ಜನಸ್ನೇಹಿ ತಹಶಿಲ್ದಾರ್ ಶ್ರೀಮತಿ ನಾಹೀದಾ ಜಮ್ ಜಮ್ ತುಮಕೂರು ಜಿಲ್ಲೆಯ ವಿಶ್ವವಿದ್ಯಾಲಯದ ನೂತನ ಕುಲ ಸಚಿವರಾಗಿ ಅಧಿಕಾರ ಸ್ವೀಕಾರ

ಕೊರಟಗೆರೆ ತಾಲೂಕಿನ ತಹಸಿಲ್ದಾರ್ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮತಿ ನಾಹೀದಾ ಜಮ್ ಜಮ್ ರವರು ಅಸಿಸ್ಟೆಂಟ್ ಕಮಿಷನರ್ ಆಗಿ ಮುಂಬಡ್ತಿ ಹೊಂದಿದ್ದು

ಪ್ರಸ್ತುತ ಇದೀಗ ಸರ್ಕಾರದ ಆದೇಶದಂತೆ ತುಮಕೂರಿನ ವಿಶ್ವವಿದ್ಯಾನಿಲಯದ ನೂತನ ಕುಲ ಸಚಿವರಾಗಿ ಕರ್ತವ್ಯ ವಹಿಸಿಕೊಂಡಿದ್ದಾರೆ.

ಕೊರಟಗೆರೆ ತಾಲ್ಲೂಕಿನಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕಾರ್ಯ ನಿರ್ವಹಿಸಿ ತಾಲೋಕಿನ ಮನೆ ಮನೆಯ ಮಾತಾಗಿದ್ದ ಕೊರಟಗೆರೆಯ ಜನತೆಯ ನೆಚ್ಚಿನ ಜನಸ್ನೇಹಿ ತಹಶಿಲ್ದಾರ್ ಶ್ರೀಮತಿ ನಾಹೀದಾ ಜಮ್ ಜಮ್ ರವರು ತುಮಕೂರು ಜಿಲ್ಲೆಯ ವಿಶ್ವವಿದ್ಯಾಲಯದ ನೂತನ ಕುಲ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದರು

.

..
ಶಿರ ಹಾಗೂ ಕೊರಟಗೆರೆ ತಾಲೂಕಿನಲ್ಲಿ ತಾಲೂಕು ಕಚೇರಿಗೆ ಅಲೆದಾಡಿ ಕೆಲಸಗಳು ಆಗದೆ ಜನರು ಹಿಂತಿರುಗುತ್ತಿದ್ದ ಸಮಯದಲ್ಲಿ ಬಂದಂತಹ ಜನಸ್ನೇಹಿ ಅಧಿಕಾರಿಯಾಗಿ ಬಂದವರೇ ಶ್ರೀಮತಿ ನಾಹೀದಾ ಜಮ್ ಜಮ್ ಮೇಡಮ್ ರವರು

ಅವರು ದಂಡಾಧಿಕಾರಿಯಾಗಿ ಬಂದಾಗಿನಿಂದಲೂ ಇಲ್ಲಿಯವರೆಗೂ ಜನರ ಕಷ್ಟಗಳನ್ನು ಆಲಿಸಿ, ಅವರ ಕೆಲಸಗಳನ್ನು ಪೂರ್ಣಗೊಳಿಸಿ ತುರ್ತಾಗಿ ತಾವೇ ಸ್ವತಹ ಅವರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಿದ್ದಾರೆ…

ಇಂತಹ ಅಧಿಕಾರಿಗಳು ಮತ್ತಷ್ಟು ಜನ ಬರಲಿ ಎನ್ನುವುದೇ ತಾಲೂಕಿನ ಜನರ ಆಶಯವಾಗಿದೆ

ಇದೀಗ ಜನರ ಮೆಚ್ಚುಗೆಗೆ ಪಾತ್ರರಾಗಿ ಜನಸ್ನೇಹಿ ಅಧಿಕಾರಿ ಎಂದೆ ಹೆಸರುಗಳಿಸಿದ ತಾಸಿಲ್ದಾರ್ ಮೇಡಂ ರವರು ತುಮಕೂರು ವಿಶ್ವವಿದ್ಯಾಲಯದ ಅತಿ ಕಿರಿಯ ವಯಸ್ಸಿನ ಮತ್ತು ಮೊದಲ ಮಹಿಳಾ ಕುಲ ಸಚಿವರು ಎಂಬ ಕೀರ್ತಿಗೆ ಪಾತ್ರರಾದರು

ಇವರಿಗೆ ಇನ್ನು ಉನ್ನತ ಅಧಿಕಾರ ಸಿಗಲಿ ಎನ್ನುವುದೇ ತಾಲೂಕಿನ ಜನರ ಆಶಯವಾಗಿದೆ…

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!