ಕೊರಟಗೆರೆ : ಬೋನಿಗೆ ಬಿದ್ದ ಚಿರತೆ

ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಗಳ ಜನರ ನಿದ್ದೆಗೆಡಿಸಿದ್ದ ಚಿರತೆ…

ಬೆಳ್ಳಂಬೆಳಗ್ಗೆ ತಂಗನಹಳ್ಳಿಯ ಬೆಟ್ಟದ ತಪ್ಪಲಿನಲ್ಲಿ ಅರಣ್ಯ ಇಲಾಖೆಯ ಬೊನಿನಲ್ಲಿ ಸೆರೆಸಿಕ್ಕ ಚಿರತೆ …

ಮೂಕ ಪ್ರಾಣಿಗಳು ಹಾಗೂ ಗ್ರಾಮಸ್ಥರ ಮೇಲೆ ಪದೇ ಪದೇ ದಾಳಿ ಮಾಡುತ್ತಿದ್ದ ರಕ್ಕಸ ಚಿರತೆ ಸೆರೆ..

ಕೊರಟಗೆರೆ :-ತಾಲೂಕಿನ ಕೋಳಾಲ ಹೋಬಳಿಯ ನೀಲಗೊಂಡನಹಳ್ಳಿ ಎಲೆರಾಂಪುರ ಗ್ರಾಮ ಪಂಚಾಯಿತಿಯ ಹಲವು ಗ್ರಾಮಗಳ ಗ್ರಾಮಸ್ಥರ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ
ಹಲವು ತಿಂಗಳಿಂದ ನಿದ್ದೆಗೆಡಿಸಿದ್ದ ಐನಾಥಿ ಚಿರತೆ ಬೋನಿನಲ್ಲಿ ಸೆರೆಸಿಕ್ಕಿದೆ..

ಇತ್ತೀಚೆಗಷ್ಟೇ ಇರಕಸಂದ್ರ ಕಾಲೋನಿ ಗ್ರಾಮದ ಹಲವು ಮಕ್ಕಳು ಹಾಗೂ ವೃದ್ಧರ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದ ಚಿರತೆ..

ಚಿರತೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರಿಂದ ಮನವಿ ಮಾಡಿದ್ದರು.

ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಹಳ್ಳಿಗಳಿಗೆ ಭೇಟಿ ನೀಡಿ ಚಿರತೆ ಹೊರಡುವ ಸ್ಥಳಗಳಲ್ಲಿ ಬೋನ್ ಗಳನ್ನು ಇಡುವ ವ್ಯವಸ್ಥೆಯನ್ನು ಮಾಡಿದರು..

ಇಂದು ಬೆಳ್ಳಂಬೆಳಗ್ಗೆ ಇರಕಸಂದ್ರ ಕಾಲೋನಿಯ ತಂಗನಹಳ್ಳಿ ಬೆಟ್ಟದ ತಪ್ಪಲಿನಲ್ಲಿ ಇಟ್ಟ ಬೋನಿನಲ್ಲಿ ಸೆರೆ ಸಿಕ್ಕಿದ್ದು ಹಲವು ಗ್ರಾಮಗಳ ಜನರು ನೆಮ್ಮದಿಯಿಂದ ನಿದ್ದೆ ಮಾಡುವಂತಾಗಿದೆ…

ಬೋನ್ ಇಟ್ಟಿದ್ದ ಸ್ಥಳಕ್ಕೆ ಕೊರಟಗೆರೆ ತಾಲೂಕಿನ ಅರಣ್ಯ ಇಲಾಖೆಯ ಅಧಿಕಾರಿ ಸುರೇಶ್ ಹಾಗೂ ಸಿಬ್ಬಂದಿ ವರ್ಗವು ಭೇಟಿ ನೀಡಿ ಗ್ರಾಮಸ್ಥರು ಯಾವುದೇ ಕಾರಣಕ್ಕೂ ಆತಂಕ ಕೊಡುವುದು ಬೇಡ ಚಿರತೆ ಸೆರೆಸಿಕ್ಕಿದೆ ಗ್ರಾಮಸ್ಥರು ಆರಾಮಾಗಿ ಇರಬಹುದು ಎಂದು ತಿಳಿಸಿದರು…

ನೀಲಗೊಂಡನಹಳ್ಳಿ ಹಾಗೂ ಎಲಿರಾಂಪುರ ಗ್ರಾಮ ಪಂಚಾಯತಿಯ ಸುತ್ತಮುತ್ತ ಗ್ರಾಮಗಳ ಜನರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಧನ್ಯವಾದಗಳು ತಿಳಿಸಿದರು….

ವರದಿ :-ಹರೀಶ್ ಬಾಬು ಬಿ. ಹೆಚ್ ಕೊರಟಗೆರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!