಮೆಚ್ಚುಗೆ ಹೇಳಲೇಬೇಕಿದೆ ಎಂದರು.
ಜಂಟಿ ವಿಭಾಗೀಯ ನಿರ್ದೇಶಕ ಮುರಳಿ ಕೃಷ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಂಜುನಾಥ್ ಡಿ.ಎನ್, ಜಿಲ್ಲಾ ಸರ್ಜನ್ ಡಾ.ವೀಣಾ, ಆಸ್ಪತ್ರೆ ನಿರ್ಮಾಣಕ್ಕೆ ನಿವೇಶನ ದಾನ ಮಾಡಿದ ಸುಜಯ ಪಿ. ಮಂಜುನಾಥ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಕೇಶವ ರಾಜ್ ಜಿ. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ: ಸನತ್‌ಕುಮಾರ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಮೋಹನದಾಸ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಖಾ ತಹಸಿಲ್ದಾರ್, ಮುಖಂಡರಾಧ ಅನಿಲ್ ಕುಮಾರ್, ರಾಮಯ್ಯ ಸೇರಿದಂತೆ ಇತರೆ ಜನಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.
ಬಿಬಿಎಂಪಿ ಅಧಿಕಾರಿಗಳೊಂದಿಗೆ ಕೋವಿಡ್ ಸಭೆ
ತುಮಕೂರು: ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನ ಊಟದ ವಿರಾಮದ ಸಮಯದಲ್ಲಿ ಅಧಿಕಾರಿಗಳ ಸಭೆ ಕರೆದು ಕೋವಿಡ್ ಮಾರ್ಗಸೂಚಿಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಕೊರಟಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಅಧಿಕಾರಿಗಳ ಸಭೆ ಕರೆದು ಬೆಂಗಳೂರು ಮಹಾ ನಗರದ ಅಲ್ಲಿನ ಸ್ಥಿತಿಗತಿಗಳು ಮತ್ತು ಅಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚಿರಿಕಾ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುವದು. ಅಲ್ಲದೆ ಬೂಸ್ಟರ್ ಡೋಸ್ ನೀಡುವ ಕುರಿತು ಮುಖ್ಯಮಂತ್ರಿಗಳ ಸೂಚನೆಯಂತೆ ಸಂಬAಧಿಸಿದ ಎಲ್ಲ ಅಧಿಕಾರಿಗಳನ್ನು ಕರೆದು ಸಭೆ ಮಾಡಲಾಗುವುದು ಎಂದರು.
ಅಗತ್ಯವಿದ್ದರೆ ಸಭೆಯಲ್ಲಿಯೇ ಮಾರ್ಗಸೂಚಿ ಹೊರಡಿಸಲಾಗುವುದು, ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಜೊತೆ ಪ್ರತಿನಿತ್ಯ ನಿಕಟ ಸಂಪರ್ಕದಲ್ಲಿದ್ದೇವೆ., ಅಲ್ಲಿನ ನಿಯಮಾವಳಿಯಂತೆ ಇಲ್ಲಿ ನಿಯಮಗಳನ್ನು ಪಾಲಿಸಲಾಗುವುದು, ಅಧಿಕೃತವಾಗಿ ಯಾವುದೇ ಮಾರ್ಗಸೂಚಿ ಇನ್ನೂ ಬಂದಿಲ್ಲ ಮಾರ್ಗಸೂಚಿ ಬಂದ ನಂತರ ಅದರಂತೆ ಪಾಲಿಸಲಾಗುವುದು, ಜನಸಂದಣಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದರಿಂದ ಯಾವುದೇ ತೊಂದರೆಯಿಲ್ಲ, ಮಾಸ್ಕ್ ಧರಿಸುವುದರಿಂದ ಆರೋಗ್ಯವನ್ನು ಅವರು ಕಾಪಾಡಿಕೊಂಡAತಾಗುತ್ತದೆ.