ಬೂತ್ ವಿಜಯ ಅಭಿಯಾನದಲ್ಲಿ ಪೇಜ್ ಪ್ರಮುಖ್ ಜವಾಬ್ದಾರಿ ಬಹು ಮುಖ್ಯ : ಪಪಂ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ

ಗುಬ್ಬಿ: ಪ್ರತಿ ಬೂತ್ ಮಟ್ಟದಲ್ಲಿ ವಿಜಯ ಅಭಿಯಾನ ಮೂಲಕ ಎಲ್ಲಾ ಮತದಾರರನ್ನು ತಲುಪಿ ಬಿಜೆಪಿ ಸಾಧನೆ ತಿಳಿಸಿ ಮತಯಾಚನೆ ಮಾಡುವಲ್ಲಿ ಪೇಜ್ ಪ್ರಮುಖ್ ಪಾತ್ರ ಬಹು ಮುಖ್ಯ ಎಂದು ಪಪಂ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ತಿಳಿಸಿದರು.

ಪಟ್ಟಣದ 3 ನೇ ವಾರ್ಡ್ ನಲ್ಲಿ ಬಿಜೆಪಿ ನಗರ ಘಟಕ ಆಯೋಜಿಸಿದ್ದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಜನವರಿ 2 ರಿಂದ 12 ರವರೆಗೆ ಈ ಅಭಿಯಾನ ನಡೆಯಲಿದ್ದು 50 ಲಕ್ಷ ಮನೆಗಳ ಮೇಲೆ ಬಿಜೆಪಿ ಬಾವುಟ ಹಾರಿಸಿ 150 ಸ್ಥಾನಗಳ ದಕ್ಕಿಸಿಕೊಳ್ಳುವ ಸಾಧನೆಯ ಕಾರ್ಯಕ್ರಮ ಇದಾಗಿದೆ ಎಂದರು.

ಪ್ರತಿಯೊಬ್ಬ ಕಾರ್ಯಕರ್ತ ಅಭ್ಯರ್ಥಿ ರೀತಿ ಕೆಲಸ ನಿರ್ವಹಿಸಬೇಕು. ಈ ಪೈಕಿ ಯುವಕರು ಅತೀ ಹೆಚ್ಚು ಒಲವು ತೋರುತ್ತಿರುವುದು ನಮ್ಮ ಪಕ್ಷಕ್ಕೆ ಬಲ ಬಂದಂತಾಗಿದೆ. ತಳ ಮಟ್ಟದಿಂದ ಪಕ್ಷ ಕಟ್ಟುವ ತಾಕತ್ತು ಬಿಜೆಪಿಗೆ ಮಾತ್ರ ಇದೆ ಎನ್ನುವ ಅಂಶ ಜನತೆಗೆ ತಿಳಿದಿದೆ. ಈ ನಿಟ್ಟಿನಲ್ಲಿ ಬೂತ್ ವಿಜಯ ಸಾಧಿಸಿ ನಮ್ಮ ಅಭ್ಯರ್ಥಿ ಗೆಲ್ಲಿಸೋಣ. ಈ ಕಾರ್ಯ ವಿನಾಯಕನಗರ ಬಡಾವಣೆಯ ಕಾರ್ಯಕರ್ತರು ಮಾಡಲಿದ್ದಾರೆ ಎಂದ ಅವರು ಪ್ರಧಾನಿ ದೇಶ ಕಟ್ಟುವ ಕೆಲಸ ಜನರಿಗೆ ತಿಳಿಯಬೇಕಿದೆ. ಮೋದಿ ಅವರ ಅಚಲ ನಿರ್ಧಾರದಿಂದ ಕರೋನ ಸಂಧರ್ಭದಲ್ಲಿ ದೇಶ ಉಳಿದಿದೆ. ಇಲ್ಲವಾದಲ್ಲಿ ಶ್ರೀಲಂಕಾ ರೀತಿ ದಿವಾಳಿ ಆಗುತ್ತಿತ್ತು ಎನ್ನುವ ಅಂಶ ಜನರ ಮನದಟ್ಟು ಮಾಡಬೇಕು. ಕೋವಿಡ್ ಎದುರಿಸಿದ ರೀತಿ ವಿಶ್ವಕ್ಕೆ ಮಾದರಿ ಬಗ್ಗೆ ತಿಳಿಸಿ ಎಂದು ಮತ್ತಷ್ಟು ಮಾಹಿತಿ ಯುವಕರಿಗೆ ನೀಡಿದರು.

ಬಿಜೆಪಿ ಮುಖಂಡ ಜಿ.ಎನ್.ಬೆಟ್ಟಸ್ವಾಮಿ ಮಾತನಾಡಿ ಬೂತ್ ಮಟ್ಟದಲ್ಲಿ ಪ್ರತಿ ಮತದಾರರ ಬಳಿ ನಮ್ಮ ಕಾರ್ಯಕರ್ತರು ತಲುಪಲಿದ್ದಾರೆ. ಯುವ ಕಾರ್ಯಕರ್ತರ ಪಡೆಗೆ ಅಭಿವೃದ್ದಿಯ ಮಹತ್ವ ತಿಳಿದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿರುವ ಸಾಧನೆ ಅರಿವಿದೆ. ಇದನ್ನು ಮುಗ್ದ ಜನರಿಗೆ ತಿಳಿಸಬೇಕು. ಆಸೆ ಆಮಿಷಗಳಿಗೆ ಬಲಿ ಮಾಡುವವರ ಬಗ್ಗೆ ಎಚ್ಚರಿಕೆ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿ ಗುಬ್ಬಿ ಕ್ಷೇತ್ರದಲ್ಲಿ 20 ವರ್ಷದ ಶಾಸಕರು ಸೋಲಿನ ಭೀತಿಗೆ ಕುಕ್ಕರ್ ಹಂಚುವ ಕೆಲಸ ಈಗಲೇ ಮಾಡುತ್ತಿದ್ದಾರೆ. ಗುಣಮಟ್ಟ ಇಲ್ಲದ ಕುಕ್ಕರ್ ಕೂಗುತ್ತಲೇ ಯಾವ ಕ್ಷಣದಲ್ಲಿ ಬ್ಲಾಸ್ಟ್ ಆಗುತ್ತದೆಯೋ ತಿಳಿಯದು. ಈ ನಿಟ್ಟಿನಲ್ಲಿ ಮತದಾರರು ಇಂತಹ ಆಸೆ ಆಮಿಷಗಳಿಂದ ದೂರವಿದ್ದು ಅವರು ಬಂದಾಗ ಅಭಿವೃದ್ದಿ ಕೆಲಸ ಮಾಡದಿರುವ ಬಗ್ಗೆ ಪ್ರಶ್ನಿಸಿ ಎಂದು ಕರೆ ನೀಡಿದರು.

ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ ಕೆಲವು ದಿನಗಳ ಈ ಅಭಿಯಾನ ನಿರೀಕ್ಷೆ ಮೀರಿ ಯಶಸ್ವಿಯಾಗಿ ನಡೆದಿದೆ. ಪಟ್ಟಣದಲ್ಲಿ ಎರಡನೇ ದಿನದ ಈ ವೇದಿಕೆಗೆ ಯುವಕರು ಬಂದಿರುವುದು ಸಂತಸ ತಂದಿದೆ. ಪಟ್ಟಣದ 16 ಬೂತ್ ಗಳಲ್ಲಿ ಈ ಅಭಿಯಾನ ಯಶಸ್ವಿಗೊಳಿಸಿ ಬಿಜೆಪಿಯ ಗೆಲುವಿನ ಸೋಪಾನ ಹಾಡುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮಿಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ನಂತರ ಪ್ರತಿ ಮನೆ ಮೇಲೆ ಬಿಜೆಪಿ ಬಾವುಟ ಹಾರಿಸಿದರು.

ವೇದಿಕೆಯಲ್ಲಿ ಪಪಂ ಸದಸ್ಯರಾದ ಜಿ.ಸಿ.ಕೃಷ್ಣಮೂರ್ತಿ, ಬಸವರಾಜು, ಮಾಜಿ ಅಧ್ಯಕ್ಷ ಕೆ.ಬಿ.ಕೃಷ್ಣಪ್ಪ, ಬೂತ್ ಮಟ್ಟದ ಮುಖಂಡರಾದ ಶಿವಕುಮಾರ್, ಲೋಕೇಶ್ ಸಿಂಧ್ಯಾ, ರವಿಕುಮಾರ್, ಅರ್ಜುನ್ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!