ಮತಗಟ್ಟೆ ಗೆಲುವಿಗೆ ಬಿಜೆಪಿ ರಣತಂತ್ರ : ಕೆ.ಪಿ. ಮಹೇಶ

ತುಮಕೂರು : ಬಿಜೆಪಿಯು ಪ್ರತಿ ಮತಗಟ್ಟೆಗಳಲ್ಲಿ ಪೇಜ್ ಹಾಗೂ ವಾರ್ಡ್ ಸಮಿತಿ ರಚನೆ, ಬೂತ್ ಪದಾಧಿಕಾರಿಗಳ ಹಾಗೂ ಪಂಚರತ್ನಗಳ ಕಾರ್ಯನಿರ್ವಹಣೆ, ವಾಟ್ಸ್ಯಾಪ್ ಗ್ರೂಪ್ ರಚನೆ, ಕೀವೋಟರ್‍ಸ್, ಪ್ರತೀ ತಿಂಗಳ ಅಂತ್ಯದಲ್ಲಿ ಪ್ರಧಾನಿ ನರೇಂದ್ರಮೋದಿರವರ ಮನ್ ಕೀ ಬಾತ್ ಕಾರ್ಯಕ್ರಮ ಆಯೋಜನೆ ಮತ್ತು ಎಲ್ಲಾ ವರ್ಗ, ಸಮುದಾಯಗಳ ಮತದಾರರನ್ನು ವಿಶ್ವಾಸಕ್ಕೆ ಪಡೆಯುವ ದೃಷ್ಠಿಯಿಂದ ಬೂತ್ ವಿಜಯ್ ಅಭಿಯಾನವನ್ನು ನಡೆಸುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹಾಗೂ ಸೋಮೇಶ್ವರ ಶಕ್ತಿಕೇಂದ್ರದ ವಾರ್ಡ್ 25ರ ಪ್ರಭಾರಿ ಕೆ.ಪಿ.ಮಹೇಶ ತಿಳಿಸಿದರು. ಇವರು ಇಂದುನಗರದಸೋಮೇಶ್ವರಪುರಂನವಾರ್ಡ್ 25ರಮತಗಟ್ಟೆ ಸಂಖ್ಯೆ 167ರ ವಾರ್ಡ್ ಅಧ್ಯಕ್ಷ ರಾಜ್‌ಕುಮಾರ್ ಗುಪ್ತರವರ ಮನೆ ಮೇಲೆ ಬಿಜೆಪಿ ಧ್ವಜವನ್ನು ಹಾರಿಸುವ ಸಂಧರ್ಭದಲ್ಲಿ ಮಾತನಾಡುತ್ತಾ, ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ಮತ್ತು ವಿಧಾನಸಭೆ- 2023ರ ಚುನಾವಣೆಯಲ್ಲಿ ಬಿಜೆಪಿ ಅಭೂತ ಪೂರ್ಣ ಸ್ಪಷ್ಟ ಬಹುಮತಕ್ಕೆ ಬೂತ್ ಮಟ್ಟದಲ್ಲಿ ಅತ್ಯಧಿಕ ಮತ ಪಡೆಯುವ ದೃಷ್ಠಿಯಿಂದ ಹಾಗೂ ಕೇಂದ್ರ, ರಾಜ್ಯ ಬಿಜೆಪಿಯ ಡಬ್ಬಲ್ ಇಂಜಿನ್ ಸರ್ಕಾರಗಳು ನೀಡಿರುವ ಕೊಡುಗೆ ಮತ್ತು ಸಾಧನೆಗಳನ್ನು ಪ್ರತಿ ಮನೆಗೆ ತಲುಪಿಸಿ, ಮತದಾರರ ಮನ ಗೆದ್ದು, ಮತವಾಗಿ ಪರಿವರ್ತಿಸುವ ಕಾರ್ಯಕ್ಕೆ ಬಿಜೆಪಿ ಮುಂದಾಗಿದೆ ಎಂದರು ಪ್ರಥಮ ಹಂತದಲ್ಲಿ ಪ್ರತಿ ಬೂತ್‌ನ ಬಿಜೆಪಿ ಪದಾಧಿಕಾರಿಗಳು, ಸದಸ್ಯರು ಮತ್ತು ಕೀವೋಟರ್‍ಸ್‌ನ25 ಮನೆಗಳ ಮೇಲೆ ಬಾವುಟ ಹಾರಿಸುವುದರ ಮೂಲಕ ಬಿಜೆಪಿ ಬೂತ್ ವಿಜಯ್ ಅಭಿಯಾನವನ್ನು ಚಾಲನೆಗೊಳಿಸಿದೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಬಿಜೆಪಿ ರಾಜ್ಯ ವಕ್ತಾರ ಹಾಗೂ ಜಿಲ್ಲಾ ಉಪಾಧ್ಯಕ್ಷ ಹೆಚ್.ಎನ್.ಚಂದ್ರಶೇಖರ್, ತುಮಕೂರು ಮಂಡಲಾಧ್ಯಕ್ಷ ಟಿ.ಹೆಚ್.ಹನುಮಂತರಾಜು, ನಗರ ಮಂಡಲ ಮಹಿಳಾ ಮೋರ್ಚಾ ಪ್ರಧಾನಕಾರ್ಯದರ್ಶಿ ಹಾಗೂ ಬಿಜೆಪಿ ಬೂತ್ ವಿಜಯ್ ಅಭಿಯಾನದ ಪ್ರಮುಖ್ ಕಾವ್ಯ, ಕಾರ್ಯಕರ್ತರಾದ ಮುತ್ತುರಾಜ್, ವಾದಿರಾಜ್, ಸಿ.ಎನ್.ರವಿಕುಮಾರ್, ಚೈತ್ರ, ನಂಜುಂಡಿ, ಸೀತಾರಾಮು, ಚಂದ್ರಶೇಖರ್‌ರವರುಗಳು ಉಪಸ್ಥಿತರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!