ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಹೋಬಳಿಯ ಬೆಳ್ಳಳ್ಳಿ, ಜಾಲಿಪಾಳ್ಯ, ಅವ್ವೇರಹಳ್ಳಿ ಗ್ರಾಮದಲ್ಲಿ ಸುಮಾರು ಮೂರು ಕೋಟಿ ರೂಗಳ ರಸ್ತೆ ಅಭಿವೃದ್ದಿ ಕೆಲಸಕ್ಕೆ ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಗುದ್ದಲಿಪೂಜೆ ನೆರವೇರಿಸಿದರು.
ತಾಲ್ಲೂಕಿನ ಸಿ.ಎಸ್.ಪುರ ಹೋಬಳಿಯಲ್ಲಿ ಈಗಾಗಲೇ ನಿರಂತರವಾಗಿ ಅಭಿವೃದ್ದಿ ಕೆಲಸ ನಡೆಯುತ್ತಿದ್ದು, ಸಿಸಿ ರಸ್ತೆ, ಡಾಂಬರೀಕರಣ ರಸ್ತೆ ಹಾಗೂ ಮನೆ ಮನೆಗೆ ನಳ ಸಂಪರ್ಕದ ಜಲ ಜೀವನ್ ಮಿಷನ್ ಯೋಜನೆ ಕೆಲಸಗಳು ಕೋಟ್ಯಂತರ ರೂಗಳಲ್ಲಿ ನಡೆದಿದೆ. ಒಂದು ನೂರು ಕೋಟಿ ರೂಗಳಿಗೂ ಅಧಿಕ ಕೆಲಸ ನಡೆದಿದೆ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಅವ್ವೇರಹಳ್ಳಿ ಗ್ರಾಮದಲ್ಲಿ ತಿಳಿಸಿದರು.

ಚುನಾವಣೆ ಸಂದರ್ಭದಲ್ಲಿ ಕೆಲಸ ಮಾಡುವ ಶಾಸಕ ನಾನಲ್ಲ. ಆಯ್ಕೆಯಾದ ಮರು ಕ್ಷಣವೇ ಅಭಿವೃದ್ದಿ ಮರೀಚಿಕೆಯಾಗಿದ್ದ ಗ್ರಾಮಗಳ ಪಟ್ಟಿ ಮಾಡಿಕೊಂಡು ನಿರಂತರ ಕೆಲಸ ಮಾಡಲಾಗಿದೆ. ಬಿಜೆಪಿ ಸರ್ಕಾರ ಜೊತೆ ಮಾತನಾಡಿ ಅಭಿವೃದ್ದಿ ಕೆಲಸ ತಂದಿದ್ದೇನೆ. ಕೆಲಸ ಮಾಡಿಯೇ ಜನರ ಮುಂದೆ ತೆರಳಿ ಮತಯಾಚನೆ ಮಾಡುತ್ತೇನೆ. ಮತ್ತೇ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖಂಡರಾದ ಗೋವಿಂದರಾಜು, ಲೋಕೇಶ್, ಚಂದ್ರೇಗೌಡ, ರಾಚೇನಹಳ್ಳಿ ವಸಂತ್, ಕಿರಣ್, ಗುತ್ತಿಗೆದಾರರಾದ ರಾಮಲಿಂಗೇಗೌಡ, ದೇವರಾಜ್ ಇತರರು ಇದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.