ಪಂಚರತ್ನ ಯೋಜನೆಯ ತಳಹದಿಯಾದ ಜೆಡಿಎಸ್ ಪ್ರಾದೇಶಿಕ ಪಕ್ಷ : ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು

ಗುಬ್ಬಿ: ಬಡ ಮಧ್ಯಮ ವರ್ಗದ ಜನರ ಮನಮಟ್ಟವ ಯೋಜನೆಗಳ ಸಾಕಾರಕ್ಕೆ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಅಧಿಕಾರ ನೀಡಿ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ಮನವಿ ಮಾಡಿದರು.

ಪಟ್ಟಣದ 8 ವಾರ್ಡ್ ನಲ್ಲಿ ಜೆಡಿಎಸ್ ಪಂಚರತ್ನ ಯೋಜನೆ ವಿವರ ಒಳಗೊಂಡ ಹೊಸ ವರ್ಷದ ಕ್ಯಾಲೆಂಡರ್ ಮನೆ ಮನೆಗೆ ಹಂಚಿಕೆ ಮಾಡುವ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಮಹಿಳೆಯರ ಸಾಲ ಮನ್ನಾ ಹಾಗೂ ಎನ್ ಪಿ ಎಸ್ ನೌಕರರ ಸಮಸ್ಯೆಗೆ ಕೂಡಲೇ ಪರಿಹಾರ ಒದಗಿಸುವ ಕೆಲಸ ಮಾಡುವ ಭರವಸೆ ಕುಮಾರಣ್ಣ ನೀಡಿದ್ದಾರೆ ಎಂದರು.

ರೈತರ ಸ್ವಾಭಿಮಾನ ಬದುಕು ಕಟ್ಟಿಕೊಡಲು ಅತ್ಯಗತ್ಯ ನೀರಾವರಿ ವಿದ್ಯುತ್ ಸಮರ್ಪಕವಾಗಿ ಒದಗಿಸುವ ಹಾಗೂ ಕೋವಿಡ್ ಸಂದರ್ಭದಲ್ಲಿ ಸಂಕಷ್ಟ ಎದುರಿಸಿದ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವ ಕೆಲಸಕ್ಕೂ ಕುಮಾರಣ್ಣ ಚಾಲನೆ ನೀಡಿದ್ದಾರೆ ಎಂದ ಅವರು ದೇವೇಗೌಡರ ರೈತರ ಕಾಳಜಿಗೆ ಪೂರಕವಾದ ಯೋಜನೆ ಪರಿಕಲ್ಪನೆ ಅನುಷ್ಠಾನಕ್ಕೆ ಅಧಿಕಾರ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಒಲವು ಕಂಡ ಸಾಕಷ್ಟು ಕ್ಷೇತ್ರದಲ್ಲಿ ಗೆಲ್ಲುವ ನಿರೀಕ್ಷೆ ಇದೆ. ಹಲವು ಸಂಸ್ಥೆಗಳು ನಡೆಸಿದ ಸರ್ವೇ ಕೂಡಾ ಜೆಡಿಎಸ್ ಪರವಿದೆ. ಕುಮಾರಣ್ಣ ಮುಂದಿನ ಸಿಎಂ ಎಂಬುದರಲ್ಲಿ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಗಂಗಣ್ಣ, ಡಿ.ರಘು, ಗಿರೀಶ್, ನಾಗರಾಜು, ಗಂಗಾಧರ ಇತರರು ಇದ್ದರು.

ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!