ಗ್ರಾಮೀಣ ರಸ್ತೆಗಳ ಅಳತೆ ನಿಯಮ ನಿಗದಿ ಮಾಡಬೇಕಿದೆ : ಶಾಸಕ ಎಸ್.ಆರ್.ಶ್ರೀನಿವಾಸ್.

ಗುಬ್ಬಿ: ರಾಷ್ಟ್ರೀಯ, ರಾಜ್ಯ ಹಾಗೂ ತಾಲ್ಲೂಕು ಮಟ್ಟದ ರಸ್ತೆಗೆ ನಿಗದಿಯಾದ ಅಳತೆ ನಿಯಮ ಗ್ರಾಮೀಣ ಭಾಗದ ರಸ್ತೆಗೂ ಅಳವಡಿಸಬೇಕಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲ್ಲೂಕಿನ ಹಾಗಲವಾಡಿ ಹೋಬಳಿ ಬೆಣ್ಣೆಹಳ್ಳಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ರಸ್ತೆ ಅಭಿವೃದ್ದಿಯ 2 ಕೋಟಿ ರೂಗಳ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಉತ್ತಮ ರಸ್ತೆಗೆ ರೈತರ ಸಹಕಾರ ಅಗತ್ಯವಿದೆ. ಆದರೆ ಹಲವು ಕಡೆ ರಸ್ತೆ ಅಗಲೀಕರಣಕ್ಕೆ ಸಹಕರಿಸುತ್ತಿಲ್ಲ. ಈ ಬಗ್ಗೆ ಸರ್ಕಾರ ಅಳತೆಯ ಒಂದು ನೂತನ ನಿಯಮ ರೂಪಿಸಬೇಕಿದೆ ಎಂದರು.ರಸ್ತೆಯ ಬದಿಯವರೆಗೆ ಉಳುಮೆ ಮಾಡುವ ಕೆಟ್ಟ ಆಲೋಚನೆ ಕೆಲ ರೈತರು ಮಾಡುತ್ತಾರೆ. ಕೆಲವೆಡೆ ಡಾಂಬರ್ ರಸ್ತೆಯನ್ನೇ ಹೊಲ ಮಾಡಿಕೊಂಡು ಬೇಸಾಯ ಮಾಡಿದ್ದ ನಿದರ್ಶನವಿದೆ. ತಮ್ಮ ಹೊಲದಲ್ಲಿ ಕೆಲಸ ಮಾಡುವುದು ಸೂಕ್ತ ಎಂದ ಅವರು ಅಗಲೀಕರಣ ಮಾಡಲು ಸಹ ಅಡ್ಡಿ ಪಡಿಸಿ ಇತ್ಯರ್ಥ ಮಾಡಲು ಪೊಲೀಸ್ ಮಧ್ಯೆ ತರಬೇಕಾಗಿದೆ. ಕೆಲವೆಡೆ ನ್ಯಾಯಾಲಯ ಮೆಟ್ಟಿಲೇರುವ ಪ್ರವೃತ್ತಿ ಸಹ ನಡೆದಿದೆ ಎಂದರು.ಹಾಗಲವಾಡಿ ಭಾಗದಲ್ಲಿ ರಸ್ತೆ ಕಾಮಗಾರಿ ನಡೆದಿದೆ. ಬೆಟ್ಟದಹಳ್ಳಿ ಸೋಮಲಾಪುರ ರಸ್ತೆ ಗ್ಯಾರೆಹಳ್ಳಿ ವರೆಗೆ ನಿರ್ಮಿಸಲಾಗಿತ್ತು. ಮುಂದಿನ ರಸ್ತೆ ಶೀಘ್ರದಲ್ಲಿ ದುರಸ್ಥಿ ಆಗಲಿದೆ. ಹರದಗೆರೆ ಸೇತುವೆ ರಸ್ತೆ, ಹಲಸಿನಕೆರೆ ದುರಸ್ಥಿ ಹಾಗೂ ಜಂಗಲ್ ತೆರವು ಕೆಲಸ ಮಾಡಲಾಗುತ್ತಿದೆ ಎಂದ ಅವರು ಎತ್ತಿನಹೊಳೆ ಮೂಲಕ ಮಠದಹಳ್ಳ ಕೆರೆಗೆ ನೀರು ಹರಿಸುವ ಕೆಲಸ ಆಗಲಿದೆ. ಈ ಜೊತೆಗೆ ರಾಜೀನಾಮೆ ನಂತರ ಯಾವ ರೀತಿ ಸ್ಪರ್ಧಿಸುವ ನಿಟ್ಟಿನಲ್ಲಿ ಕ್ಷೇತ್ರದ ಜನತೆಗೆ ಹೊಸ ಕಾರ್ಯಕ್ರಮ ರೂಪಿಸಿ ಪ್ರಣಾಳಿಕೆ ಬಿಡುಗಡೆ ಮಾಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಶಂಕರಪ್ಪ, ಯೋಗೀಶ್, ಯೋಗೀಶ್ವರ್, ಯಮುನಾ ರಮೇಶ್, ಮುಖಂಡರಾದ ರಮೇಶ್, ಶಿವಣ್ಣ, ಲಿಂಗರಾಜು, ನಾರಾಯಣಪ್ಪ, ಗುತ್ತಿಗೆದಾರ ಮಂಜಣ್ಣ ಇತರರು ಇದ್ದರು.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!