ನಮ್ಮ ಶಾಸಕರಿಗೆ ಜೆಡಿಎಸ್ ನಿಂದ ಅನ್ಯಾಯ


ಹೊಸಕೆರೆ : ಪ್ರತಿ ಶನಿವಾರವು ವಾಸಣ್ಣ ಅಭಿಮಾನಿ ಬಳಗದಿಂದ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಾ ಬಂದಿದ್ದು, ಇಂದು ಮಾರಶೆಟ್ಟಿಹಳ್ಳಿ ಗ್ರಾಮದಲ್ಲಿ ರಾಜೀನಾಮೆ ಪರ್ವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮುಖಂಡ ಶಶಿಧರ್ ಮಾಧ್ಯಮದವರೊಂದಿಗೆ ಮಾತನಾಡಿ ಜೆಡಿಎಸ್ ಪಕ್ಷದಲ್ಲಿ ಸಾಕಷ್ಟು ಅನ್ಯಾಯ ಮಾಡಿದ ಹಿನ್ನಲೆಯಲ್ಲಿ ನಾವು ದೂರ ಇದ್ದೇವೆ ಈ ಕಾರ್ಯಕ್ರಮ ಮಾಡುವುದಕ್ಕೆ ಕಾರಣವೇ ಜೆಡಿಎಸ್ ಪಕ್ಷ ಹಾಗೂ ಶ್ರೀನಿವಾಸ್ ಅವರು ಎಲ್ಲಾ ಸಮುದಾಯದವರ ಜೊತೆಗೆ ಇರುವ ನಾಯಕ ಅವರು ಎಲ್ಲಿ ಹೋದರು ನಾವು ಅಲ್ಲಿ ಹೋಗುತ್ತೇವೆ ಎಂದು ತಿಳಿಸಿದರು.

ಗ್ರಾಮ ಪಂಚಾಯತಿ ಸದಸ್ಯ ಮುನೇಶ್ ಮಾತನಾಡಿ ಜೆಡಿಎಸ್ ಪಕ್ಷವು ನಮ್ಮ ಶಾಸಕರಾದ ಎಸ್ ಆರ್ ಶ್ರೀನಿವಾಸ್ ಅವರನ್ನ ಹೊರ ಹಾಕಿದ ಮೇಲೆ ಅವರ ಅನುಯಾಯಿಗಳು ಯಾರು ಇರುವುದು ಸೂಕ್ತವಲ್ಲ. ಏಕೆಂದರೆ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ವಾಸಣ್ಣ ಅವರಿಗೆ ಬೆಲೆ ಕೊಡದೇ ಅವಮಾನ ಮಾಡಿದ್ದು, ಯಾವುದೇ ಕಾರಣಕ್ಕೂ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಇದೆಂದೂ ಕಾಣದ ಬಹುಮತದೊಂದಿಗೆ ಮತ್ತೊಮ್ಮೆ ಶಾಸಕರಾಗಿ ಸಚಿವರಾಗಲಿದ್ದಾರೆ ಎಂದರು.

ದಲಿತ ಮುಖಂಡ ಕುಂದರನಹಳ್ಳಿ ನಟರಾಜು ಮಾತನಾಡಿ ಶಾಸಕರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿಲ್ಲ ಈ ಬಾರಿ ಶಾಸಕ ಶ್ರೀನಿವಾಸ್ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಗೆಲ್ಲುವುದು ಶತಸಿದ್ಧ ನಮ್ಮ ದಲಿತ ಸಮುದಾಯಕ್ಕೆ ಎಲ್ಲಾ ರೀತಿಯ ಸಹಕಾರವನ್ನು 20 ವರ್ಷದಿಂದ ನೀಡುತ್ತಿರುವ ಶಾಸಕರು ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ ಅವರು ಎಲ್ಲಿ ನಾವು ಅಲ್ಲಿ ಹೋಗುತ್ತೇವೆ ಎಂದು ತಿಳಿಸಿದರು.

ಗ್ರಾಮ ಪಂಚಾಯತಿ ಮಾಜಿ ಸದಸ್ಯ ನಾಗರಾಜು ಮಾತನಾಡಿ ಶ್ರೀನಿವಾಸ್ ಅವರು ಎಲ್ಲೇ ಯಾವ ಪಕ್ಷಕ್ಕೆ ಹೋದ್ರು ಸಹ ನಾವು ಅಲ್ಲೇ ಹೋಗುತೇವೆ ಇಲ್ಲಿರುವುದು ಸಲ್ಪ ಅವರ ಅಭಿಮಾನಿಗಳು ಮಾತ್ರ ಆದರೆ ಇಡೀ ತಾಲ್ಲೂಕಿನಲ್ಲಿ ದೊಡ್ಡ ಮಟ್ಟದ ಅಭಿಮಾನಿಗಳು ಇದ್ದಾರೆ ಎಂದು ತಿಳಿಸಿದರು.

ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯತಿಯ ಸುಮಾರು ಕಾರ್ಯ ಕರ್ತರು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶಂಕರಪ್ಪ, ಶಶಿಧರ್ , ಸಿದ್ದಲಿಂಗಯ್ಯ, ರಾಜಪ್ಪ, ಪಾಲಾಕ್ಷಯ್ಯ, ನಾಗಣ್ಣ, ದೇವರಾಜು, ಚಿಕ್ಕಣ್ಣ, ಪಣಿಯೇಂದ್ರ ಮುನಿ, ಬಸವರಾಜು ಮಾರಶೆಟ್ಟಿಹಳ್ಳಿ, ಆನಂದಪ್ಪ, ದೊಡ್ಡಯ್ಯ,ಕುಮಾರ್, ಸಿದ್ದಗಂಗಯ್ಯ, ರವೀಶ್, ಜಯಣ್ಣ, ಶೇಖರ್, ಕೆ.ಆರ್.ವೆಂಕಟೇಶ್ ಹಾಗೂ ವಾಸಣ್ಣ ಅಭಿಮಾನಿ ಬಳಗದ ಮುಖಂಡರು ಕಾರ್ಯಕರ್ತರು ಹಾಗೂ ಇನ್ನಿತರರು ಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!