ವಿಯೋಗ

ನಿರಸ ನುಡಿಗಳಿಂದ
ಹುಸಿಯಾಯಿತು ಪ್ರೀತಿ,
ಹೀಗೇಕೆಯಾಯಿತು,,?! ಭ್ರಮೆನಾ,,?

ಶತಕನಸು ಸಿಹಿಹೊಂದುವ ಹೃದಯದಲ್ಲಿ
ಸ್ವಾರ್ಥಿಯಾಗಿ ನಾಶ ಹೋದೆ ನಾ,,,
ಶಪಿಸುವ ಚಾಳಿಯಾದೆ, ಗರ್ವದಿಂದ ಮೆರೆದೆ
ಲಾಗ ಹೊಡೆದಿದೆ ಈ ಪ್ರೇಮ,,, ಮಧುರವಾಗದೆ

ಯುಗಳ ಗೀತೆಯು ಆ ದಿನಗಳೆಲ್ಲಾವು
ಕೇವಲ ನೆನಪಿನಲ್ಲಿ ಉಳಿಯುವುದು,,,
ಮಾತು ಮುರಿದಿದೆ, ಮುತ್ತು ಮಾಸಿದೆ
ಕ್ಷಣಿಕ ಸುಖಕ್ಕಾಗಿ ಬಾಳು ಬಲಿಯಾಗಿದೆ,,,

- ಅನುರಾಗ್ ಭೀಮಸಂದ್ರ
ರಂಗಭೂಮಿ ಕಲಾವಿದ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!