ಪ್ರತಿ ಗ್ರಾಮಗಳಲ್ಲಿ ವಾಲ್ಮೀಕಿ ಜಾತ್ರೆ ಪ್ರಚಾರ

ಪಾವಗಡ. ವಾಲ್ಮೀಕಿ ನಾಯಕ ಸಮಾಜದ ಮಹಾಸಂಸ್ಥಾನ ಹರಿಹರ ರಾಜನಹಳ್ಳಿಯ ಗುರುಪೀಠದಲ್ಲಿ ಫೆಬ್ರವರಿ 8 ಹಾಗೂ 9 ರಂದು ನಡೆಯುವ ವಿಶ್ವಕವಿ ಮಹರ್ಷಿ ವಾಲ್ಮೀಕಿಯ 5ನೇ ವರ್ಷದ ಜಾತ್ರೆ ಹಾಗೂ ಒಂದು ಕೋಟಿ 31 ಲಕ್ಷ ರೂಪಾಯಿ ವೆಚ್ಚದ ನೂತನ ರಥ ಲೋಕಾರ್ಪಣೆ ಕಾರ್ಯಕ್ರಮದ ಬಗ್ಗೆ ಪಾವಗಡ ತಾಲೂಕಿನಲ್ಲಿ ಪ್ರತಿ ಗ್ರಾಮಗಳಲ್ಲೂ ಸಹ ಜಾತ್ರಾ ಸಮಿತಿಯ ವತಿಯಿಂದ ಪ್ರಚಾರ ಹಾಗೂ ಜಾತ್ರೆಗೆ ಆಹ್ವಾನಿಸಲಾಗುತ್ತಿದೆ

ಪಾವಗಡ ತಾಲೂಕು ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷ ಹಾಗೂ ಕಸಬಾ ವಿ. ಎಸ್. ಎಸ್ .ಎನ್. ಸಿ .ಇ .ಓ ನಾರಾಯಣ್ ಮೂರ್ತಿರವರು ಇಂದು ಮುಗ್ದಾಳ ಬೆಟ್ಟ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಜಾತ್ರೆಯ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದವರು ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆಯ ಹೆಸರಿನಲ್ಲಿ ವಾಲ್ಮೀಕಿ ಸಮುದಾಯವನ್ನು ಜಾಗೃತಿಗೊಳಿಸುತ್ತಿದ್ದು ಸಮುದಾಯದ ವಿವಿಧ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲು ಹಾಗೂ ಕರ್ನಾಟಕ ರಾಜ್ಯ ವಾಲ್ಮೀಕಿ ಸಮುದಾಯದ ಶಕ್ತಿಪ್ರದರ್ಶನ ನಡೆಸಲು ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆಯನ್ನು ರಾಜನಹಳ್ಳಿ ಶ್ರೀಗಳ ನೇತೃತ್ವದಲ್ಲಿ ಶ್ರೀಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಆದ್ದರಿಂದ ತಾಲೂಕಿನ ಸಮಸ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು ಶ್ರೀ ಮಠದ ಅಭಿವೃದ್ಧಿಗೆ ತನು ಮನ ಧನ ಸಹಾಯ ಮಾಡುವಂತೆ ತಿಳಿಸಿದರು

ಈ ಸಂದರ್ಭದಲ್ಲಿ ಜಾತ್ರಾ ಸಮಿತಿಯ ಸದಸ್ಯರುಗಳಾದ . ಭಾಸ್ಕರ್ ನಾಯಕ. ಅಂಬಿಕಾ ರಮೇಶ್ .ರಂಗಮ್ಮ. ಸರೋಜಮ್ಮ. ಜಯಮ್ಮ. ಮುಂತಾದವರು ಭಾಗವಹಿಸಿದ್ದರು

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!