ಗುಬ್ಬಿ: ಪಟ್ಟಣದ ವು ಇತಿಹಾಸ ಪ್ರಸಿದ್ದ ಶ್ರೀ ಬೇಟೆರಾಯಸ್ವಾಮಿ ದೇವಾಲಯದಲ್ಲಿ ಜ.02 ರಂದು ವೈಕುಂಠ ಏಕಾದಶಿ ಹಾಗೂ ವೈಕುಂಠ ದ್ವಾರ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ.
ಮುಂಜಾನೆ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ಗೋವು ಪೂಜೆ ಜೊತೆಗೆ ವೈಕುಂಠ ದ್ವಾರ ಮೂಲಕ ಸ್ವಾಮಿ ದರ್ಶನ ಪಡೆಯಲು ಅನುವು ಮಾಡಲಾಗುವುದು. ನಂತರ ತೀರ್ಥ ಪ್ರಸಾದ ವಿನಿಯೋಗ ಸಮಿತಿಯಿಂದ ನಡೆಯಲಿದೆ. ಸಂಜೆ ಭಜನೆ ಕಾರ್ಯಕ್ರಮ ರಾತ್ರಿ 8 ಗಂಟೆಗೆ ಹದಿನೆಂಟು ಕೋಮಿನ ಮುಖಂಡರ ಸಮ್ಮುಖದಲ್ಲಿ ಮಹಾಮಂಗಳಾರತಿ ನಡೆಯಲಿದೆ.
ದಿನವಿಡೀ ನಡೆಯುವ ಪೂಜಾ ವಿಧಿಗೆ ಆಗಮಿಸುವ ಭಕ್ತರು ಕೋವಿಡ್ ನಿಯಮಾನುಸಾರ ಸಾಮಾಜಿಕ ಅಂತರ ಕಾದು ಮಾಸ್ಕ್ ಧರಿಸಿ ದರ್ಶನ ಪಡೆಯಲು ಸಮಿತಿ ಮನವಿ ಮಾಡಿದೆ.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.