ಜಯಚಂದ್ರ ಅವರಿಗಿರುವ ನೀರಾವರಿ ಬದ್ದತೆ ಮಾದರಿ: ಸ್ವಾಮೀಜಿ


ಶಿರಾ: ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರಿಗಿರುವ ನೀರಾವರಿ ಬದ್ದತೆ ಇಂದಿನ ಯುವ ಪೀಳಿಗೆಯವರಿಗೆ ಮಾದರಿ ಎಂದು ಪಟ್ಟನಾಯಕನಹಳ್ಳಿ ಮಠದ ಪೀಠಾಧ್ಯಕ್ಷರಾದ ನಂಜಾವಧೂತ ಸ್ವಾಮೀಜಿ ಹೇಳಿದರು.
ಅವರು ತಾಲ್ಲೂಕಿನ ಪಟ್ಟನಾಯಕನಹಳ್ಳಿ ಮಠದ ವತಿಯಿಂದ ಹಮ್ಮಿಕೊಂಡಿದ್ದ 20ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಅಪ್ಪರ್ ಭದ್ರಾ ಯೋಜನೆಯಡಿ ಶಿರಾ ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ನೀರು ಹರಿಸುವ ಸಲುವಾಗಿ ತುಮಕೂರು ನಾಲೆ ಮಾಡಿಸುವುದರ ಹಿಂದೆ ಜಯಚಂದ್ರ ಅವರ ಕಳಕಳಿ, ಹೇಮಾವತಿ ನೀರನ್ನು ಮದಲೂರು ಕೆರೆಗೆ ಹರಿಸಲು ಅವರ ಶ್ರಮ ರಾಜ್ಯ ಸರ್ಕಾರ ಅನುದಾನವನ್ನು ನೀಡಲು ನಿರಾಕರಣೆ ಮಾಡಿದರು ಕೇಂದ್ರದಿಂದ ಅನುದಾನ ತಂದು ನುಡಿದಂತೆ ನಡೆದರು ಜೊತೆಗೆ ಎತ್ತಿನಹೊಳೆ ಯೋಜನೆಯಡಿ ಕೂಡ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಮೇಲ್ಭಾಗದ ಕೆರೆಗಳಿಗೆ ನೀರನ್ನು ಹಂಚಿಕೆ ಮಾಡಿಸಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆವಹಿಸಿ‌ ಮಾತನಾಡಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅಪ್ಪರ್ ಭದ್ರಾ ಯೋಜನೆಯಡಿ ಶಿರಾ ತಾಲ್ಲೂಕಿನ ಜನರಿಗೆ ಮೀಸಲಿರಿಸಿದ ನೀರಿನ ಹಂಚಿಕೆಯಲ್ಲಿ ತುಸು ಏರುಪೇರಾದರೂ ಸಹಿಸಿಕೊಂಡು ಕೂರುವ ಜಾಯಮಾನ ನನ್ನದಲ್ಲ ಎಂದ ಅವರು ಯೋಜನೆಯ ಮೂಲಸ್ವರೂಪ ಬದಲಾಯಿಸಿ ನೀರನ್ನು ಪೈಪ್ ಲೈನ್ ಮೂಲಕ ಕೆರೆಗೆ ಹರಿಸಿ ನೀರನ್ನು ಪೋಲಾಗದಂತೆ ತಡೆದಿದ್ದೇವೆ ಎನ್ನುವ ಮಾತು ಭಂಡತನದ್ದು ಮನುಷ್ಯತ್ವ ಇಲ್ಲದವರು ಇಂತಹ ಮಾತನ್ನು ಅಡಬೇಕು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎನ್.ಮೂರ್ತಿ, ಕೊರಟಗೆರೆ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ವೀರಕ್ಯಾತರಾಯ, ಮಾಜಿ ಜಿ.ಪಂ.ಸದಸ್ಯ ಎನ್.ರಾಮಕೃಷ್ಣಪ್ಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಗನಾಥ್, ತೋಟಗಾರಿಕೆ ಇಲಾಖೆಯ ಸಹ ನಿರ್ದೇಶಕ ತ್ಯಾಗರಾಜ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಯತೀಶ್ ಮತ್ತಿತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!