ಹೊಸಕೆರೆ : ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಭಿಯಾನದ ಮೂಲಕ ಜನ ಸಾಮಾನ್ಯರಿಗೆ ಪಕ್ಷದ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಹಾಗಲವಾಡಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೇ ನೀಡಿ ಮಾತನಾಡಿದ ಅವರು ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಮಾಡಿರುವ ಜನಪರ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಿಳಿಸುವ ಮೂಲಕ ಮುಂಬರುವ ಚುನಾವಣೆಯಲ್ಲಿ ಮತ ಕೇಳಲಿದ್ದೇವೆ. ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಮೂಲಕ ಕಾರ್ಯಕರ್ತರು ಮತದಾರರನ್ನು ಮುಟ್ಟಬೇಕಿದೆ.ಬಿಜೆಪಿ ಗೆಲುವಿಗೆ ಈ ಯೋಜನೆಗಳು ಪ್ರತಿ ಮನೆಗೆ ತಲುಪಬೇಕು ಎಂದ ಅವರು ನರೇಂದ್ರ ಮೋಧಿಯವರು ಬಿಜೆಪಿ ಸರ್ಕಾರದ ಹೆಗ್ಗುರುತ್ತಾಗಿದ್ದು ವಿಜಯ ಸಂಕಲ್ಪ ಯಾತ್ರೆ ಸಂಧರ್ಭದಲ್ಲಿ ಮನೆ ಮನೆಗೂ ಬಿಜೆಪಿ ಸರ್ಕಾರದ ಸಾಧನೆಯ ಕರಪತ್ರಗಳನ್ನು ಕೊಡುವುದರ ಮೂಲಕ ಸರ್ಕಾರದ ಸಾಧನೆಗಳನ್ನು ತಿಳಿಸಬೇಕು ಎಂದರು.
ರಾಷ್ವೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ಇಂದು ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೇ ಕೊಟ್ಟಿದ್ದಾರೆ ಎಂದ ಅವರು ಬಿಜೆಪಿ ಸರ್ಕಾರ ಪಿಎಂ ಕಿಸಾನ್ ಯೋಜನೆ ಮುಖಾಂತರ ರೈತರಿಗೆ ಹತ್ತು ಸಾವಿರ ಹಣವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ವೃದ್ದಪ್ಯ ವೇತನ ಪತ್ರವನ್ನು 24 ಗಂಟೆಯೊಳಗೆ ರೈತರಿಗೆ ಕೊಡಿವುದರ ಮೂಲಕ ಬಿಜೆಪಿ ಸರ್ಕಾರ ಜನ ಸಾಮಾನ್ಯರಿಗೆ ಹತ್ತಿರವಾಗುತ್ತಿದೆ ಜೂತೆಗೆ ಭಾಗ್ಯಲಕ್ಷ್ಮೀ ಯೋಜನೆ , ಆಯುಷ್ಮನ್ ಭಾರತ್ , ಸುಕನ್ಯ ಯೋಜನೆ ಅನೇಕ ಯೋಜನೆಗಳನ್ನು ಸರ್ಕಾರ ರೈತರಿಗೆ ಕೊಡುತ್ತಿದ್ದು ರೈತರು ಸದುಪಯೋಗಪಡಿಸಿಕೊಳಬೇಕು ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ತಾಲ್ಲೂಕ್ ಪಂಚಾಯಿತಿ ಸದಸ್ಯರಾದ ಹೆಚ್ .ಜಿ. ಯೋಗೀಶ್ , ಹೆಚ್.ಎಸ್.ದಯಾನಂದ್ , ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ವೈ ಆರ್ ವಿಶ್ವನಾಥ್ , ರೈತ ಮೋರ್ ತಾಲ್ಲೂಕ್ ಕಾರ್ಯದರ್ಶಿ ಮಹಾದೇವ್ , ಮುಖಂಡರಾದ ಎಸ್ .ಪ್ರಕಾಶ್ , ಹೆಚ್. ನಾಗೇಂದ್ರಪ್ಪ , ಹೆಚ್.ಜಿ.ಹರೀಶ್ , ದರ್ಶನ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.