ನನ್ನ ಜೊತೆ 5 ಮಂದಿ ಜೆಡಿಎಸ್ ಶಾಸಕರು ರಾಜೀನಾಮೆ ಸಲ್ಲಿಸಲು ಸಿದ್ದರಿದ್ದಾರೆ: ಶಾಸಕ ಎಸ್.ಆರ್.ಶ್ರೀನಿವಾಸ್..!.

ಗುಬ್ಬಿ: ನಾನೊಬ್ಬನೇ ರಾಜೀನಾಮೆ ನೀಡುವುದಿಲ್ಲ ನನ್ನ ಜೊತೆಗೆ ಜೆಡಿಎಸ್ ಪಕ್ಷದ 5 ಮಂದಿ ವಿವಿಧ ಜಿಲ್ಲೆಯ ಶಾಸಕರು ಮುಂದಿನ ದಿನದಲ್ಲಿ ನನ್ನ ಜೊತೆಗೂಡಿ ರಾಜೀನಾಮೆ ಸಲ್ಲಿಸಲು ಸಿದ್ಧರಿದ್ದು ರಾಜ್ಯದ ಎಲ್ಲಾ ಪಕ್ಷದ ಮುಖಂಡರು ನನಗೆ ಆತ್ಮೀಯ ಸ್ನೇಹಿತರು ಎಂದು ಯಾವ ಶಾಸಕರ ಹೆಸರೇಳದೆ ಮಾರ್ಮಿಕವಾಗಿ ನುಡಿದರು.

ತಾಲ್ಲೂಕಿನ ಹೇರೂರು ಗ್ರಾಮದಲ್ಲಿ 22 ಲಕ್ಷ ರೂಗಳ ಸಿಸಿ ರಸ್ತೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು
ನಾನು ಕಟ್ಟಿದ ಕೋಟೆ ಎನ್ನುವ ಬೆಟ್ಟಸ್ವಾಮಿ ಅವರನ್ನು ಜನರೇ ತಿರಸ್ಕಾರ ಮಾಡಿದ್ದಾರೆ. ಭದ್ರ ಕೋಟೆ ನಿಮ್ಮದೇ ಅಂದು ಕೊಳ್ಳೋಣ. ಆದರೆ ನನ್ನ ವಿರುದ್ದ ಎರಡು ಬಾರಿ ಸೋತಿದೇಕೆ ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ವ್ಯಂಗ್ಯವಾಗಿ ಪ್ರಶ್ನಿಸಿದರು.

ಅವರು ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಚುನಾವಣೆ ವೇಳೆ ಇವೆಲ್ಲಾ ಮಾಮೂಲಿ ಆಗೋಗಿದೆ. ಭ್ರಷ್ಟಾಚಾರ ಬಗ್ಗೆ ಮಾತನಾಡುವ ಬೆಟ್ಟಸ್ವಾಮಿ ಅವರು ಅರಣ್ಯ ಪ್ರದೇಶ ಒತ್ತುವರಿ ಮಾಡಿರುವುದು ಗೊತ್ತಿದೆ. ಅವೆಲ್ಲವನ್ನೂ ತನಿಖೆಗೆ ಒಳಪಡಿಸುತ್ತೇನೆ ಎಂದು ಕಿಡಿಕಾರಿದರು.

ತಲೆಬುಡ ಇಲ್ಲದ ಆರೋಪ ಮಾಡುವ ಇವರೆಲ್ಲಾ ಈಗ ಜನರ ಮುಂದೆ ಬರುತ್ತಾರೆ. ನನ್ನ ಧರ್ಮ ಪತ್ನಿ ಬಗ್ಗೆ ಮಾತನಾಡುವ ತರಲೆಗೆ ನಾನು ಉತ್ತರ ನೀಡಬೇಕಿಲ್ಲ. ಹಾದಿ ಬೀದಿಯಲ್ಲಿ ಹೋಗುವವರಿಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಸಂಸದರು ಜಮೀನು ಈಚೆಗೆ ಖರೀದಿ ಮಾಡಿದ ಬಗ್ಗೆ ಮಾಹಿತಿ ತಿಳಿಯದೇ ಮಾತನಾಡುತ್ತಾರೆ ಎಂದ ಅವರು ನಾನು ನನ್ನ ಬೆಂಬಲಿಗರಿಗೆ ಜಮೀನು ಮಂಜೂರು ಮಾಡಿದ್ದೇನೆ ಎನ್ನುವ ಆರೋಪಕ್ಕೆ ಸಾಕ್ಷಿ ತೋರಿಸಿ. ಅಧಿಕಾರಿಗಳ ಬಳಿ ವಸೂಲಿ ಬಗ್ಗೆ ಕೂಡಾ ಸಲ್ಲದ ಆರೋಪ ಮಾಡುವುದು ಇವೆಲ್ಲಾ ಬಿಟ್ಟು ಚುನಾವಣೆ ಕೆಲಸ ಮಾಡಿ. ಜನ ಕೋಡಂಗಿ ಆಟವನ್ನು ಸೂಕ್ಷ್ಮವಾಗಿ ನೋಡುತ್ತಾರೆ ಎಂದು ಹೇಳಿದರು.

ಕಾರ್ಯಕರ್ತರ ನಿರ್ಧಾರದಂತೆ ಸ್ಪರ್ಧಿಸುತ್ತೇನೆ. ಯಾವುದೇ ಗೊಂದಲ ಸೃಷ್ಠಿ ಆಗಿಲ್ಲ. ಯಾವ ಪಕ್ಷ ಎನ್ನುವ ಬಗ್ಗೆ ಅವರು ನಿರ್ಧಾರ ಮಾಡಿಲ್ಲ. ಚುನಾವಣೆ ಕಾರ್ಯಕರ್ತರು ಹೇಳಿದಂತೆ ನಡೆಸಿ ಗೆದ್ದರೆ ಜನಸೇವೆ ಮಾಡುತ್ತೇನೆ. ಸೋತರೆ ಕೃಷಿ ನಡೆಸುತ್ತೇನೆ ಎಂದು ಹೇಳಿದ ಅವರು ಸಾಮಾಜಿಕ ಜಾಲತಾಣವನ್ನು ಒಳ್ಳೆಯ ಕೆಲಸಕ್ಕೆ ಬಳಸಬೇಕು. ಅದು ಬಿಟ್ಟು ಕೇವಲ ಆರೋಪ ಟೀಕೆ ಮಾಡುವ ಭರದಲ್ಲಿ ಅವಾಚ್ಯ ನಿಂದನೆ ಒಳಿತಲ್ಲ. ಪೊಲೀಸ್ ಠಾಣೆ ಮೆಟ್ಟಿಲೇರಿದ ಈ ನಿಂದನೆ ಪ್ರಕರಣ ಸರಿಯಲ್ಲ. ಈ ಮಟ್ಟಕ್ಕೆ ಇಳಿಯುವ ಅಗತ್ಯವಿಲ್ಲ. ನಾನು ಎಂದೂ ಯಾರ ಬಗ್ಗೆ ಮಾತನಾಡಲ್ಲ. ನನ್ನ ಬಗ್ಗೆ ಮಾತನಾಡಿದರೆ ಖಂಡಿತಾ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಬಗರ್ ಹುಕುಂ ಸಮಿತಿ ಸಭೆಯಲ್ಲಿ 47 ನಿಮಿಷ ಕಾದು ಮುಂದೂಡಲಾಯಿತು. ಉದ್ದೇಶ ಪೂರ್ವಕವಾಗಿ ಸಭೆಗೆ ಸದಸ್ಯರು ಬಂದಿಲ್ಲ. ಸಭೆಗೆ ಅರ್ಧ ಗಂಟೆ ಮುನ್ನ ಅಲ್ಲೇ ಇದ್ದ ಸದಸ್ಯರು ಸಭೆ ಆರಂಭಕ್ಕೆ ಮುನ್ನ ನಾಪತ್ತೆಯಾಗುತ್ತಾರೆ. ಬಡವರ ಪರ ಕೆಲಸ ಮಾಡುವ ಕಾಳಜಿ ಅವರಲ್ಲಿದ್ದರೆ ಸಭೆಯಲ್ಲಿದ್ದು ಚರ್ಚಿಸಬಹುದಿತ್ತು. ತಹಶೀಲ್ದಾರ್ ಅವರಲ್ಲಿ ಮನವಿ ಸಲ್ಲಿಸಬಹುದಿತ್ತು. ಅದನ್ನು ಬಿಟ್ಟು ಸಭೆ ನಡೆಸದೆ ನಡೆದಿದ್ದು ಅವರ ರೈತ ವಿರೋಧಿತನ ಕಾಣುತ್ತದೆ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಶಿವಪ್ಪ, ಸದಸ್ಯರಾದ ಸೀನಪ್ಪ, ಶ್ರೀನಿವಾಸ್, ಜಿಲಾನಿ, ಶಿವರಾಂ, ಗೌಸ್, ಚನ್ನಬಸವಯ್ಯ, ಮಧು ಇತರರು ಇದ್ದರು.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!