ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸಾಧನೆ ಜನ ಸಾಮಾನ್ಯರಿಗೆ ತಿಳಿಸಿ: ಜಿ.ಎನ್.ಬೆಟ್ಟಸ್ವಾಮಿ

ಎಂ ಎನ್ ಕೋಟೆ : ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನ ಸಾಮಾನ್ಯರಿಗೆ ತಿಳಿಸಬೇಕಿರುವುದು ಪ್ರತಿಯೊಬ್ಬ ಕಾರ್ಯಕರ್ತರ ಜವಬ್ದಾರಿಯಾಗಿದೆ ಎಂದು ಬಿಜೆಪಿ ಮುಖಂಡ ಜಿ.ಎನ್.ಬೆಟ್ಟಸ್ವಾಮಿ ತಿಳಿಸಿದರು.

ಗುಬ್ಬಿ ತಾಲ್ಲೂಕಿನ ಸೋಮಲಾಪುರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಜೆಪಿ ಪಕ್ಷದ ಬೂತ್ ಮಟ್ಟದ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿ ಬೂತ್ ಮಟ್ಟದ ಕಾರ್ಯಕರ್ತರ ಮನೆ ಮನೆಗೆ ಸರ್ಕಾರದ ಯೋಜನೆಗಳನ್ನು ತಿಳಿಸಬೇಕು.ಪ್ರತಿ ಬೂತ್ ಮಟ್ಟದಲ್ಲಿ ಬಿಜೆಪಿ ಸಾಧನೆ‌ ಬಿಂಬಿಸುವ ಗೋಡೆ ಬರಹ , ಡಿಜಿಟಲ್ ಬರಹ , ಪಕ್ಷದ ಸ್ವಿಕ್ಕರ್ ಅಂಟಿಸುವ ಮುಖಾಂತರ ಕಾರ್ಯಕರ್ತರನ್ನು ಒಗ್ಗೂಡಿಸಬೇಕು. ಜೂತೆಗೆ ಜ.21ರಿಂದ 29ರ ವರೆಗೆ ಪ್ರತಿ ಬೂತ್‌ ಮಟ್ಟದಲ್ಲಿ ಬಿಜೆಪಿ ಸಾಧನೆಗಳನ್ನು ತಿಳಿಸಬೇಕು. ನರೇಂದ್ರಮೋಧಿಯವರು ಪಿಎಂ‌ ಕಿಸಾನ್ ಯೋಜನೆಯಲ್ಲಿ ವರ್ಷದಲ್ಲಿ ಹತ್ತು ಸಾವಿರ ಹಣವನ್ನು ರೈತರಿಗೆ ನೀಡಲಾಗುತ್ತಿದೆ.ಯೋಜನೆಯ ಲಾಭವನ್ನು ಖಾತೆದಾರರು ಪಡೆಯುತ್ತಿದ್ದಾರೆ ಎಂದರು.

ಗುಬ್ಬಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸದೃಢವಾಗಿದೆ ಯಾರೇ ಅಭ್ಯರ್ಥಿಯಾಗಲಿ ಅವರ ಗೆಲುವಿಗೆ ನಾವೆಲ್ಲರೂ ಸಹ ಒಗ್ಗಾಟಾಗಿ ಗೆಲುವಿಗೆ ಶ್ರಮಿಸಬೇಕು ಈ ಭಾರಿ ಹೈಕಮಾಂಡ್ ಒಬ್ಬರಿಗೆ ಟಿಕೇಟ್ ನೀಡುತ್ತಿದ್ದು ಈ ಭಾರಿ ಗುಬ್ಬಿಯಲ್ಲಿ ಬಿಜೆಪಿ ಗೆಲುವು ಖಚಿತ ಆದ್ದರಿಂದ ಮುಂಬರುವ ದಿನಗಳಲ್ಲಿ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು ಸರ್ಕಾರದ ಸಾಧನೆಗಳನ್ನು ರೈತರಿಗೆ ತಿಳಿಸಬೇಕು ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ ಜಿಲ್ಲಾ ಎಸ್ ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ , ತಾಲ್ಲೂಕು ಒಬಿಸಿ ಮೋರ್ಚಾ ಅಧ್ಯಕ್ಷ ಎಂ ಎನ್ ಭೀಮ ಶೆಟ್ಟಿ , ತಾಲ್ಲೂಕ್ ಪಂಚಾಯಿತಿ ಸದಸ್ಯ ಶಿವರತ್ನ ಮಹೇಶ್ , ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ , ಉಪಾಧ್ಯಕ್ಷ ದೀಲೀಪ್ ಕುಮಾರು , ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್ , ಮುಖಂಡರಾದ ಸೋಮಣ್ಣ , ಶಿವರಾಜು ಪಾಟೇಲ್ , ನಟರಾಜು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!