ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಬಕಾರಿ ನಿರೀಕ್ಷಕರಾದ ಶ್ರೀಲತಾ..
ಕೊರಟಗೆರೆ : ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಕುರಂಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರಂಕೋಟೆಯ ಗ್ರಾಮದಲ್ಲಿ ನೂತನವಾಗಿ ಎಂಎಸ್ಐಎಲ್ ಮಧ್ಯದ ಅಂಗಡಿ ತೆರೆಯಲು ಮುಂದಾಗಿರುವ ಅಬಕಾರಿ ಇಲಾಖೆಯ ನಿಲುವನ್ನು ಪ್ರಶ್ನಿಸಿ ಅಬಕಾರಿ ನಿರೀಕ್ಷಕರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕುರಂಕೋಟೆ ಗ್ರಾಮದ ಸುತ್ತ ಮುತ್ತಲಿನ ಗ್ರಾಮಸ್ಥರು ಮತ್ತು ಸ್ತ್ರೀ ಶಕ್ತಿ ಸಂಘದ ಮಹಿಳೆಯರು..
ಕುರಂಕೋಟೆ ಗ್ರಾಮವು ಪುರಾತನ ಇತಿಹಾಸವುಳ್ಳ ಗ್ರಾಮವಾಗಿದ್ದು ಈ ಗ್ರಾಮದಲ್ಲಿ ಶ್ರೀ ದೊಡ್ಡಕಾಯಪ್ಪ (ಅಂಜನೇಯ ಸ್ವಾಮಿಯ) ದೇಗುಲವು ರಾಜ್ಯದಲ್ಲಿಯೇ ಹೆಸರುವಾಸಿಯಾಗಿದ್ದು ರಾಜ್ಯದ ವಿವಿಧ ಭಾಗಗಳಿಂದ ಮತ್ತು ಜಿಲ್ಲೆಯ ವಿವಿಧ ಭಾಗಗಳಿಂದ ಸಹಸ್ರಾರು ಮಂದಿ ಭಕ್ತರು ದೇಗುಲಕ್ಕೆ ಬಂದು ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಹೋಗುತ್ತಾರೆ..
ಎಂ ಎಸ್ ಐ ಎಲ್ ಮಧ್ಯದ ಅಂಗಡಿಯನ್ನು ತೆರೆಯಬಾರದೆಂದು ಗ್ರಾಮದ ಗ್ರಾಮಸ್ಥರು ಮತ್ತು ಮಹಿಳೆಯರು ಬೇಡ ಎಂದು ಅಬಕಾರಿ ನಿರೀಕ್ಷಕರ ಮುಂದೆ ಮನವಿ ಮಾಡಿಕೊಂಡರು ನಂತರ ಮಧ್ಯಪ್ರಿಯರು ನಮ್ಮ ಊರಿನಲ್ಲಿ ಈಗಾಗಲೆ ಅಕ್ರಮ ಮದ್ಯ ಮೂರು ಕಡೆ ಮಾರಾಟ ಮಾಡುತ್ತಿದ್ದಾರೆ ಅಲ್ಲಿ ದುಪ್ಪಟ್ಟು ಹಣ ನೀಡಿ ಮದ್ಯ ಕುಡಿಯುತ್ತಾರೆ. ಆದ್ದರಿಂದ ನಮಗೆ ರಿಯಾಯಿತಿ ದರದಲ್ಲಿ ದೊರೆಯುವುದರಿಂದ ಬೇಕೇ ಬೇಕು ಎಂದು ಮನವಿ ಮಾಡಿಕೊಂಡರು…
ನಂತರ ಸ್ಥಳದಲ್ಲಿದ್ದ ಅಬಕಾರಿ ನಿರೀಕ್ಷಕರಾದ ಶ್ರೀಲತಾ ರವರು ಗ್ರಾಮಸ್ಥರ ಮತ್ತು ಸಾರ್ವಜನಿಕರ ಹವಾಲಿನಂತೆ ಮಹಾಜರ್ ಮಾಡಿ ಪರ-ವಿರೋಧ ಎರಡು ಮನವಿಗಳನ್ನು ಪ್ರತ್ಯೇಕವಾಗಿ ಸಹಿ ಮಾಡಿಸಿ ಮುಖ್ಯ ಅಧಿಕಾರಿಗಳ ಗಮನಕ್ಕೆ ತೊರಲಾಗುವುದೆಂದು ಸಾರ್ವಜನಿಕರಿಗೆ ತಿಳಿಸಿದರು…