ನಿವೃತ್ತ ಎ ಎಸ್ ಐ ತೋಂಟಾರಾಧ್ಯ ನಿಧನ : ಸಂತಾಪ ಸೂಚಿಸಿದ ಪೊಲೀಸ್ ಇಲಾಖೆ ಸಿಬ್ಬಂದಿ.

ಗುಬ್ಬಿ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಕಳೆದ ವರ್ಷವಷ್ಟೇ ನಿವೃತ್ತರಾಗಿದ್ದ ತೋಂಟಾರಾಧ್ಯ(61) ಅವರು ಬುಧವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು.

ಗುಬ್ಬಿ ಪೊಲೀಸ್ ಇಲಾಖೆಯಲ್ಲಿ ‘ಆರಾಧ್ಯ’ ರೆಂದೇ ಖ್ಯಾತರಾಗಿದ್ದ ಇವರು ಸಹಾಯಕ ಸಬ್ ಇಸ್ಪೆಪೆಕ್ಟರ್ ಆಗಿ ಗುಬ್ಬಿ ಪೊಲೀಸ್ ಠಾಣೆಯಲ್ಲಿ ನಿವೃತ್ತಿ ಹೊಂದಿದ್ದರು.
ತಮ್ಮ ನಿವೃತ್ತಿ ಜೀವನವನ್ನು ಗುಬ್ಬಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ನಗರದ 4 ನೇ ಕ್ರಾಸ್ ನಲ್ಲಿರುವ ತಮ್ಮ ಸ್ವಗೃಹದಲ್ಲಿ ಕಳೆಯುತ್ತಿದ್ದರು.

ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿಯ ಬುರುಡೆಘಟ್ಟ ಗ್ರಾಮದ ಮೂಲನಿವಾಸಿಗಳಾಗಿದ್ದ ಮೃತರು ಪತ್ನಿ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಇವರ ಅಂತ್ಯ ಸಂಸ್ಕಾರ ಕಾರ್ಯವನ್ನು ಬುರಡೆಘಟ್ಟ ಸ್ವಗ್ರಾಮದಲ್ಲಿ ಮಧ್ಯಾಹ್ನ 2 ಗಂಟೆಗೆ ನೆರವೇರಿಸಲಾಗುವುದು. ಪಟ್ಟಣದ ಮೃತರ ಸ್ವಗೃಹದಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅನುವು ಮಾಡಲಾಗಿತ್ತು.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!