ಗುಬ್ಬಿ: ಪಟ್ಟಣದ 4 ನೇ ವಾರ್ಡ್ ಗಟ್ಟಿ ಲೇ ಔಟ್ ಬಡಾವಣೆಯ ಪ್ರಿಯಾ ಶಾಲೆಯ ಹಿಂಬದಿಯಲ್ಲಿ ಸಿಸಿ ರಸ್ತೆಗೆ ಪಟ್ಟಣ ಪಂಚಾಯಿತಿ ಸದಸ್ಯರಾದ ಜಿ.ಸಿ.ಕೃಷ್ಣಮೂರ್ತಿ, ಜಿ.ಆರ್.ಶಿವಕುಮಾರ್ ಹಾಗೂ ಶಶಿಕುಮಾರ್ ಗುದ್ದಲಿ ಪೂಜೆ ನೆರವೇರಿಸಿದರು.
ಪಟ್ಟಣದ ಕೆಲ ವಾರ್ಡ್ ಗಳಲ್ಲಿ ಉಳಿಕೆ ರಸ್ತೆ ಕೆಲಸಗಳಿಗೆ ಮೀಸಲಿಟ್ಟ 11 ಲಕ್ಷ ರೂಗಳ ಕೆಲಸದಲ್ಲಿ ಪ್ರಿಯಾ ಶಾಲೆಯ ಹಿಂಬದಿಯಲ್ಲಿ ಉಳಿಕೆ ರಸ್ತೆಗೆ ಕಾಂಕ್ರೀಟ್ ಅಳವಡಿಕೆ ಸಿಸಿ ರಸ್ತೆಗೆ 1.50 ಲಕ್ಷ ರೂಗಳ ಕೆಲಸಕ್ಕೆ ಪಪಂ ಸದಸ್ಯ ಪೂಜೆ ಸಲ್ಲಿಸಿದರು.
ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಸ್ಥಳೀಯ ಪಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ ಮಾತನಾಡಿ ಪಟ್ಟಣದ ಅಭಿವೃದ್ದಿಗೆ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಈಗಾಗಲೇ 13 ಕೋಟಿ ರೂಗಳ ರಸ್ತೆ ಅಭಿವೃದ್ದಿ ಕಾಮಗಾರಿಗಳು ಚಾಲನೆಯಲ್ಲಿದೆ. ಈ ಪೈಕಿ ನಾಲ್ಕನೇ ವಾರ್ಡ್ ಗಳಲ್ಲಿ 15 ಲಕ್ಷ ರೂಗಳ ಅಭಿವೃದ್ದಿ ಕೆಲಸಗಳು ಚಾಲ್ತಿಯಲ್ಲಿದೆ ಎಂದರು.

ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ ಪಟ್ಟಣದ ಅಭಿವೃದ್ದಿಗೆ ಕೊರೋನಾ ಹಿನ್ನಲೆ ಮೂರು ವರ್ಷ ಅಡ್ಡಿ ಉಂಟಾಗಿತ್ತು. ಈ ಜೊತೆಗೆ ಬಾರಿ ಮಳೆ ಸಹ ರಸ್ತೆಗಳನ್ನು ಹಾಳು ಮಾಡಿತ್ತು. ಆದರೆ ರಾಜ್ಯ ಸರ್ಕಾರ ಈಗ ನೀಡಿದ ಅನುದಾನ ಪಟ್ಟಣ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪಪಂ ಸದಸ್ಯ ಶಶಿಕುಮಾರ್, ಸ್ಥಳೀಯ ನಿವಾಸಿಗಳಾದ ಓಹಿಲೇಶ್, ರಾಜಶೇಖರ್, ಸಿದ್ದಪ್ಪ ಗುಜ್ಜಾರ್, ದೇವರಾಜ್, ಯಜಮಾನ್ ಶಿವಣ್ಣ, ನಾಗಸಂದ್ರ ವಿಜಯಕುಮಾರ್, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ಇತರರು ಇದ್ದರು.