:
ಬಾದಾಮಿ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರ ಪಂಚರತ್ನ ರಥಯಾತ್ರೆ ಚಾಲುಕ್ಯರ ನಾಡು ಬಾದಾಮಿಯಲ್ಲಿ ಸಂಚಲನ,,ಚೊಳಚಗುಡ್ಡ ಗ್ರಾಮದ ಕಾರ್ಗಿಲ್ ಹುತಾತ್ಮ ವೀರಯೋಧನ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಣೆ ಮಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರ ಕನಸಿನ ಯೋಜನೆ ಪಂಚರತ್ನ ರಥ ಯಾತ್ರೆಯು ಚಾಲುಕ್ಯರ ನಾಡು ಬಾದಾಮಿಗೆ ನಿನ್ನೆಯಷ್ಟೇ ಆಗಮಿಸಿತ್ತು.
ಇವತ್ತು ಬೆಳಿಗ್ಗೆ ಚಾಲುಕ್ಯರ ಅಧಿದೇವತೆ ನವಶಕ್ತಿಯ ದೇವತೆ ಬಾದಾಮಿ ಶ್ರೀ ಬನಶಂಕರಿ ದೇವಿಯ ದರ್ಶನ ಪಡೆದ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆ.ಡಿ ಎಸ್.ನ ಜಿಲ್ಲಾಧ್ಯಕ್ಷ ಹಣಮಂತ ಮಾವಿನಮರ ದ ಸೇರಿದಂತೆ ನಂತರ ತಾಲೂಕಿನ ಕಾರ್ಗಿಲ್ ಹುತಾತ್ಮ ವೀರಯೋಧ ನ ಗ್ರಾಮ ಚೊಳಚಗುಡ್ಡಕ್ಕೆ ಆಗಮಿಸಿ ಹುತಾತ್ಮ ವೀರಯೋಧ ಶಿವಾಬಸಯ್ಯ.ಕುಲಕರ್ಣಿ ಯೋಧನ ವೀರ ಗಲ್ಲಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿ ಮುಂದೆ ಸಾಗಿದ ರಥಯಾತ್ರೆ.
ಬಾದಾಮಿ ತಾಲೂಕಿನ ಹಲ ಕುರ್ಕಿ ಗ್ರಾಮದ ರೈತರ ಭೂಸ್ವಾಧೀನ ದ ಅಹೋರಾತ್ರಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ:– ರೈತರ ಭೂಸ್ವಾಧೀನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವ ಭರವಸೆ ನೀಡಿ ಭೂಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಳಿಸುವ ಕಾರ್ಯಕ್ಕೆ ನಾನು ನಿಮ್ಮ ಜೊತೆ ನಿಲ್ಲುವೆ ಎನ್ನುವ ಭರವಸೆಯನ್ನು ಹಲ ಕುರ್ಕಿ ರೈತರಿಗೆ ವಾಗ್ದಾನ ನೀಡಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಹಲ ಕುರ್ಕಿ ರೈತಪರ ಯುವಮುಖಂಡನ್ ಪ್ರಕಾಶ್ ನಾಯ್ಕರ್ ಮಾತನಾಡಿ ಎಚ್.ಡಿ.ಕುಮಾರಸ್ವಾಮಿಯವರ ವಾಗ್ದಾನಕ್ಕೆ ಎಲ್ಲಾ ಧರಣಿ ನಿರತ ರೈತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿ ಅವರ ರೈತಪರ ಕಾಳಜಿ ಮಾತುಗಳಿಗೆ ಶ್ಲಾಘನೆ ವ್ಯಕ್ತಡಿಸಿ ದರು.
ಇದೇ ಸಂದರ್ಭದಲ್ಲಿ ಜೆ.ಡಿ.ಎಸ್.ಜಿಲ್ಲಾಧ್ಯಕ್ಷ ಹನ ಹಣಮಂತ ಮಾವಿನ ಮರದ ರೈತ ಮುಖಂಡ ಪ್ರಕಾಶ್ ನಾಯ್ಕರ್ ಸೇರಿದಂತೆ ತಾಲೂಕಿನ ರೈತರು ಕಾರ್ಯಕರ್ತರು ರೈತ ಮಹಿಳೆಯರು ಗ್ರಾಮದ ಗುರುಹಿರಿಯರು ಯುವಕರು ಭಾಗವಹಿಸಿದ್ದರು.
ವರದಿ:- ರಾಜೇಶ್.ಎಸ್.ದೇಸಾಯಿ
ಬಾಗಲಕೋಟೆ