ಎಂ ಎನ್ ಕೋಟೆ : ಗ್ರಾಮೀಣ ಭಾಗದ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಭಾಗದಲ್ಲಿ ಉಚಿತ ಅರೋಗ್ಯ ಶಿಬಿರ ಮಾಡುತ್ತಿರುವುದು ಸಂತಸ ತಂದಿದೆ ಎಂದು ಗ್ರಾಮ ಪಂಚಾಯತಿ ಸದಸ್ಯೆ ಲತಾ ಸೋಮಶೇಖರ್ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಮಂಚಲದೊರೆ ಗ್ರಾಮ ಪಂಚಾಯತಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೋಟರಿ ಕ್ಲಬ್ ತುಮಕೂರು ಸೆಂಟ್ರಲ್ ,ರೋಟರಿ ಬೆಂಗಳೂರು ಜೀವನ್ ಭೀಮಾನಗರ ,ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಹಾಗೂ ಗ್ರಾಮ ಪಂಚಾಯತಿ ಮಂಚಲದೊರೆ ಇವರ ಸಂಯುಕ್ತಾಶ್ರಯದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂತಹ ಆರೋಗ್ಯ ಶಿಬಿರಗಳನ್ನು ಗ್ರಾಮೀಣ ಭಾಗದಲ್ಲಿ ಮಾಡುವುದರಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಸಾಕಷ್ಟು ಅನುಕೂಲವಾಗುತ್ತದೆ ಕಣ್ಣು ಹೃದಯ ಇಸಿಜಿ ಮಧುಮೇಹ ಸೇರಿದಂತೆ ಎಲ್ಲಾ ರೀತಿಯ ಕಾಯಿಲೆಗಳಿಗೂ ಸಹ ಉಚಿತವಾಗಿ ಚಿಕಿತ್ಸೆಯನ್ನು ನೀಡುತ್ತಿದ್ದು ಕಣ್ಣಿನ ಶಸ್ತ್ರ ಚಿಕಿತ್ಸೆಯೂ ಸಹ ಉಚಿತವಾಗಿ ಮಾಡಲು ಮುಂದೆ ಬಂದಿರುವ ರೋಟರಿ ಕ್ಲಬ್ ಸಿಬ್ಬಂದಿಗಳಿಗೆ ನಾವು ಯಾವಾಗಲೂ ಚಿರಋಣಿಯಾಗಿರುತ್ತೇನೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಜಗಧೀಶ್ ಮಾತನಾಡಿ ಮಂಚಲದೊರೆ ಗ್ರಾಮ ಪಂಚಾಯಿತಿ ಗಡಿಭಾಗದಲ್ಲಿ ಇದೆ ದೊಡ್ಡ ಗ್ರಾಮವಾದರೂ ಆಸ್ಪತ್ರೆಯಿಲ್ಲ ಶಾಸಕರಿಗೆ , ಸಂಸದರಿಗೆ ಸಾಕಷ್ವು ಭಾರಿ ಮನವಿ ಕೊಟ್ಟರು ಸಹ ಇದುವರೆಗೂ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ ಚುನಾವಣೆ ಬಂದಾಗ ಮಾತ್ರ ಎಲ್ಲರೂ ಬಂದು ಅಸ್ವಾಶನೆ ಕೊಡುತ್ತಾರೆ ಚುನಾವಣೆಯ ಮುಗಿದ ಮೇಲೆ ನಮ್ಮಕಡೆ ತಿರುಗು ನೋಡುವರೇ ಇಲ್ಲದಂತಾಗಿದೆ ಸರ್ಕಾರ ಗಡಿ ಭಾಗದ ಆಗಿರುವುದರಿಂದ ಈ ಭಾಗದ ಜನರಿಗೆ ಆರೋಗ್ಯದ ದೃಷ್ಠಿಯಿಂದ ಮಂಚಲದೊರೆಯಲ್ಲಿ ಪ್ರಾಥಮಿಕ ಆರೋಗ್ಯಕೇಂದ್ರವನ್ನು ಕೊಡಬೇಕು ಜೂತೆಗೆ ವಯಸ್ಸದರಯ ವಯೋ ವೃದ್ದರು ಆಸ್ಪತ್ರೆಗೆ ಹೋಗಲು ಗುಬ್ಬಿಗೆ 50 ಕಿ.ಮೀ.ಹೋಗಬೇಕಿದೆ ಗ್ರಾಮೀಣ ಭಾಗದ ಜನರ ಬಗ್ಗೆ ಸರ್ಕಾರ ಕಾಳಜಿ ವಹಿಸಿ ತುರ್ತಾಗಿ ಮಂಚಲದೊರೆಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರವನ್ನು ಸ್ಥಾಪನೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಇದೆ ಸಂಧರ್ಭದಲ್ಲಿ ಶಿಬಿರದಲ್ಲಿ ವಿವಿಧ ತಜ್ಞ ವೈದ್ಯರುಗಳಿಂದ ಸ್ತೀರೋಗ ಮತ್ತು ಪ್ರಸೂತಿ,ಕಿವಿ ಮೂಗು ಮತ್ತು ಗಂಟಲು ಸಮಸ್ಯೆಗಳು, ಮಕ್ಕಳ ಆರೋಗ್ಯ ಸಮಸ್ಯೆಗಳು ,ನರರೋಗ ಪರೀಕ್ಷೆ,ಮೂಳೆ ಮತ್ತು ಕೀಲುರೋಗ ,ಹೃದಯ ರೋಗ ತಪಾಸಣೆ,ಪೈಲ್ಸ್ ,ಹರ್ನಿಯಾ,ಪಿತ್ತಕೋಶಗಳಲ್ಲಿ ಕಲ್ಲು,ಕಣ್ಣಿನ ಪರೀಕ್ಷೆ ಮತ್ತು ಕ್ಯಾನ್ಸರ್ ಪರೀಕ್ಷೆ ತಪಾಸಣೆಯನ್ನು ಮಾಡಲಾಯಿತ್ತು.ಸುಮಾರು ಹಳ್ಳಿಗಳಿಂದ ಬಂದ ರೈತರು ಆರೋಗ್ಯದ ಸಮಸ್ಯೆಗಳನ್ನು ತೊರಿಸಿಕೊಂಡರು.
ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿದ್ದಗಂಗಮ್ಮ ,ಉಪಾಧ್ಯಕ್ಷ ಕೆ.ಟಿ.ರಾಜು , ತಾಲ್ಲೂಕ್ ಪಂಚಾಯಿತಿ ಸದಸ್ಯೆ ಕರಿಯಮ್ಮ ರಮೇಶ್ , ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ನಲ್ಲೂರು ಸೋಮಶೇಖರ್ , ಸದಸ್ಯರಾದ ಲಕ್ಷ್ಮೀಕಾಂತ್ , ಲತಾ , ಕುಸುಮ , ಪಿಡಿಓ ರಾಜೇಂದ್ರ ಪ್ರಸಾದ್ , ಕಾರ್ಯದರ್ಶಿ ತಿಮ್ಮೇಗೌಡ, ರೋಟರಿ ಕ್ಲಬ್ ಅಧ್ಯಕ್ಷೆ ಪ್ರಮೀಳ ಗ್ರಾಮಸ್ಥರು ಭಾಗವಹಿಸಿದ್ದರು.