ಹೊಸಕೆರೆ : ರೈತರ ಬಗ್ಗೆ ಕಾಳಜಿ ಇರುವ ಸರ್ಕಾರ ಯಾವುದಾದ್ರು ಇದ್ರೆ ಅದು ಬಿಜೆಪಿ ಸರ್ಕಾರ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ತಿಳಿಸಿದರು.
ಹಾಗಲವಾಡಿ ಹೋಬಳಿಯ ಹೊಸಕೆರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ಸರ್ಕಾರ ಸಾಧನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸವ ಜವಬ್ದಾರಿಯನ್ನ ನಾವೆಲ್ಲರೂ ಸಹ ಮಾಡಬೇಕಿದೆ.ನರೇಂದ್ರ ಮೋದಿಯವರು ಕೊಟ್ಟಿರುವಂತಹ ಸಾಧನೆಗಳು ಬಡ ರೈತರಿಗೆ ಕರ ಪತ್ರವನ್ನು ಕೊಡುವುದರ ಮೂಲಕ ಬಿಜೆಪಿ ಸರ್ಕಾರದ ಸಾಧನೆಗಳನ್ನು ತಿಳಿಸಬೇಕಿದೆ. ಪಿಎಂ ಕಿಸಾನ್ ಯೋಜನೆಯನ್ನು ಜಾರಿಗೆ ತಂದಿರುವ ನರೇಂದ್ರ ಮೋಧಿಯವರು ವರ್ಷದಲ್ಲಿ ಪ್ರತಿ ರೈತರಿಗೆ ಹತ್ತು ಸಾವಿರ ಹಣವನ್ನು ನೇರವಾಗಿ ಅವರ ಖಾತೆಗೆ ಜಾಮೆ ಮಾಡಲಾಗುತ್ತಿದೆ ದೇಶದ ಪ್ರತಿಯೊಬ್ಬ ರೈತರು ಈ ಯೋಜನೆಯಿಂದ ಲಾಭ ಪಡೆಯುತ್ತಿದದ್ದಾರೆ ಎಂದ ಅವರು ಇದೇ ಜ.29ಕ್ಕೆ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮ ಇದೆ ಎಲ್ಲ ಕಾರ್ಯಕರ್ತರು ವೀಕ್ಷೇಣೆ ಮಾಡಬೇಕು ಎಂದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಲ್ಲರೂ ಸಹ ಬಿಜೆಪಿ ಗೆಲುವಿಗೆ ಶ್ರಮೀಸಬೇಕಿದೆ ಗುಬ್ಬಿಯಲ್ಲಿ ಉತ್ಸವ ಮೂರ್ತಿಗಳು ಜಾಸ್ತಿ ಇರುವುದರಿಂದ ಮುಂದಿನ ದಿನಗಳಲ್ಲಿ ಒಬ್ಬರನ್ನು ಹೈಕಮಾಂಡ್ ಆಯ್ಕೆ ಮಾಡುತ್ತದೆ ಯಾರೇ ಆಗಲಿ ಪಕ್ಷದ ಗೆಲುವಿಗೆ ಶ್ರಮಿಸಬೇಕು ಈ ಭಾರಿಯಲ್ಲಿ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂಧರ್ಭದಲ್ಲಿ ರೈತ ಮೋರ್ಚಾ ತಾಲ್ಲೂಕ್ ಅಧ್ಯಕ್ಷ ಲೋಗನಾಥ್ , ಮಂಡಲ ಉಪಾಧ್ಯಕ್ಷ ಎಕೆಪಿರಾಜು , ಜಿಲ್ಲಾ ಎಸ್ ಟಿ ಮೋರ್ಚಾ ತಾಲ್ಲೂಕ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ , , ಪ್ರಧಾನ ಕಾರ್ಯದರ್ಶಿ ಗಂಗಣ್ಣ , ಮುಖಂಡರಾದ ಸದಾಶಿವಯ್ಯ , ಸಾಮಿಲ್ ನಟೇಶ್. ಶಿವನೇಹಳ್ಳಿ ಮಲ್ಲೇಶ್ , ರಾಜ್ ಕುಮಾರು , ನಿರಂಜನ್ , ಮಂಜುನಾಥ್. ರಂಗನಾಥ್ .ಹಾಗೂ ಗ್ರಾಮ ಪಂಚಾಯಿತಿ ಸದಸ್ಯಮಹಾರುದ್ರಸ್ವಾಮಿ. ಭಾಗವಹಿಸಿದ್ದರು.