ಗುಬ್ಬಿ : ಗುಬ್ಬಿ ಕ್ಷೇತ್ರದಲ್ಲಿ ಜನಪರ ಅಭಿವೃದ್ದಿ ಕೆಲಸವನ್ನು ಮಾಡಿರುವ ಗುಬ್ಬಿ ಶಾಸಕ ವಾಸಣ್ಣ ಅವರ ಭಾವಚಿತ್ರದೊಂದಿಗೆ ಕಳೆದ ಇಪ್ಪತ್ತು ವರ್ಷದ ಅಭಿವೃದ್ದಿ ಕೆಲಸ ಬಿಂಬಿಸುವ ನೂತನ ವರ್ಷದ ಕ್ಯಾಲೆಂಡರ್ ಗಳನ್ನು ತಾಲ್ಲೂಕಿನ ತ್ಯಾಗಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಸಣ್ಣ ಅಭಿಮಾನಿಗಳು ಅದಲಗೆರೆ ಗ್ರಾಮದಲ್ಲಿ ಹಂಚಿದರು.
ಕ್ಯಾಲೆಂಡರ್ ಪ್ರತಿ ಮನೆಗೆ ತಲುಪಿಸಿ ಮಾತನಾಡಿದ ದಲಿತ ಮುಖಂಡ ಈಶ್ವರಯ್ಯ, ಸತತ ನಾಲ್ಕು ಬಾರಿ ನಿರಂತರ ಗೆಲುವು ಸಾಧಿಸಿದ ಶಾಸಕ ವಾಸಣ್ಣ ಜನಮುಖಿ ಕೆಲಸ ಮಾಡಿದ್ದಾರೆ. ಮಾಡುತ್ತಲೇ ಇದ್ದಾರೆ. ಬಡವರು ಮಧ್ಯಮ ವರ್ಗದ ಜನರಿಗೆ ಹತ್ತಿರವಾದ ಇವರು ದೀನ ದಲಿತರ ಪರ ಕೆಲಸ ಮಾಡುತ್ತಾ ಜನರ ಮನಸ್ಸಿನಲ್ಲಿ ನಿಂತಿದ್ದಾರೆ. ಅವರ ಅಭಿವೃದ್ದಿ ಕೆಲಸ ಇಂದಿಗೂ ಇಡೀ ಕ್ಷೇತ್ರದಲ್ಲಿ ಬಿಂಬಿತವಾಗಿದೆ ಎಂದರು.

ಜಾತ್ಯತೀತ ನಿಲುವು ತಾಳಿದ ಶಾಸಕರು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಾಗುವ ವಿಶೇಷ ಗುಣ ಹೊಂದಿದ್ದಾರೆ. ನಿಟ್ಟೂರು ಹೋಬಳಿ ತ್ಯಾಗಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಜನರು ಶಾಸಕರ ಕೆಲಸದ ಬಗ್ಗೆ ಸಕಾರಾತ್ಮಕ ಸ್ಪಂದನೆ ತೋರುತ್ತಿದ್ದಾರೆ. ಕ್ಯಾಲೆಂಡರ್ ಹಂಚುವ ವೇಳೆ ಮತ್ತೊಮ್ಮೆ ವಾಸಣ್ಣ ಗೆಲುವಿಗೆ ಅಭಿಮತ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಐದನೇ ಬಾರಿಯೂ ವಾಸಣ್ಣ ಶಾಸರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ನಾಗೇಂದ್ರ ಕುಮಾರ್, ಮುಖಂಡರಾದ ಮೂಡ್ಲಗಿರಯ್ಯ, ದೇವರಾಜು, ಸುರೇಶ್, ವೆಂಕಟೇಶ್, ಕೃಷ್ಣಯ್ಯ ಇತರರು ಇದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.