ಅಂಗನವಾಡಿ ಮಕ್ಕಳ ಸಂಸ್ಕಾರ ಶಿಕ್ಷಣಕ್ಕೆ ಪಂಚರತ್ನ ಯೋಜನೆ ಪೂರಕ : ಎಪಿಎಂಸಿ ಮಾಜಿ ಸದಸ್ಯ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್

ಗುಬ್ಬಿ: ಮಕ್ಕಳ ಪೂರ್ವ ಶಿಕ್ಷಣಕ್ಕೆ ಅಂಗನವಾಡಿ ಕೇಂದ್ರ ಮೊದಲ ಮೆಟ್ಟಿಲು ಎನಿಸಿದ್ದು ಸಂಸ್ಕಾರ ಶಿಕ್ಷಣವನ್ನು ಉಚಿತವಾಗಿ ಕಲಿಯಲು ಪೂರಕ ವಾತಾವರಣ ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆ ಅತ್ಯುತ್ತಮ ಸಹಕಾರಿಯಾಗಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ತಿಳಿಸಿದರು.

ತಾಲ್ಲೂಕಿನ ಕಸಬ ಹೋಬಳಿ ಪ್ರಭುವನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಸಮವಸ್ತ್ರ ವಿತರಣೆ, ಗರ್ಭಿಣಿ ಬಾಣಂತಿಯರಿಗೆ ಪೌಷ್ಟಿಕ ಆಹಾರ ವಿತರಣೆ ಹಾಗೂ ನಿವೃತ್ತ ಅಂಗನವಾಡಿ ಸಹಾಯಕಿ ಲಕ್ಷ್ಮಮ್ಮ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು ಬಡಜನ ಪರ ಕಾಳಜಿಯ ಕುಮಾರಣ್ಣ ಅವರು ಉಚಿತ ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ ಎಂದರು.

ಅಂಗನವಾಡಿ ಶಿಕ್ಷಣ ಸಣ್ಣ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ. ಬಡವರನ್ನು ಮೇಲೆತ್ತುವ ಸಮಾಜದ ಮುಖ್ಯವಾಹಿನಿಗೆ ತರಲು ಶಿಕ್ಷಣವೇ ಅವಶ್ಯ ಎಂಬುದು ತಿಳಿದು ನಾನು ಸಹ ಬಡ ಮಕ್ಕಳ ಶಿಕ್ಷಣಕ್ಕೆ ಕೈಲಾದ ಸಹಾಯ ಮಾಡುತಿದ್ದೇನೆ ಎಂದ ಅವರು ಮನೆಯಲ್ಲೇ ಸಣ್ಣ ಮಕ್ಕಳನ್ನು ಸುಧಾರಿಸುವುದು ಕಷ್ಟ. ಅಂತಹ ಮಕ್ಕಳಿಗೆ ಶಿಕ್ಷಣ ನೀಡುವ ಕಾಯಕ ಶಿಕ್ಷಕರು ಈ ಕೇಂದ್ರದಲ್ಲಿ ನಡೆಸಿರುವುದು ಮೆಚ್ಚುವಂತದ್ದು. ಇಂತಹ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದ ಅಭಿವೃದ್ಧಿಗೆ ಸ್ಥಳೀಯರು ಸಹಕಾರ ನೀಡಬೇಕು ಎಂದರು.

ಕಸಬಾ ಹೋಬಳಿಯ ಅಡಗೂರು ಪಂಚಾಯಿತಿ ವ್ಯಾಪ್ತಿಯ ಈ ಪ್ರಭುವನಹಳ್ಳಿ ಗ್ರಾಮದಲ್ಲಿ ಬಡವರು ಮಧ್ಯಮ ವರ್ಗದವರು ಅದರಲ್ಲಿ ರೈತ ಸಮುದಾಯ ಹೆಚ್ಚಿದೆ. ಇಂತಹ ಗ್ರಾಮಸ್ಥರ ಮೂಲಕ ಶಿಕ್ಷಣ ಆರೋಗ್ಯ ಕ್ಷೇತ್ರ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮ ಮಾಡುವ ಜೊತೆಗೆ ಮಾದರಿ ಗ್ರಾಮ ಎನಿಸಿಕೊಳ್ಳುವ ಕೆಲಸ ಮಾಡಲು ಚುನಾಯಿತ ಪ್ರತಿನಿಧಿಗಳು ಮುಂದಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಅವರು ವೈಯಕ್ತಿಕವಾಗಿ ಅಂಗನವಾಡಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಮಾಡಿದರು.

ವೇದಿಕೆಯಲ್ಲಿ ಅಡಗೂರು ಗ್ರಾಪಂ ಸದಸ್ಯರಾದ ಜಗದೀಶ್, ಚಂದ್ರಕಲಾ, ಮಾಜಿ ಅಧ್ಯಕ್ಷ ಶಿವರುದ್ರಪ್ಪ, ಮುಖಂಡರಾದ ಬಸವರಾಜು, ಶ್ರೀರಂಗಪ್ಪ, ರಾಜಣ್ಣ, ಅಂಗನವಾಡಿ ಮೇಲ್ವಿಚಾರಕಿ ಹುಚ್ಚರಂಗಮ್ಮ, ಶಿಕ್ಷಕಿ ಕಮಲಮ್ಮ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!