ತುಮಕೂರು ನಗರದಲ್ಲಿ ಪಾರ್ಕುಗಳು ಮುಚ್ಚುವ ಹುನ್ನಾರ ನಡೆದಿದೆಯೇ?

ತುಮಕೂರು: ಪಾರ್ಕುಗಳೇ ಇರದ ತುಮಕೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ನೂರಾರು ಪಾರ್ಕುಗಳನ್ನು ಅಭಿವೃದ್ಧಿ ಪಡಿಸಲಾಯಿತು ಅದರಲ್ಲಿ ಹೆಚ್ಚಿನ ಪಾರ್ಕುಗಳು ವಿದ್ಯುತ್ ಪ್ರಸರಣ ತಂತಿಗಳು ಹಾದು ಹೋದ ಜಾಗದಲ್ಲೇ ನಿರ್ಮಾಣ ಮಾಡಲಾಗಿತ್ತು ಮತ್ತು ಸಾಕಷ್ಟು ಹಣ ವಿನಿಯೋಗ ಮಾಡಿ ಅವುಗಳ ಅಭಿವೃದ್ಧಿಪಡಿಸಲಾಗಿತ್ತು.
ಆದರೆ ಇತ್ತೀಚಿಗೆ ಕೆಇಬಿ ಆದೇಶದ ಅನ್ವಯ ಎನ್ನುವ ಹೆಸರಿನಲ್ಲಿ ತುಮಕೂರು ಮಹಾನಗರ ಪಾಲಿಕೆ ಇಂತಹ ಪಾರ್ಕುಗಳನ್ನು ಮುಚ್ಚುವ ಕೆಲಸ ಮಾಡಿದೆಯೇ ಎಂಬ ಅನುಮಾನಕ್ಕೆ ಕುವೆಂಪು ನಗರದ (ತುಮಕೂರು ಯೂನಿವರ್ಸಿಟಿ ಹಿಂಭಾಗ) ಪಾರ್ಕು ಮುಚ್ಚಿರುವುದು ಪುಷ್ಟಿಕೊಡುತ್ತದೆ.


ಅಪಾಯಕಾರಿ ಜಾಗದಲ್ಲಿ ಪಾರ್ಕು ನಿರ್ಮಿಸುವ ಮತ್ತು ಅದನ್ನು ಅಭಿವೃದ್ಧಿಪಡಿಸುವ ಮೊದಲು ಇದರ ಜ್ಞಾನ ಮಹಾನಗರ ಪಾಲಿಕೆಗೆ ಇರಲಿಲ್ಲವೇ? ಎಂದು ನಾಗರೀಕರ ಆರೋಪವಾಗಿದೆ.

ಇದೇ ವಿದ್ಯುತ್ ಪ್ರಸರಣ ತಂತಿ ಹಾದು ಹೋಗಿರುವ ಜಾಗದಲ್ಲಿ ಅನೇಕ ಮನೆಗಳು, ಮನೆಗಳ ಕಾಂಪೌಂಡ್ ಗಳು ನಿರ್ಮಾಣವಾಗಿ ಅತಿಕ್ರಮವಾಗಿದೆ. ಹಾಗಾದರೆ ಅವರಿಗೆ ಅಪಾಯವಿಲ್ಲವೇ ಅಥವಾ ಅಂತಹ ಮನೆಗಳನ್ನು ಮುಚ್ಚಿಸುವ, ಕೆಡವುವ ಕೆಲಸ ಮಹಾನಗರ ಪಾಲಿಕೆ ಮಾಡುವುದೇ?
ಇದಕ್ಕೆ ಸೂಕ್ತ ಪರಿಹಾರ ಕಂಡುಕೊಂಡು ಪಾರ್ಕುಗಳನ್ನು ಉಳಿಸುವ ಕೆಲಸವಾಗಲಿ ಎಂದು ನಾಗರೀಕರ ಅಭಿಪ್ರಾಯ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!