ಗುಬ್ಬಿ ವಿಧಾನ ಸಭಾ ಕ್ಷೇತ್ರದ ಮತದಾರರ ಅಂತಿಮ ಪಟ್ಟಿ ಪ್ರಕಟ : ತಹಶೀಲ್ದಾರ್ ಬಿ.ಆರತಿ.

ಗುಬ್ಬಿ: ಚುನಾವಣಾ ಪ್ರಕಿಯೆ ಚುರುಕಿನಲ್ಲಿ ನಡೆದು ಗುಬ್ಬಿ ವಿಧಾನ ಸಭಾ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಿ ಅಂತಿಮ ಪಟ್ಟಿ ಆಯಾ ಮತಗಟ್ಟೆಯಲ್ಲಿ ಪ್ರಕಟಗೊಳಿಸಲಾಗಿದೆ. ಮತದಾರರು ಪಟ್ಟಿ ಪರಿಶೀಲಿಸಲು ತಹಶೀಲ್ದಾರ್ ಬಿ.ಆರತಿ ಮನವಿ ಮಾಡಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಂತಿಮಗೊಂಡ ಪಟ್ಟಿಯಂತೆ ಒಟ್ಟು 1,77,467 ಮತದಾರರು ಇದ್ದಾರೆ. ಈ ಪೈಕಿ 88,921 ಪುರುಷರು, 88,538 ಮಹಿಳೆಯರು ಹಾಗೂ ಇತರೆ 8 ಮಂದಿ ಇದ್ದಾರೆ ಎಂದು ವಿವರಿಸಿದರು.

ತಾಲ್ಲೂಕಿನ ಒಟ್ಟು 212 ಮತಗಟ್ಟೆಯಲ್ಲಿ ಪ್ರಕಟಗೊಂಡ ಮತದಾರರ ಪೈಕಿ 971 ವಿ ಐ ಪಿ ಮತದಾರರು, 2069 ವಿಕಲಚೇತನರಿದ್ದು, ಆಧಾರ್ ಜೋಡಣೆಗೆ ಸಹಕರಿಸಿದ ಶೇ.92.89 ರಷ್ಟು ಅಂದರೆ 1,64,469 ಮಂದಿ ಮತದಾರರು ನಮ್ಮಲ್ಲಿದ್ದಾರೆ ಎಂದ ಅವರು ಮತದಾರ ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದು, ಪದವಿ ಕಾಲೇಜು, ಇಂಜಿನಿಯರ್ ಕಾಲೇಜುಗಳಲ್ಲಿ ಸೇರ್ಪಡೆಗೆ ವಿಧ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಈ ವರ್ಷಕ್ಕೆ 18 ತುಂಬಿದ ಮಕ್ಕಳು ಸೇರಿದಂತೆ ಹೊಸ ಮತದಾರರನ್ನು ಪಟ್ಟಿಗೆ ಸೇರ್ಪಡೆ ಮಾಡುವ ಕಾರ್ಯ ಮಾಡಲಾಗಿ ಒಟ್ಟು 5406 ಮತದಾರರು ಹೊಸ ಸೇರ್ಪಡೆ ಎನಿಸಿದ್ದಾರೆ. ಮನೆ ಮನೆ ತಲುಪಿ ವಿಳಾಸ ಪತ್ತೆ ಹಚ್ಚಿ 11,660 ಕೈ ಬಿಡತಕ್ಕ ಮತದಾರರು ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು.

ಚುನಾವಣೆಯ ಸಿದ್ಧತೆ ಕೆಲಸಕ್ಕೆ ಮುನ್ನ ನಡೆಯುವ ಎಲ್ಲಾ ತಯಾರಿ ತಾಲ್ಲೂಕು ಆಡಳಿತ ವ್ಯವಸ್ಥಿತವಾಗಿ ನಡೆದಿದೆ. ಈಗಾಗಲೇ ಮತಗಟ್ಟೆ ಭೇಟಿ ಮಾಡುವ ಕೆಲಸ ಖುದ್ದು ನಾನು ನಡೆಸಿದ್ದು, 90 ಕ್ಕೂ ಅಧಿಕ ಮತಗಟ್ಟೆ ವೀಕ್ಷಣೆ ನಡೆಸಿ ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸೂಚಿಸಲಾಗಿದೆ. ವಿದ್ಯುತ್, ರಾಂಪ್, ಶೌಚಾಲಯ, ಕುಡಿಯುವ ನೀರು ಹೀಗೆ ಎಲ್ಲಾ ಸವಲತ್ತು ಮಾಡಲಾಗುತ್ತಿದೆ ಎಂದ ಅವರು ಇದೇ ತಿಂಗಳ 25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯಂದು 1594 ಎಪಿಕ್ ಕಾರ್ಡ್ ಗಳನ್ನು ಯುವ ಮತದಾರರು ಪಡೆಯಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚುನಾವಣಾ ಶಿರಸ್ತೇದಾರ್ ವೆಂಕಟರಂಗನ್ ಇದ್ದರು.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!