*ಅವಧೂತ ಶ್ರೀ ಶಿವಚಿದಂಬರ ಶರ್ಮಾ ರವರ ಸ್ಮರಣಾರ್ಥ ಜ 20 ರಂದು ಗುರುವಂದನಾ ಕಾರ್ಯಕ್ರಮ.*

ಅವಧೂತ ಶ್ರೀ ಶಿವಚಿದಂಬರ ಶರ್ಮಾ ಅವರ ಸಂಸ್ಮರಣಾರ್ಥ ಇದೇ ತಿಂಗಳ 20 ರಂದು ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶ್ರೀ ಚಿದಂಬರಾಶ್ರಮ ಮ್ಯಾನೇಜಿಂಗ್ ಟ್ರಸ್ಟಿ ಡಾ.ಸಚ್ಚಿದಾನಂದ ಶರ್ಮಾ ತಿಳಿಸಿದರು.

ಪಟ್ಟಣದ ಶ್ರೀ ಚಿದಂಬರಾಶ್ರಮದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸಂಸ್ಕೃತ ಮತ್ತು ವೇದಾಧ್ಯಯನ ಮೂಲಕ ಸನಾತನ ಧರ್ಮ ಸಾರುವ ಜೊತೆಗೆ ಆಧುನಿಕ ಶಿಕ್ಷಣಕ್ಕೂ ಒಲವು ತೋರಿದ ಶ್ರೀಗಳು 60 ವರ್ಷಗಳ ಸುಧೀರ್ಘ ಕಾಲ ಆಶ್ರಮದ ಉನ್ನತಿಗೆ ಶ್ರಮಿಸಿದ್ದರು. ಈ ನಿಟ್ಟಿನಲ್ಲಿ ಅವರ ಸ್ಮರಣೆ ಮಾಡುವುದು ಔಚಿತ್ಯ ಎಂದರು.

ಸಾವಿರಾರು ಶಿಷ್ಯ ವೃಂದ ಹೊಂದಿದ್ದ ಶ್ರೀ ಶಿವ ಚಿದಂಬರ ಶರ್ಮಾ ಅವರ ಜೀವನ ಅರ್ಥಪೂರ್ಣವಾಗಿ ನಡೆದಿದೆ. ಅವರ ದತ್ತಾತ್ರೇಯ ಸ್ವಾಮಿ ದೇವರ ಸಾಕಾರಗೊಳಿಸಿಕೊಂಡು ವಿದ್ಯಾರ್ಜನೆಗೆ ಬಂದ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಗುರುಕುಲ ನಿರಂತರ ನಡೆಸಿದ್ದರು ಎಂದ ಆವರು ಅವರ ಸಂಸ್ಮರಣೆ ಕಾರ್ಯಕ್ರಮ ಇದೇ ತಿಂಗಳ 20 ರಂದು ನಡೆಸಲಾಗುತ್ತಿದೆ. ವಿಚಾರ ಮಂಥನಕ್ಕೆ ಅಗಡಿ ಅನಂದವನ ಆಶ್ರಮದ ಶ್ರೀ ವಿಶ್ವನಾಥ ಚಕ್ರವರ್ತಿ, ವಿದ್ಯಾವಾಚಸ್ಪತಿ ಡಾ.ಪಾವಗಡ ಪ್ರಕಾಶ್ ರಾವ್, ಸಿರಿಸಿ ರಾಜಾರಾಮ ಆಶ್ರಮದ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮಿ ಆಗಮಿಸಿ ಮಾಹಿತಿ ನೀಡಲಿದ್ದಾರೆ ಎಂದರು.

ಬೆಳಿಗ್ಗೆ 10.30 ಕ್ಕೆ ವೇದಘೋಷದೊಂದಿಗೆ ಶಿವ ನಮನ, ಪರಿಚಯ, ದೀಪಜ್ವಲನ ಮೂಲಕ ವೇದಿಕೆ ಕಾರ್ಯಕ್ರಮ ಆರಂಭವಾಗಿ ಐಕಮತ್ಯ ಸೂಕ್ತ ಪಠಣ ನಡೆಯಲಿದೆ. ಮಧ್ಯಾಹ್ನ 2.30 ಕ್ಕೆ ಶಿವ ಸ್ಮರಣೆ ಕಾರ್ಯಕ್ರಮ ಆರಂಭವಾಗಿ ಕೆ.ಆರ್.ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ. ಅದೇ ವೇದಿಕೆಯಲ್ಲಿ ಶಿವ ನಮನ ಸ್ಮರಣಾರ್ಥ ಸಂಪುಟ ಹೊರ ತರಲಾಗುವುದು ಎಂದ ಅವರು ಈ ಸಂಪುಟಕ್ಕೆ ಅಗತ್ಯ ಮಾಹಿತಿಗಳನ್ನು ನೀಡಲು ಭಕ್ತರಿಗೆ ಮನವಿ ಮಾಡಲಾಗಿದೆ. ಗುರುಗಳ ಜೊತೆಗಿನ ಒಡನಾಟ ಇದ್ದವರು ತಮ್ಮ ಅನುಭವಗಳು, ಫೋಟೋಗಳು ಹಾಗೂ ಸ್ಮರಣೆಯ ಇನ್ನಿತರ ವಸ್ತುಗಳು ಆಶ್ರಮಕ್ಕೆ ತಲುಪಿಸಲು ಮನವಿ ಮಾಡಿದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!