ಭಾರತ್ ಜೋಡೋ ಯಾತ್ರೆಯಲ್ಲಿ ಸೈನಿಕರ ಬಗ್ಗೆ ಕಾಂಗ್ರೆಸ್ ಅವಹೇಳನ : ಬಿಜೆಪಿ ತೀವ್ರ ಖಂಡನೆ

ತುಮಕೂರು : ಭಾರತದ ಧ್ಯೇಯಶಾಲಿ, ಪರಾಕ್ರಮಿ ವೀರ ಯೋಧರಿಗೆ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಹಾಗೂ ರಾಜ್ಯಸಭಾ ಸದಸ್ಯ, ವಕ್ತಾರ ಜೈರಾಮ್‌ರಮೇಶ್‌ರವರುಗಳು ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಅವಹೇಳನ ರೀತಿಯಲ್ಲಿ ಹೇಳಿಕೆ ನೀಡುವುದನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ಮತ್ತು ಜಿಲ್ಲಾ ವಕ್ತಾರ ಕೆ.ಪಿ.ಮಹೇಶರವರುಗಳು ತಮ್ಮ ಜಂಟಿ ಹೇಳಿಕೆಯಲ್ಲಿ ತೀವ್ರವಾಗಿ ಖಂಡಿಸಿದ್ದಾರೆ.

ಪುಲ್ವಾಮ ದಾಳಿಯಲ್ಲಿ 4೦ ವೀರ ಯೋಧರ ಸಾವು ಹಾಗೂ ಉಗ್ರರ ಕಾರ್ಖಾನೆ, ಪಾಪಿ ಪಾಕಿಸ್ತಾನದ ಮೇಲೆ 2019ರಲ್ಲಿ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಭಾರತದ ವಿರುದ್ಧವೇ ಸಂಶಯ ವ್ಯಕ್ತಪಡಿಸಿ, ಪುರಾವೆ ದಾಖಲೆಗಳೇ ಇಲ್ಲವೆಂದು ಅಪಹಾಸ್ಯ ಮಾಡಿರುವುದು ಭಾರತದ ವೀರ ಯೋಧರಿಗೆ ಮಾಡಿದ ಘನ ಘೋರ ಅಪರಾಧವೆಂದಿದ್ದಾರೆ. ಕಾಂಗ್ರೆಸ್ ದೇಶಾದ್ಯಾಂತ ನೆಲೆ ಕಳೆದುಕೊಂಡು ಅಸ್ಥಿತ್ವಕ್ಕಾಗಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದು, ಜನರಿಂದ ತಿರಸ್ಕೃತಗೊಂಡ ಕಾಂಗ್ರೆಸ್, ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮೂಡುಪಾಗಿಟ್ಟ ವೀರ ಯೋಧರು ಮತ್ತು ಪ್ರಧಾನಿ ನರೇಂದ್ರಮೋದಿರವರ ಜನಪ್ರೀಯತೆಗೆ ಹೆದರಿ ಪುಲ್ವಾಮ ದಾಳಿ ಹಾಗೂ ಸರ್ಜಿಕಲ್ ಸ್ಟ್ರೈಕ್ ವಿರುದ್ಧ ಅವಹೇಳನಕಾರಿಗಿ ಮಾತನಾಡಿದ್ದಾರೆ ಎಂದು ಎಂ.ಬಿ.ನಂದೀಶ್ ಮತ್ತು ಕೆ.ಪಿ.ಮಹೇಶ ಕಾಂಗ್ರೆಸ್ ನಡೆವಳಿಕೆಗಳ ವಿರುದ್ಧ ಹರಿಹಾಯ್ದಿದ್ದಾರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!