ಮೂರು ದಿನಗಳಲ್ಲಿ ಪಿಂಚಣಿ ಮಂಜೂರಾತಿ ಪತ್ರ


ಹೊಸಕೆರೆ : ಗಡಿ ಭಾಗದ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು‌ ನಮ್ಮ ಇಲಾಖೆ ಮುಂದ್ದಾಗಿದ್ದು ಪ್ರತಿ‌ ಮನೆ ಮನೆಗೆ ಗ್ರಾಮಲೆಕ್ಕಿಗರು ಭೇಟಿ ನೀಡಿ ಮೂರು ದಿನದ ಒಳಗಡೆ ಪಿಂಚಣಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಹಶೀಲ್ದಾರ್ ಬಿ.ಆರತಿ ಹೇಳಿದರು.
ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಮತ್ತಿಕೆರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ‌ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರದ ಯೋಜನೆಗಳು ನಿಮ್ಮ ಮನೆ ಬಾಗಿಲಿದೆ ಬರುತ್ತಿದ್ದು ರೈತರು ಸದುಪಯೋಗಪಡಿಸಿಕೊಳಬೇಕು ಎಂದರು.
ಗಡಿ ಭಾಗದಿಂದ ರೈತರು ತಾಲ್ಲೂಕ್ ಕಚೇರಿಗೆ ಬರಲು ಸಾಧ್ಯವಾಗುವುದಿಲ್ಲ ಅಧಿಕಾರಿಗಳೇ ನಿಮ್ಮ ಗ್ರಾಮಕ್ಕೆ ಬಂದು ತಮ್ಮ ಅಹವಾಲುಗಳನ್ನು ಸ್ವೀಕರಿಸಿ ಕೆಲಸಗಳನ್ನು ಮಾಡಿಕೊಡುವ ಉದ್ದೇಶವೇ ಜಿಲ್ಲಾಧಿಕಾರಿ ನಡೆ ಹಳ್ಖಿ ಕಡೆ ಕಾರ್ಯಕ್ರಮವನ್ನು ಸರ್ಕಾರ ಮಾಡಿದೆ ಪ್ರತಿ ತಿಂಗಳು ಈ ಕಾರ್ಯಕ್ರಮ ನಡೆಯಲಿದೆ ರೈತರು ತಮ್ಮ ‌ಸಮಸ್ಯೆಗಳು ಇದ್ದರೆ ಸಭೆಯಲ್ಲಿ ತಿಳಿಸಬಹುದು ಎಂದರು.
ಕಳೆದ ಒಂದು ವರ್ಷದಲ್ಲಿ ಹಾಗಲವಾಡಿ ಹೋಬಳಿಗೆ ಕಂದಾಯ ಇಲಾಖೆಯಿಂದ 794 ಪಿಂಚಣಿ ಹಕ್ಕು ಪತ್ರಗಳನ್ನು ನೀಡಲಾಗಿದೆ.604. ತಿದ್ದು ಪಡಿ ಅರ್ಜಿಗಳನ್ನು ವಿಲೇವರಿ ಮಾಡಲಾಗಿದೆ. ಕೆಲ ಅರ್ಜಿಗಳು ಬಾಕಿ‌ ಇದ್ದು ಅವುಗಳನ್ನು ಕೂಡ ಶೀಘ್ರದಲ್ಲಿ ರೈತರಿಗೆ ವಿಲೇವಾರಿ ಮಾಡಿಕೊಡಲಾಗುತ್ತದೆ ಎಂದ ಅವರು ಸಂಧ್ಯಾ ಸುರಕ್ಷ , ವಿದವಾ ವೇತನ ವೃದ್ಧಾಪ್ಯ ವೇತನವನ್ನು ಎರಡು ಮೂರು ದಿನದ ಒಳಗಡೆ ಮಾಡಿಕೊಡಲಾಗುತ್ತದೆ, ರೈತರು ಸರಕಾರದ ಸೌಲಭ್ಯಗಳನ್ನು ಪಡೆದುಕೊಳಬೇಕು ಎಂದು ತಿಳಿಸಿದರು.
ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕದರಯ್ಯ. ಇಒ ಪರಮೇಶ್ ಕುಮಾರು. ತಾಲ್ಲೂಕು ಆರೋಗ್ಯಾಧಿಕಾರಿ ಬಿಂದು ಮಾದವ್. ವಲಯ ಅರಣ್ಯಧಿಕಾರಿ ದುಗ್ಗಪ್ಪ. ಕಂದಯಾಧಿಕಾರಿ ಗುರುಪ್ರಸಾದ್. ಪಶುಸಂಗೋಪನೆ ಸಹಾಯಕ ನಿರ್ದೇಶಕ ಮಹೇಶ್. ಸಾಮಾಜ ಕಲ್ಯಾಣ ಇಕಾಖೆ ಅಧಿಕಾರಿ ರಾಮಣ್ಣ. ಸಿಡಿಪಿಓ ಮಂಜುನಾಥ್. ಲೋಕಪಯೊಗಿ ಇಂಜಿನಿಯರ್ ವೆಂಕಟೇಶ್ ಪಿಡಿಓ ತಿಪ್ಪೇಸ್ವಾಮಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!