ಅಟ್ಟಿಕಾ ಬಾಬು ಸುಳ್ಳಿನ ಸರದಾರ : ಜೆಡಿಎಸ್‌ ಅಭ್ಯರ್ಥಿ ಎನ್.ಗೋವಿಂದರಾಜು ಟಾಂಗ್

ತುಮಕೂರು : ನಗರದ ಬಿಜಿಎಸ್ ವೃತ್ತದಲ್ಲಿ ಅಟ್ಟಿಕಾ ಬಾಬು ಹಾಗೂ ಜೆಡಿಎಸ್ ಅಧಿಕೃತ ಅಭ್ಯರ್ಥಿ ಎನ್.ಗೋವಿಂದರಾಜು ಬೆಂಬಲಿಗರ ನಡುವೆ ನೆನ್ನೆ ರಾತ್ರಿ ಗಲಾಟೆ ನಡೆದಿತ್ತು. ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವ ಅಟ್ಟಿಕಾ ಬಾಬು ವಿರುದ್ಧ ಜೆಡಿಎಸ್ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಅಟ್ಟಿಕಾ ಬಾಬು ಮತ್ತು ಅವರ ಬೆಂಬಲಿಗರು ತುಮಕೂರು ನಗರದಲ್ಲಿ ಅಧಿಕೃತ ಅಭ್ಯರ್ಥಿ ಎನ್.ಗೋವಿಂದರಾಜು ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಹೀಗಾಗಿ ಜೆಡಿಎಸ್ ಕಾರ್ಯಕರ್ತರು ಅಟ್ಟಿಕಾ ಬಾಬು ಕಾರನ್ನು ತಡೆದು ನಿಮ್ಮ ಬಳಿ ಯಾವುದೇ ದಾಖಲೆಗಳಿದ್ದರೂ ಬಿಡುಗಡೆ ಮಾಡಿ ಎಂದು ಪ್ರಶ್ನಿಸಿದ್ದಾರೆ.ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಟ್ಟು ದಾಖಲೆ ಇಟ್ಟು ಮಾತನಾಡಿ ಎಂದು ಕಾರಿಗೆ ಮುತ್ತಿಗೆ ಹಾಕಿದ್ದಾರೆ.

ಬೊಮ್ಮನಹಳ್ಳಿ ಅಟ್ಟಿಕಾ ಬಾಬು ಸುಳ್ಳಿನ ಸರದಾರ, ತುಮಕೂರು ನಗರಕ್ಕೆ ನಾನೆ ಜೆಡಿಎಸ್ ಅಧಿಕೃತ ಅಭ್ಯರ್ಥಿ,ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಎನ್.ಗೋವಿಂದರಾಜು ಪ್ರಜಾಮನ ವೆಬ್ ನ್ಯೂಸ್ ಗೆ ಸ್ಪಷ್ಟಪಡಿಸಿದ್ದಾರೆ.

ಅಟ್ಟಿಕಾ ಬಾಬು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದು, ತುಮಕೂರು ನಗರದ ಜನತೆ ಗೋವಿಂದರಾಜು ಪರವಾಗಿದ್ದಾರೆ.ಜೆಡಿಎಸ್ ಕಾರ್ಯಕರ್ತರು ಹಾಗೂ ನನ್ನ ಬೆಂಬಲಿಗರು ಸುಳ್ಳು ಹೇಳುವ ಬದಲು ದಾಖಲೆ ನೀಡಿ ಎಂದು ಅಟ್ಟಿಕಾ ಬಾಬುಗೆ ಘೇರಾವ್ ಹಾಕಿದ್ದಾರೆ. ಈ ಸಂದರ್ಭದಲ್ಲಿ ನನ್ನ ಪರವಾಗಿ ಘೋಷಣೆ ಕೂಗಿರಬಹುದು,ಆದರೆ ಯಾವುದೇ ಗಲಾಟೆ ನಡೆಸಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಕೂಡ ಅಟ್ಟಿಕಾ ಬಾಬು ನಮ್ಮ ನಾಯಕರಾದ ಶಾಸಕ ಡಿ.ಸಿ ಗೌರಿಶಂಕರ್ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಣ ನೀಡಿದ್ದಾರೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನಮ್ಮ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸಲಿ. ನಾಯಕರಿಗೆ ಗೌರವ ನೀಡುವುದನ್ನು ಕಲಿಯಬೇಕೆಂದು ತಾಕೀತು ಮಾಡಿದರು.

ಪಕ್ಷದ ವರಿಷ್ಟರು ತುಮಕೂರು ನಗರ ಕ್ಷೇತ್ರಕ್ಕೆ ಎನ್. ಗೋವಿಂದರಾಜು ಸೇರಿದಂತೆ ಒಟ್ಟು 93 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದರೂ ಅಟ್ಟಿಕಾ ಬಾಬು ಅವರು ತುಮಕೂರು ನಗರಕ್ಕೆ ಬಂದು ಪ್ರಚಾರ ಮಾಡುತ್ತಾ ಕಾರ್ಯಕರ್ತರಲ್ಲಿ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಜಿಲ್ಲಾ ಜೆಡಿಎಸ್‌ ವಕ್ತಾರ ಮಧುಸೂದನ್ ಹೇಳಿದ್ದಾರೆ.

ಅಟ್ಟಿಕಾ ಬಾಬು ಪದೇ ಪದೇ ತುಮಕೂರಿಗೆ ಆಗಮಿಸಿ ನಾನೇ ಅಧಿಕೃತ ಅಭ್ಯರ್ಥಿ, ನನಗೆ ಕಾಂಗ್ರೆಸ್ ಮುಖಂಡರ ಬೆಂಬಲವಿದೆ. ತುಮಕೂರು ನಗರ ಕ್ಷೇತ್ರಕ್ಕೆ ನನಗೆ ಟಿಕೆಟ್ ನೀಡುತ್ತಾರೆಂದು ಪಕ್ಷದ ವರಿಷ್ಠರು ಹೇಳಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿ ಹೋಗಿದ್ದರು. ಇದರಿಂದ ನಗರದ ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದ್ದು,ನಮ್ಮ ಸರ್ವೋಚ್ಚ ನಾಯಕರಾದ ಹೆಚ್‌.ಡಿ ದೇವೇಗೌಡರು ಹಾಗೂ ಹೆಚ್.ಡಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಪಟ್ಟಿಯೇ ಅಂತಿಮ ಯಾರು ಗೊಂದಲ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!