ಜೆಡಿಎಸ್ ಭದ್ರಕೋಟೆಯಲ್ಲಿ ನಾವೇ ಗೆಲ್ಲುವುದು ನಿಶ್ವಿತ: ಬಿ.ಎಸ್.ಗಾಯಿತ್ರಿದೇವಿ

ಎಂ ಎನ್ ಕೋಟೆ : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನರು ಜೆಡಿಎಸ್ ಪಕ್ಷಕ್ಕೆ ಆಧಿಕಾರ ನೀಡಲಿದ್ದಾರೆ ಮತ್ತೇ ರಾಜ್ಯದ ಮುಖ್ಯಮಂತ್ರಿಯಾಗಿ ಕುಮಾರಣ್ಣ ಆಗುವುದು ಖಚಿತ ಎಂದು ಜೆಡಿಎಸ್ ಅಭ್ಯರ್ಥಿ ನಾಗರಾಜು ಅವರ ಧರ್ಮಪತ್ನಿ ಬಿ.ಎಸ್.ಗಾಯಿತ್ರಿದೇವಿ ವಿಶ್ವಾಸ ವ್ಯಕ್ತಪಡಿಸಿದರು.

ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮೆ‌ಮನೆ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಪ್ರಚಾರ ಮಾಡುತ್ತಿದ್ದು ಎಲ್ಲ ಕಡೆಗಳಲ್ಲಿ ಮತದಾರರಿಂದ ಉತ್ತಮ ಪ್ರತಿಕ್ರಿಯೇ ಸಿಗುತ್ತಿದ್ದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದಲ್ಲಿ ಮತ್ತೆ ಜೆಡಿಎಸ್ ನಾಗರಾಜು ಶಾಸಕರಾಗಿ ಆಯ್ಕೆಯಾಗುತ್ತಾರೆ ಗುಬ್ಬಿ ವಿಧಾನಸಭಾ ಕ್ಣೇತ್ರ ಜೆಡಿಎಸ್ ಭಧ್ರಕೋಟೆ ಭದ್ರಕೋಟೆಯಲ್ಲಿ ನಾವೇ ಗೆಲ್ಲುವುದು ನಿಶ್ವಿತ ಎಂದರು.ಭದ್ರಕೋಟೆಗೆ ಯಾರನ್ನು ಅಷ್ವು ಸುಲಭವಾಗಿ ಬಿಟ್ಟುಕೊಡಲ್ಲ ಮುಂಬರುವ ಚುನಾವಣೆಯಲ್ಲಿ ಮತದಾರರು ಜೆಡಿಎಸ್ ಪಕ್ಷಕ್ಕೆ ಬಹುಮತ ನೀಡಿದರೆ ಈ ರಾಜ್ಯದ ಮುಖ್ಯಮಂತ್ರಿಯಾಗಿ 24 ಗಂಟೆಗಳಲ್ಲಿ ಸ್ತ್ರೀಶಕ್ತಿ ಸಂಘದ ಸಾಲಮನ್ನಾ ಮಾಡುತ್ತಾರೆ.ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ. ವಸತಿ ಯೋಜನೆ , ಸದ್ಯಾ ಸುರಕ್ಷ , ವೃದ್ಯಪ್ಯ ವೇತನವನ್ನು ವಯೋ ವೃದ್ದರಿಗೆ ಐದು ಸಾವಿರ ಪ್ರತಿ ತಿಂಗಳು ನಿಮ್ಮಗೆ ಕೊಡಲಾಗುತ್ತದೆ ಎಂದ ಅವರು ಶಿಕ್ಷಣವೇ ಆಧುನಿಕ ಶಕ್ತಿ , ಆರೋಗ್ಯ ಸಂಪತ್ತು , ರೈತ ಚೈತನ್ಯ , ವಸತಿ ಅಸರೆ ಮಹಿಳಾ ಸಬಲೀಕರಣ ಮಾಡುವ ಮೂಲಕ ಅನೇಕ ಯೋಜನೆಗಳನ್ನು ಕುಮಾರಣ್ಣ ಅವರು ಜಾರಿಗೆ ತರುತ್ತಿದ್ದು ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನತೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ವಿ.ರವೀಶ್ , ಮುಖಂಡರಾದ ಡಿ.ರಘು , ಎ.ಡಿ.ಸುರೇಶ್ , ರಮೇಶ್ ಕೆ.ನವೀನ್ ಟಿ.ಎಸ್. ಎಸ್ .ಕುಮಾರ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!