ಗುಬ್ಬಿ: ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ತಂದೆ ರಾಮೇಗೌಡ (85) ಗುರುವಾರ ಸಂಜೆ ವಯೋಸಹಜ ಅನಾರೋಗ್ಯದಿಂದ ಮೃತರಾಗಿದ್ದಾರೆ.
ಶ್ರೀ ಮಣ್ಣಮ್ಮದೇವಿ ದೇವಾಲಯ ಟೆಸ್ಟ್ ಅಧ್ಯಕ್ಷರು ಹಾಗೂ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ 23 ವರ್ಷಗಳ ಕಾಲ ಸುದೀರ್ಘವಾಗಿ ತಾಲ್ಲೂಕು ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿ ರಾಜಕೀಯ ಹಿರಿಯ ಮುತ್ಸದ್ದಿ ಎನಿಸಿ ಸಾವಿರಾರು ಮಂದಿಗೆ ರಾಜಕೀಯ ಗುರುವಾಗಿ ಕಾಣಿಸಿಕೊಂಡಿದ್ದರು.
ಕಾಂಗ್ರೆಸ್ ಮೂಲಕ ರಾಜಕೀಯ ನೆಲೆ ಕಂಡ ಮೃತರು ಸಹಕಾರ ರಂಗದಲ್ಲೂ ಸೈ ಎನಿಸಿಕೊಂಡಿದ್ದರು. ಗುಬ್ಬಿ ವಿ ಎಸ್ ಎಸ್ ಎನ್ ಅಧ್ಯಕ್ಷರಾಗಿ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ ಸಹಕಾರ ಸಂಘಗಳ ಮೂಲಕ ಅನೇಕ ಸಹಕಾರಿ ಕೆಲಸ ಸಹ ಮಾಡಿದ್ದರು. ಅಪಾರ ಬಂದು ಮಿತ್ರರನ್ನು ಅಗಲಿದ ಮೃತರು, ಪುತ್ರರಾದ ಶಾಸಕ ಎಸ್.ಆರ್.ಶ್ರೀನಿವಾಸ್, ಉದ್ಯಮಿ ಎಸ್.ಆರ್.ಜಗದೀಶ್, ಪುತ್ರಿ ಸುನಂದಾ ಹಾಗೂ ಮೊಮ್ಮಗ ನಟ ದುಷ್ಯಂತ್ ಶ್ರೀನಿವಾಸ್ ಅವರನ್ನು ಅಗಲಿದ್ದಾರೆ. ಶುಕ್ರವಾರ ಮಧ್ಯಾಹ್ನ ಅಂತ್ಯ ಸಂಸ್ಕಾರ ಸ್ವಗ್ರಾಮ ಸರ್ವೇಗಾರನ ಪಾಳ್ಯ ಗ್ರಾಮದಲ್ಲಿ ನಡೆಯಲಿದೆ.
ವರದಿ: ಹರಿಪ್ಪರಿಯ ರಮೇಶ್ ಗೌಡ, ಗುಬ್ಬಿ.