ಹೊಸಕೆರೆ : ಶಾಸಕ ಎಸ್ ಆರ್ ಶ್ರೀನಿವಾಸ್ ಎಂ ಎನ್ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 4700 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಾಗಾರಿ ಮಾಡಿದ್ದಾರೆ ಎಂದು ಜೆಡಿಎಸ್ ಉಚ್ಚಾಟಿತ ಅಧ್ಯಕ್ಷ ಗುರುರೇಣುಕರಾಧ್ಯ ತಿಳಿಸಿದರು.
ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಸೋಮಲಾಪುರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾಸಣ್ಣ
ಅಭಿಮಾನಿ ಬಳಗದಿಂದ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಮಾತನಾಡಿದ ಅವರು ಹೊಸಕೆರೆಗೆ ಗ್ರಾಮಕ್ಕೆ 88ಕೋಟಿ ವೆಚ್ಚದಲ್ಲಿ ರಸ್ತೆ ಕಾಮಾಗಾರಿ ಮಾಡಿದ್ದಾರೆ ಜೂತೆಗೆ ಹಾಗಲವಾಡಿ ಹೋಬಳಿಗೆ ಸುಮಾರು ಕೊಳವೆ ಬಾವಿಗಳನ್ನು ಕೊರೆಸಿದ್ದು ರೈತರಿಗೆ ಸಾಗುವಳಿ ಚೀಟಿಯನ್ನು ವಿತರಿಸಿಲಾಗಿದೆ ಅಭಿವೃದ್ದಿ ವಿಚಾರದಲ್ಲಿ ಶಾಸಕರು ಹೆಚ್ಚು ಅಭಿವೃದ್ದಿ ಮಾಡಿದ್ದರಿಂದಲೇ ಗುಬ್ಬಿ ಕ್ಷೇತ್ರದಲ್ಲಿ ನಾಲ್ಕು ಭಾರಿ ಶಾಸಕರಾಗಲು ಮತದಾರರು ಆರ್ಶಿವಾದ ಮಾಡಿದ್ದಾರೆ ಮುಂದೇನು ಸಹ ಗುಬ್ಬಿ ಕ್ಷೇತ್ರದಲ್ಲಿ ಶಾಸಕ ಶ್ರೀನಿವಾಸ್ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ದೇವರಾಜು ಮಾತನಾಡಿ ಶಾಸಕರು ಯಾವ ಪಕ್ಷಕ್ಕೆ ಹೋದರೂ ಸಹ ನಾವೆಲ್ಲರೂ ಸಹ ಬೆಂಬಲ ಕೊಡುತ್ತೇವೆ
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿಲ್ಲ ಈ ಬಾರಿ ಶಾಸಕ ಶ್ರೀನಿವಾಸ್ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಗೆಲ್ಲುವುದು ಶತಸಿದ್ಧ ನಮ್ಮ ದಲಿತ ಸಮುದಾಯಕ್ಕೆ ಎಲ್ಲಾ ರೀತಿಯ ಸಹಕಾರವನ್ನು 20 ವರ್ಷದಿಂದ ನೀಡುತ್ತಿರುವ ಶಾಸಕರು ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ ಅವರು ಎಲ್ಲಿ ನಾವು ಅಲ್ಲಿ ಹೋಗುತ್ತೇವೆ ಎಂದು ತಿಳಿಸಿದರು.
ಕಾಂತರಾಜು ಮಾತನಾಡಿ ಸುಮಾರು 20 ವರ್ಷದಿಂದಲೂ ಶ್ರೀನಿವಾಸ್ ಜೊತೆಯಲ್ಲಿ ನಾವು ಸಾಗುತ್ತಿದ್ದೇವೆ, ಯಾವುದೇ ಜಾತಿ ಧರ್ಮ ಭೇದವಿಲ್ಲದೆ ತಾಲೂಕಿನ ಜೊತೆಯಲ್ಲಿ ನಿರಂತರ ಒಡನಾಟ ಇಟ್ಟುಕೊಂಡಿದ್ದಾರೆ ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳಸಿದಂತಹ ಶಾಸಕರಿಗೆ ಆ ಪಕ್ಷದ ಮುಖಂಡರು ಮೋಸ ಮಾಡಿದ್ದಾರೆ ಆ ಮೋಸಕ್ಕೆ ಸರಿಯಾದ ಪಾಠವನ್ನು ತಾಲೂಕಿನ ಜನರು ಮುಂದಿನ ದಿನದಲ್ಲಿ ಕಲಿಸುತ್ತಾರೆ ವಾಸಣ್ಣ ಎಲ್ಲಿ ಹೋಗುತ್ತಾರೋ ನಾವು ಅಲ್ಲಿಗೆ ಹೋಗುತ್ತೇವೆ, ಗೆಲ್ಲಿಸಿಕೊಂಡು ಬರುತ್ತೇವೆ ಎಂದು ತಿಳಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಸಿದ್ದಗಂಗಯ್ಯ , ಕಾಂತರಾಜು , ಯಶೋಧ ನಾಗರಾಜು , ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ದೇವರಾಜು , ಸಿದ್ದಲಿಂಗಪ್ಪ , ಕಲ್ಲೇಶ್ ಮುಖಂಡರಾದ ಪಾಂಡುರಂಗಯ್ಯ , ಗೋಪಾಲಯ್ಯ , ಕೆ.ಆರ್.ವೆಂಕಟೇಶ್ , ಗುರುರೇಣುಕರಾಧ್ಯ , ಕಲ್ಲೇಶ್ , ಕರಿಬಸವಯ್ಯ , ಮಂಜುನಾಥ್ , ಜುಂಜೇಗೌಡ , ಕೃಷ್ಠಪ್ಪ , ಭಾಗವಹಿಸಿದ್ದರು.
ಇದೇ ಸಂಧರ್ಭದಲ್ಲಿ 200 ಕಾರ್ಯಕರ್ತರು ಜೆಡಿಎಸ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು.