30ವರ್ಷದ ಬಳಿಕ ಭಾವನಾತ್ಮಕ ಸ್ನೇಹ ಬೆಸುಗೆ

ತುಮಕೂರು: ಸ್ನೇಹ’ ಎಂಬ ಎರಡಕ್ಷರದ ಶಕ್ತಿ ಅಪಾರ, ಅವಿನಾಭಾವ ಸಂಬಂಧದ ದ್ಯೋತಕ, ನಿಷ್ಕಲ್ಮಶ ಮನಸ್ಸುಗಳ ಬೆನುಗೆ ಗೋಚರಿಸುವುದು ಪ್ರತಿಯೊಬ್ಬರೂ ತಮ್ಮ ಬಾಲ್ಯದಿಂದ ಹಿಡಿದು ಮುಪ್ಪಿನವರೆಗೂ ದೋಸ್ತರನ್ನು ಹೊಂದಿರುತ್ತಾರೆ. ಬಾಲ್ಯದ ಸ್ನೇಹ ಅಚ್ಚಳಿಯದು ಹುಡುಗರು- ಹುಡುಗಿಯರದ್ದು ನಿಕಟ ಬಾಂಧವ್ಯ, ನಿಷ್ಕಲ್ಮಶ ಮನಸ್ಸಿನದ್ದು. ದೋಸ್ಟ್‌ಗಳ ನಡುವಿನ ಬಾಂಧವ್ಯ ಎಂದೆಂದೂ ಹಚ್ಚಹಸಿರು.
ಇಂಥ ಒಂದು ಸಂಧರ್ಭವನ್ನು ಈ ಸ್ನೇಹಿತರು ಆಚರಿಸಿದರು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ವ್ಯಾಸಂಗ ಮಾಡಿದ ಎಲ್ಲ ವಿಧ್ಯಾರ್ಥಿಗಳು ಒಂದೇಡೆ ಸೇರಿ ನಮ್ಮ ಬಾಲ್ಯ ಗೆಳೆತನವನ್ನು ಗಟ್ಟಿಗೊಳಸಲು ಸ್ನೇಹ ಸಮ್ಮೀಲನ ಕಾರ್ಯಕ್ರವವನ್ನು ದೇವರಾಯನದುರ್ಗದಲ್ಲಿ ಹಮ್ಮಿಕೊಳ್ಳಲಾಗಿತು. ಒಟ್ಟಾಗಿ ಶಿಕ್ಷಣ ಪಡೆದಿದ್ದ72ವಿದ್ಯಾರ್ಥಿಗಳ ಮೂರು ದಶಕದ ನಂತರ ಮತ್ತೆ ಸೇರಿ ಸಂಭ್ರಮಿಸಿದರು.


ದೇವರಾಯನದುರ್ಗದ ಯಾತ್ರಿನಿವಾಸದ ಹತ್ತಿರ ಪಾರಂ ಹೌಸ್‌ನಲ್ಲಿ 1982-83 ರಿಂದ 1992-93ರವರೆಗೆ ತೋವಿನಕೆರೆ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಹಾಗೂ ತೋವಿನಕೆರೆ ಗಂಗಾಧರೇಶ್ವರ ಪ್ರೌಢಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ನಡೆಯಿತು.
ಸ್ನೇಹಿತರು ತಮ್ಮ ಜೀವನದ ಘಟನೆಗಳನ್ನು ಮೆಲುಕು ಹಾಕಿದರು.


ಕಾರ್ಯಕ್ರಮದಲ್ಲಿ ಬಾಲ್ಯದ ನೆನಪು, ಕುಟುಂಬ ಪರಿಚಯ, ಕುಟುಂಬರೊಂದಿಗೆ ಸ್ನೇಹಿತರ ಪರಿಚಯ, ಸಂಗೀತ ಮನರಂಜನೆಯನ್ನು ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ 5 ಗಂಟೆವರೆಗೆ ಸಂತೋಷದಿಂದ ಕಾಲಕಳೆದು ಖುಷಿಪಟ್ಟರು. ಎಷ್ಟೋ ಸಂದಿಗ್ಧ ಪರಿಸ್ಥಿತಿಯಲ್ಲಿ ಸಹಾಯಕನ ಬಾಳೆದವರು ಗೆಳೆಯರು, ಇಂತಹ ಅಮೂಲ್ಯ ಸ್ನೇಹಿತರನ್ನುಪಡೆದವರು ಧನ್ಯ, ಅಂತಹ ಸ್ನೇಹಿತರು ಹಿಂದೆ ಸಿಕ್ಕಿರಲಿಲ್ಲ ಮುಂದೆ ಸಿಗಲೂ ಸಾಧ್ಯವಿಲ್ಲ, ಎಷ್ಟೋ ಸ್ನೇಹಿತರ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದವರು ಸ್ನೇಹಿತರು, ಅವರು ಸ್ವಂತ ಅಕ್ಕ-ತಂಗಿಗಿಂತಲೂ ಹೆಚ್ಚು ಎಂದರೆ ತಪ್ಪೇನಿಲ್ಲ ಯಾಕೆಂದರೆ ಎಷ್ಟೋ ಸಂದರ್ಭಗಳಲ್ಲಿ ಅಮ್ಮನ ವಾತ್ಸಲ್ಯ, ಅಕ್ಕನ ಪ್ರೀತಿ ನೀಡಿ ಅಣ್ಣನಂತೆ ಸದಾ ಬೆಂಗಾವಲಾಗಿ ಜೊತೆ ನಿಂತವರು ಗೆಳೆಯರು, ಅದೆಷ್ಟೋ ಸಮಸ್ಯೆಗಳಿಗೆ, ಸಾಂತ್ವನ ನೀಡಿದವರು ಗೆಳೆಯರು.
ಭಾಗವಹಿಸಿದ್ದ ಸ್ನೇಹಿತರೆಲ್ಲ ಒಂದೇ ತರಹದ ಟೀ ಶರ್ಟ ತೊಟ್ಟು ನಾವೆಲ್ಲ ಯಾವ ಬೇದ ಭಾವ ನಮ್ಮಲ್ಲಿ ಇಲ್ಲ ನಾವೆಲ್ಲ ಒಂದೇ ಎಂದು ತೊರಿಸಿದರು.


ಇನ್ನೂ ತಮ್ಮ ಜೊತೆ ಓದಿದ ಹೆಣ್ಣು ಮಕ್ಕಳಿಗೆ ಸ್ಙೇಹ ಬಾಗಿನ ನೀಡಲಾಯಿತು ಈ ಸಂದರ್ಭದಲ್ಲಿ ಅವರ ಕಣ್ಣುಗಳಲ್ಲಿ ಸಂತೋಷದ ಆನಂದಬಾಷ್ಪ ಎದ್ದು ಕಾಣುತ್ತಿತು. ಇದೇ ಅಲ್ಲವಾ ಸ್ಙೇಹ ಸಮ್ಮೀಲನ ಪ್ರತಿಯೊಬ್ಬರ ಮನದಲ್ಲೂ ಸಂಜೆಯದಂತೆ ಮನದಲ್ಲಿ ಏನೋ ತಳಮಳ ಉಂಟಾಗಿದ್ದನ್ನ ಸ್ನೇಹಿತರು ಒಬ್ಬರೊಬ್ಬರಿಗೆ ಹಂಚಿಕೊಂಡರು ಈ ಸ್ನೇಹವನ್ನು ಮತ್ತಷ್ಡು ಗಟ್ಟಿಗೊಳಿಸಲು ನಾವು ಓದಿದ ಶಾಲೆಗೆ ಏನಾದರು ಮಾಡಲು ಒಮ್ಮತದಿಂದ ತೀರ್ಮಾನಿಸಿದರು. ಒಟ್ಡಿನಲ್ಲಿ ಎಲ್ಲರ ಸಮಾಗಮ ಒಂದು ಮಾದರಿ ಯಾಗಿದ್ದು ಇತಿಹಾಸವಾಯಿತು. ಒಂದು ಸುಂದರವಾದ ಗೆಳೆತನಕ್ಕೆ ಹೆಣ್ಣು ಗಂಡು ಬಡವ ಶ್ರೀಮಂತನೆಂಬ ತಾರತಮ್ಯವಿಲ್ಲ. ಹೃದಯ ಶ್ರೀಮಂತಿಕೆಯಿದ್ದರೆ ಸಾಕು ನೋವಿನಿಂದ ಮನ ಮುದುಡಿ ಕಣ್ಣೀರು ಜಾರುವ ಮುನ್ನವೇ ಸಿಹಿ ಗದರುವಿಕೆಯಿಂದ ಕಣ್ಣೀರು ಇಳಿಯದಂತೆ ತಡೆಯುವವರು ಸ್ನೇಹಿತರು, ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿಕೂಡಿ ಆಡಿದ ಸವಿನೆನಪುಗಳನ್ನು ಮೇಲುಕು ಹಾಕುವಾಗ ಈಗಲೂ ಕೂಡ ಒಟ್ಟಿಗೆ ಇರಬೇಕು ಎನಿಸುತ್ತದೆ. ಈ ಸುಂದರ ಸ್ನೇಹದ ಅನುಭವ ಬದುಕಿನ ಕೊನೆಯುದ್ದಕ್ಕೂ ಜೊತೆಯಾಗಿರಬೇಕೆಂಬುದೇ ಸ್ನೇಹಿತರೆಲ್ಲರ ಆಕಾಂಕ್ಷೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!