ಬಾದಾಮಿ: 2023 ರ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಘನಿ ಧನಿ ಗಾಲಿ ಜನಾರ್ಧನ ರೆಡ್ಡಿ ಬಿ. ಜೆ. ಪಿ.ತೊರೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ವನ್ನೂ ಕಟ್ಟಿದ್ದಗಿದೆ.
ಇಂಥ ಹ ಸಂದರ್ಭದಲ್ಲಿ ಮೂಲತಃ ಬಾದಾಮಿ ತಾಲೂಕಿನ ವರೆ ಆದಂತಹ ಹಾಲಿ ಶ್ರೀರಾಮ ಸೇನೆಯ ಬಳ್ಳಾರಿ ವಿಭಾಗ ಅಧ್ಯಕ್ಷರಾದ ಸಂಜೀವ ಮರಡಿ ಅವರು ಎಂದು ಬೆಂಗಳೂರಿನಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರನ್ನು ಭೇಟಿ ಮಾಡಿ ಮಾತನಾಡಿ ಚರ್ಚಿಸಿದ್ದು ಬಾದಾಮಿ ಮತಕ್ಷೇತ್ರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ, ಜನಾರ್ಧನ ರೆಡ್ಡಿ ಪಕ್ಷದಿಂದ ಸ್ಪರ್ಧೆ ಮಾಡಬಹುದಾ ಟಿಕೆಟ್ ನೀಡುವ ವಿಚಾರವಾಗಿ ಜನಾರ್ಧನ ರೆಡ್ಡಿ ಮಾತನಾಡಿ ರ ಹುದಾ ಎನ್ನುವ ಹತ್ತು ಹಲವು ಪ್ರಶ್ನೆಗಳು ಈಗ ದುತ್ತೆಂದು ಬಾದಾಮಿ ಮತಕ್ಷೇತ್ರದ ರಾಜಕಾರಣದಲ್ಲಿ ಈಗ ಶುರುವಾಗಿದೆ. ಜನಾರ್ಧನ ರೆಡ್ಡಿ ಅವರ ಹೊಸ ಪಕ್ಷದಿಂದ ಸ್ಪರ್ಧೆ ಮಾಡಿದರೂ ಮಾಡಿಯಾದರೂ ಮಾಡಬಹುದು ಎನ್ನುವುದು ಒಂದು ಕಡೆ ಜನಾಭಿಪ್ರಾಯ ಕೇಳಿ ಬರುತ್ತಿರುವುದನ್ನು ತಳ್ಳಿಹಾಕುವಂತಿಲ್ಲ..
ಒಟ್ಟಾರೆಯಾಗಿ ಜನಾರ್ಧನ ರೆಡ್ಡಿ ಅವರು 2023 ರ ಸಾರ್ವತ್ರಿಕ ಚುನಾವಣೆ ಅಖಾಡಕ್ಕೆ ಹೊಸ ಪಕ್ಷ ದೊಂದಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ತಯಾರಿಯಲ್ಲಿದ್ದಾರೆ ಎನ್ನುವುದು ಅಷ್ಟೇ ಸ್ಪಷ್ಟವಾಗಿ ರುವಂತದ್ದು. ರಾಜಕೀಯದಲ್ಲಿ ಸ್ವಂತ ಪಕ್ಷದಿಂದ ಘನಿ ಧನಿಯ ಘರ್ಜನೆ ಪ್ರಾರಂಭವಾಗಲಿದೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ ಸಾರ್ವಜನಿಕರು ಹಾಗೂ ರಾಜಕಾರಣಿಗಳು.
ವರದಿ:- ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ