ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕರ ಮಕ್ಕಳಿಗೆ ಉಚಿತ ಶಾಲಾ ಕಿಟ್ ವಿತರಣೆ

ಕೂಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಬಹಳಷ್ಟು ಯೋಜನೆಗಳು ಜಾರಿಯಲ್ಲಿವೆ ಅವುಗಳನ್ನು ಸದುಪಯೋಗಪಡಿಸಿಕೊಳ್ಳಿ ಕಾರ್ಮಿಕ ನಿರೀಕ್ಷಕ ಶ್ರೀಕಾಂತ್ ಸ್ಪಷ್ಟನೆ…

ಕೊರಟಗೆರೆ:-
ಪಟ್ಟಣದ ಕರ್ಮಿಕ ಇಲಾಖೆ ಕಛೇರಿ ಎಲ್ಲಿ 1 ರಿಂದ 5ನೇ ತರಗತಿ ಓದುತ್ತಿರುವ ಕಾರ್ಮಿಕರ ಮಕ್ಕಳಿಗೆ ಉಚಿತ ಶಾಲಾ ಕಿಟ್ ಗಳನ್ನು ಕಾರ್ಮಿಕ ನಿರೀಕ್ಷಕ ಶ್ರೀಕಾಂತ ವಿತರಿಸಿದರು.

ಆನಂತರ ಮಾತನಾಡಿದ ಅವರು ಮಾತನಾಡಿ,
ಮಧ್ಯವರ್ತಿಗಳನ್ನು ನಂಬದೆ ತಾವೇ ಕರ್ಮಿಕ ಇಲಾಖೆಗೆ ಭೇಟಿ ನೀಡಿ ನೊಂದಣಿಯಾಗಿ ವೈದ್ಯಕೀಯ ಸೌಲಭ್ಯ, ಶೈಕ್ಷಣಿಕೆ ಧನ ಸಹಾಯ, ಮದುವೆ, ಪಿಂಚಣಿ ಯೋಜನೆ ಇನ್ನಿತರೆ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ನಿಜವಾಗಿ ಯಾರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಅಂತವರು ತಾಲೂಕಿನ ತಹಶೀಲ್ದಾರ್ ರವರ ಕಚೇರಿಯ ಹಿಂಭಾಗದಲ್ಲಿ ಕಾರ್ಮಿಕ ಇಲಾಖೆಯ ಕಚೇರಿ ತೆರೆಯಲಾಗಿದ್ದು,

ನೇರವಾಗಿ ಕಾರ್ಮಿಕರು ಕಚೇರಿಗೆ ಭೇಟಿ ನೀಡಿ ಇಲಾಖೆ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಇಲಾಖೆ ಸೌಲಭ್ಯಗಳ ಬಳಕೆಗೆ ಕೆಲವು ಮಧ್ಯವರ್ತಿಗಳು ಇನ್ನಿಲ್ಲದ ಆಮಿಷ ಒಡ್ಡಿ ತಪ್ಪುದಾರಿಗೆ ಎಳೆಯಬಹುದು ಆದ್ದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಪಟ್ಟಣದಲ್ಲಿ ಕಚೇರಿ ಮಾಡಲಾಗಿದೆ. ಇಲ್ಲಿ ಕಾರ್ಮಿಕರಿಗೆ ಸಿಗಬಹುದಾದ ಎಲ್ಲಾ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
ಒಂದು ಕುಟುಂಬದಲ್ಲಿ ಎರಡು ಮಕ್ಕಳಿಗೆ ಓದಲು ಅವಶ್ಯಕತೆ ಇರುವ ಲೇಖನ ಸಾಮಗ್ರಿಗಳು ಈ ಕಿಟ್ ನಲ್ಲಿ ಲಭ್ಯವಿದೆ . ಕಡಿಮೆ ಕಿಟ್ ಇರುವ ಕಾರಣದಿಂದ ಒಂದು ಕುಟುಂಬದ ಒಂದು ಮಗುವಿಗೆ ಕಿಟ್ ವಿತರಿಸಲಾಗಿದೆ ಪ್ಲೀಸ್ ಕಲಿಕಾ ಸಂಬಂಧಗಳು ಮನೆಯ ಇಬ್ಬರು ಮಕ್ಕಳಿಗೆ ಉಪಯೋಗ ಬರುತ್ತದೆ .


ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನದ ಸೌಲಭ್ಯ ಕೂಡ ಇದ್ದು, ಒಂದರಿಂದ ಐದನೇ ತರಗತಿ ಓದುವ ವಿದ್ಯಾರ್ಥಿಗೆ ರೂ. 5 ಸಾವಿರ, 6 ರಿಂದ ನೇ ತರಗತಿ ಮಕ್ಕಳಿಗೆ ರೂ. 9 ಸಾವಿರ, 10 ನೇತರಗತಿಗೆ ರೂ. 10 ಸಾವಿರ, ಪಿಯುಸಿ ವಿದ್ಯಾರ್ಥಿಗಳಿಗೆ ರೂ. 12 ಸಾವಿರ, ಎಂಜಿನಿಯರ್ ವಿದ್ಯಾರ್ಥಿಗಳಿಗೆ ಒಂದು ಸೆಮೆಸ್ಟರ್ ಗೆ ರೂ 25 ಸಾವಿರದವರೆಗೆ ಶೈಕ್ಷಣಿಕ ಧನ ಸಹಾಯ ನೇರವಾಗಿ ಅವರ ಖಾತೆಗೆ ವರ್ಗಾವಣೆಯಾಗುತ್ತದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ವೈಧ್ಯಕೀಯ ವೆಚ್ಚವನ್ನು ಪಡೆಯಬಹುದಾಗಿದೆ. ಒಂದು ಕುಟುಂಬದಲ್ಲಿ ಇಬ್ಬರು ಮಕ್ಕಳ ಮದುವೆ ಖರ್ಚಿಗಾಗಿ ಒಬ್ಬರಿಗೆ ರೂ. 60 ಸಾವಿರದಂತೆ ಧನಸಹಾಯವನ್ನು ಇಲಾಖೆ ವತಿಯಿಂದ ನೀಡಲಾಗುತ್ತದೆ. ಕಾರ್ಮಿಕ ಕುಟುಂಬದವರು ಮೃತಪಟ್ಟಲ್ಲಿ ಅಂತ್ಯಸಂಸ್ಕಾರ ವೆಚ್ಚ ಅಥವಾ ಅಬುಗ್ರಹರಾಶಿ ಯೋಜನೆಯಡಿ ಕಾರ್ಮಿಕರು ರೂ. 75 ಸಾವಿರ ಧನಸಹಾಯ ಪಡೆಯಬುದಾಗಿದೆ. 60 ವರ್ಷ ದಾಟಿದ ಕಾರ್ಮಿಕರು ಮಂಡಳಿ ಸದಸ್ಯತ್ವ ಕೊನೆಯಾಗಲಿದೆ. ಈ ವೇಳೆಯಲ್ಲಿ ಪ್ರತೀ ತಿಂಗಳು ರೂ. 3 ಸಾವಿರ ಪಿಂಚಣಿ ನೀಡಲಾಗುವುದು. ಮಹಿಳಾ ಫಲಾನುಭವಿಗಳಿಗೆ ಹೆರಿಗೆ ಧನ ಸಹಾಯ ನೀಡಲಾಗುವುದು. ಒಂದು ಹೆರಿಗೆಗೆ ರೂ. 50 ಸಾವಿರ ಧನಸಹಾಯದಂತೆ ಇಬ್ಬರು ಮಕ್ಕಳಿಗೆ ರೂ. 1 ಲಕ್ಷದ ವರೆಗೆ ಧನಸಹಾಯ ನೀಡಲಾಗುತ್ತದೆ. ಇದರ ಜೊತೆಗೆ ತಾಯಿಮಗು ಸಹಾಯ ಅಸ್ತ ಯೋಜನೆಯಡಿ ಮಗುಗೆ 6 ವರ್ಷ ತುಂಬುವವರೆಗೆ ಪ್ರತೀ ವರ್ಷ ರೂ. 6 ಸಾವಿರ ಅವರ ಖಾತೆಗೆ ನಿಡಲಾಗುವುದು ಎಂದು ಮಾಹಿತಿ ನೀಡಿದರು.
ತಾಲ್ಲೂಕಿನಲ್ಲಿ 24 ಕಿಟ್ ಬಂದಿದ್ದು, 180 ಕಿಟ್ ವಿತರಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಇಲಾಖೆಯ
ಕಾರ್ಮಿಕ ಬಂಧು ರಮೇಶ್,ಡಾಟಾ ಆಪರೇಟರ್ ಅಬ್ದುಲ್ ಖಾದರ್ ಶಾಲಾ ಮಕ್ಕಳು ಹಾಗೂ ಅವರ ಪೋಷಕರು ಹಾಜರಿದ್ದರು…

ವರದಿ :- ಹರೀಶ್ ಬಾಬು ಬಿ. ಹೆಚ್ ಕೊರಟಗೆರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!