ತಳಮಟ್ಟದಿಂದ ಸಂಘಟಿತರಾಗಿ ಪಕ್ಷ ಗೆಲ್ಲಿಸಿ


ಹೊಸಕೆರೆ : ಬೂತ್ ಮಟ್ಟದಿಂದ ಕಾರ್ಯಕರ್ತರನ್ನು ಸಂಘಟಿಸಿ ನಮ್ಮ ಬೂತ್ ನಾವು ಗೆದ್ದಲ್ಲಿ ನಮ್ಮ ಕ್ಷೇತ್ರದಲ್ಲಿ ಗೆದ್ದಂತೆ, ಕಾರ್ಯಕರ್ತರು ಸಂಘಟಿತರಾಗಿ ಇಂದಿನಿಂದಲೇ ಸಕ್ರಿಯರಾಗಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ಹೇಳಿದರು.
ಅವರು ಹಾಗಲವಾಡಿ ಹೋಬಳಿಯ ಅಳಿಲುಘಟ್ಟ ಗ್ರಾಮದಲ್ಲಿ ನಡೆದ ಬೂತ್ ವಿಜಯ್ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬ ಕಾರ್ಯಕರ್ತರೂ ಮತದಾರರ ಪ್ರತಿ ಮನೆಗೆ ಭೇಟಿಕೊಡಿ, ಸರ್ಕಾರದ ಸಾಧನೆಗಳನ್ನು ಹಾಗೂ ವಿವಿಧ ಯೋಜನೆಗಳನ್ನು ತಿಳಿಸಿ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸಮಾಡಿ ಎಂದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅ.ನ.ಲಿಂಗಪ್ಪ ಮಾತನಾಡಿ ರಾಜ್ಯದಲ್ಲಿ ಐವತ್ತೆಂಟುಸಾವಿರ ಬೂತ್ ಗಳಲ್ಲಿ ಹತ್ತು ದಿನದಲ್ಲಿ ಕಾರ್ಯಕ್ರಮ ನಡೆಯಲಿದೆ, ಈ ಅಭಿಯಾನದಿಂದ ಕಾರ್ಯಕರ್ತರಲ್ಲಿ ಶಕ್ತಿ ತುಂಬಲು ಹಾಗೂ ಚುನಾವಣೆಗೆ ಸಕ್ರಿಯರಾಗಲು ರಣೋತ್ಸಾಹ ನೀಡಿದಂತಾಗುತ್ತಿದ್ದು, ಸಾರ್ವಜನಿಕರ ಸ್ಪಂದನೆ ದೊರೆತಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅ.ನ.ಲಿಂಗಪ್ಪ ಮುಖಂಡರಾದ ಶಿವಸ್ವಾಮಿ. ಎಕೆಪಿರಾಜು. ಲೋಗನಾಥ್. ಹಟ್ಟಿ ಲಕ್ಕಪ್ಪ. ಕರಿಯಣ್ಣ. ಸಿದ್ದರಾಮಯ್ಯ. ಈಶ್ವರಯ್ಯ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!