ಮಧುಗಿರಿ : ನಗರದ ವಾಸವಿ ದೇವಾಲಯದಲ್ಲಿ ವಾಸವಿ ಆತ್ಮಾರ್ಪಣಾ ದಿನಾಚರಣೆ ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.
ಇಂದು ಬೆಳಗ್ಗೆ ತಾಯಿ ಶ್ರೀ ವಾಸವಿ ಮಾತೆಗೆ ಅಭಿಷೇಕ ಮತ್ತು ಅಲಂಕಾರ ಆರ್ಯವೈಶ್ಯ ಸಂಘದ ಗೌರವಅಧ್ಯಕ್ಷ ಡಿ ಜಿ ಶಂಕರ್ ನಾರಾಯಣ ಶೆಟ್ಟಿ ಅವರ ನೇತೃತ್ವದಲ್ಲಿ ನೆರವೇರಿಸಿದರು. ಮಧ್ಯಾಹ್ನ ಶ್ರೀ ಕನ್ಯಕಾ ಪರಮೇಶ್ವರಿ ಅಮ್ಮನವರಿಗೆ 12 ಗಂಟೆ ಸರಿಯಾಗಿ ಮಹಾಮಂಗಳಾರತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಕ್ತಸಮುದಾಯದವರು ಭಕ್ತಿಯನ್ನು ಸಲ್ಲಿಸಿದರು. ಆರ್ಯವೈಶ್ಯ ಸಂಘದ ಪದಾಧಿಕಾರಿಗಳು ಇದ್ದರು. ವಾಸವಿ ಮಾತೆಯ ವಿಶೇಷ ಅಲಂಕಾರವು ಆಕರ್ಷಕವಾಗಿತ್ತು.
ದಿನಾಚರಣೆ ಹಿನ್ನೆಲೆ: ವಾಸವಿ ಮಾತೆಯ ಆತ್ಮಾರ್ಪಣಾ ದಿನ. ಹಿಂಸೆಯನ್ನು ಅಹಿಂಸೆಯಿಂದ ಎದುರಿಸಿ ಜಯ ಸಾಧಿಸಿದ ಈ ದಿನವನ್ನು ಆರ್ಯವೈಶ್ಯ ಜನಾಂಗವೆಲ್ಲ ಸ್ಮರಿಸಿ, ಆತ್ಮಾರ್ಪಣಾ ದಿನಾಚರಣೆ ಆಚರಿಸುತ್ತದೆ.
ಆರ್ಯವೈಶ್ಯರ ಕಾಶಿ ಎಂದೇ ಹೆಸರಾದ ಪೆನುಗೊಂಡ ಮೊದಲಾದ ಹದಿನೆಂಟು ಪಟ್ಟಣಗಳ ಪ್ರಭು ಕುಸಮಶ್ರೇಷ್ಟಿ ವೈಶ್ಯಕುಲದ ಮಹಾನಾಯಕ. ಜೈತ್ರಯಾತ್ರೆ ಯನ್ನು ಪೂರೈಸಿ ವಿಜಯಶಾಲಿಯಾಗಿ ಆಗಮಿಸಿದ ಚಕ್ರವರ್ತಿ ವಿಷ್ಣು ವರ್ಧನ ಕುಸಮಶ್ರೇಷ್ಟಿಯ ಮಗಳು ವಾಸವಿ ಚೆಲುವಿಗೆ ಮನಸೋತು ವಿವಾಹವಾಗಲು ಇಚ್ಛಿಸಿದ.
ಮೋಕ್ಷ ಸಾಧನೆಯನ್ನು ಅರಸುತ್ತಿದ್ದ ವಿರಕ್ತ ಮನೋಭಾವದ ವಾಸವಿ ತನ್ನ ಹಾಗೂ ತನ್ನ ಕುಲ ಪ್ರಮುಖ ಇಚ್ಛೆಗೆ ವಿರುದ್ಧವಾಗಿ ನಡೆಯಲೊಪ್ಪದೇ ತನ್ನ ಬಾಹ್ಯ ಸೌಂದರ್ಯಕ್ಕೆ ಮರುಳಾದ ಚಕ್ರವರ್ತಿಗೆ ಬುದ್ದಿ ಕಲಿಸಲು ಅಗ್ನಿಗೆ ಆತ್ಮಾರ್ಪಣೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಳು. ಹೆಣ್ಣಿಗೊಂದು ಮನಸ್ಸಿದೆ. ಆತ್ಮವಿದೆ. ಹಿಂಸೆಯನ್ನು ಅಹಿಂಸೆಯಿಂದ ಎದುರಿಸುವ ಅಸಾಧಾರಣ ಶಕ್ತಿಯಿದೆ ಎಂದು ತೋರಿಸಿದ ಅನನ್ಯ ಸಂದರ್ಭವೆಂದು ಆತ್ಮಾರ್ಪಣೆಯ ಸನ್ನಿವೇಶವನ್ನು ಬಣ್ಣಿಸಲಾಗುತ್ತದೆ.
ವ್ಯಷ್ಟಿಗಿಂತ ಸಮಷ್ಟಿ ಮುಖ್ಯ ಎನ್ನುವ ಹಾಗೆ ವಾಸವಿ ಆತ್ಮಾರ್ಪಣೆಯ ಸಂದರ್ಭ ದಲ್ಲಿ ವಾಸವಿಯ ಜತೆ 205 ಜನರು ಅಗ್ನಿ ಪ್ರವೇಶ ಮಾಡಿದರು. ನಂಬಿದ ತತ್ವಗಳಿಗೆ ತಮ್ಮ ಬದುಕನ್ನೇ ಅರ್ಪಿಸಿಕೊಂಡರು. ಈ ಸ್ಮರಣೆಯಲ್ಲಿ ಆರ್ಯವೈಶ್ಯ ಜನಾಂಗ ಜನೋಪಯೋಗಿ, ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಾ ಬಂದಿದೆ.
ಈ ಸಂದರ್ಭದಲ್ಲಿ ಮಂಡಳಿಯ ಉಪಾಧ್ಯಕ್ಷರಾದ ಏ ರಮೇಶ್, ನಿರ್ದೇಶಕರಾದ ಎಂ ಕೆ ನಾಗರಾಜ್, ಎಂಎಲ್ ಪ್ರಕಾಶ್ ಬಾಬು ಜಿ ಆರ್ ಗೋವಿಂದರಾಜು, ಎಸ್ ಆರ್ ಆಂಜನೇಯಲು, ಕೆ ಪಿ ಅಶ್ವಥ್ ನಾರಾಯಣ್, ಕೆ ಎಸ್ ವಿ ಪ್ರಸಾದ್, ಪಿ ವಿ ಮೋಹನ್, ತಾತ ಬದ್ರಿನಾಥ್, ವಾಸವಿ ಬದ್ರಿ ನಾರಾಯಣ್, ಗೋವಿಂದರಾಜು, ಎಂಎಸ್ ರಘುನಾಥ್, ರಘು ರಾಮಯ್ಯ, ಅರ್ಚಕರು ಸತೀಶ್, ವಾಸಿ ಮಹಿಳಾ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಮಂಡಳಿಯ ಅಂಗ ಸಮಸ್ತೆಗಳು ಭಾಗವಹಿಸಿದ್ದರು ಇನ್ನು ಮುಂತಾದವರು ಇದ್ದರು