ಕೊರಟಗೆರೆ: ಕಮನೀಯ ಕ್ಷೇತ್ರ ಇತಿಹಾಸ ಪ್ರಸಿದ್ದ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ಮತ್ತು ಜಾತ್ರಾ ಮಹೋತ್ಸವ ವೈಭವದಿಂದ ಜರುಗಿತು. ರಾಜ್ಯದ ವಿವಿಧ ಕಡೆಗಳಿಂದ ಬಂದಿದ್ದ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು…
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಕಮನೀಯ ಕ್ಷೇತ್ರದಲ್ಲಿ ನೆಲೆಸಿರುವ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ರಾಮ ಲಕ್ಷ್ಮಣ, ಸೀತಾದೇವಿ ಮತ್ತು ಆಂಜನೇಯ ವಿಗ್ರಹ ಕೂರಿಸಿದ ಕ್ಷಣಾರ್ಧದಲ್ಲೇ ಆಕಾಶದಲ್ಲಿ ಗರುಡ ಪಕ್ಷಿ ಕಾಣಿಸಿಕೊಂಡಿತು. ಗರುಡ ಪಕ್ಷಿ ನೋಡಿದ ಭಕ್ತರು ಜೈಕಾರ ಕೂಗಿದರು. ರಥವನ್ನು ಎಳೆಯುವುದರೊಂದಿಗೆ ಹನುಮನ ನಾಮ ಪಠಿಸಿದರು…
ಪ್ರತಿ ವರುಷ ಸಂಕ್ರಾಂತಿ ಹಬ್ಬದ ನಂತರ ನಡೆಯುವ ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮದ ಆರಾಧ್ಯದೈವ ಶ್ರೀ ಆಂಜನೇಯ ಸ್ವಾಮಿಯ ದರ್ಶನ ಮಾಡಿ ಆಶೀರ್ವಾದ ಪಡೆದು ತಮ್ಮ ಗ್ರಾಮಗಳಲ್ಲಿ ಹಬ್ಬದಂತೆ ಆಚರಣೆ ಮಾಡುವುದು ಈ ಭಾಗದಲ್ಲಿ ಅತೀ ಹೆಚ್ಚು ಮನ್ನಣೆ ಪಡೆದಿದೆ….
ಕ್ಯಾಮೇನಹಳ್ಳಿ ಆಂಜನೇಯ ದೇವಾಲಯದ ಪ್ರಧಾನ ಅರ್ಚಕ ರಾಮಚಾರ್ ಮಾತನಾಡಿ, ಕಮನೀಯ ಕ್ಷೇತ್ರವೇ ಇಂದು ಕ್ಯಾಮೇನಹಳ್ಳಿ ಪುಣ್ಯಕ್ಷೇತ್ರ ಆಗಿದೆ. ಹನುಮ, ಭೀಮ ಮತ್ತು ಮಧ್ವ ಮೂರು ಅವತಾರ ಇರುವಂತಹ ಕ್ಷೇತ್ರದಲ್ಲಿ ಹತ್ತಾರು ಪವಾಡ ನಡೆಯುತ್ತವೆ. ಶ್ರೀ ಆಂಜನೇಯನ ಕೃಪೆಯಿಂದ ನಾಡಿನ ಜನತೆಯ ಇಷ್ಟಾರ್ಥಗಳು ಈಡೇರಲಿ ಎಂದು ಪ್ರಾರ್ಥಿಸೋಣ ಎಂದು ತಿಳಿಸಿದರು…
ಪ್ರತಿ ವರ್ಷದಂತೆ ಪಿ.ಎನ್.ಕೃಷ್ಣಮೂರ್ತಿ ಕುಟುಂಬದವರು, ಸುತ್ತಮುತ್ತಲಿನ ಗ್ರಾಮಸ್ಥರಿಗೆ ಹಾಗೂ ಜಾತ್ರೆಗೆ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.ಜಾತ್ರೆಗೆ ಆಗಮಿಸಿದ ಭಕ್ತಾಧಿಗಳು ಬಿಸಿಲಿನ ತಾಪಕ್ಕೆ ದಣಿದಿದ್ದನ್ನ ಕಂಡು ಪಿ.ಎನ್ ಕೃಷ್ಣಮೂರ್ತಿಯವರು ತಂಪಾದ ಕಬ್ಬಿನ ಹಾಲನ್ನು ವಿತರಿಸಿ ಬಾಯಾರಿಕೆಯನ್ನು ತಣಿಸಿದರು ಆ ಭಗಂವತ ಅವರಿಗೆ ಸದಾಕಾಲ ಒಳಿತು ಮಾಡಲಿ ಎಂದು ಗ್ರಾಮಸ್ಥರು ಹಾಗೂ ಭಕ್ತಾದಿಗಳು ಆಶೀಸಿದರು…
ರಥೋತ್ಸವದಲ್ಲಿ ತಾಲ್ಲೂಕು ಆಡಳಿತದ ಕಂದಾಯ ಇಲಾಖೆಯ ಅಧಿಕಾರಿಗಳು, ಪೋಲಿಸ್ ಇಲಾಖೆ ಸಿಪಿಐ ಸುರೇಶ್, ಪಿಎಸ್ಐ ಚೇತನ್ ಸೇರಿದಂತೆ 60ಕ್ಕೂ ಪೊಲೀಸ್ ಸಿಬ್ಬಂದಿಗಳು ಬಿಗಿಬಂದೋಬಸ್ತ್ ನೀಡಿದರು, ಮಾಜಿ ಶಾಸಕರಾದ ಪಿ.ಆರ್ ಸುಧಾಕರ್ ಲಾಲ್, ಬಿಜೆಪಿ ಮುಖಂಡ ಅನಿಲ್ ಕುಮಾರ್ ಸೇರಿದಂತೆ ಸಹಸ್ರಾರು ಭಕ್ತಾದಿಗಳು ದರ್ಶನ ಪಡೆದರು…
ದೇವಾಲಯದ ಆಡಳಿತ ಮಂಡಳಿಯ ನಿರ್ಲಕ್ಷ್ಯ…
ರಾಜ್ಯಸೇರಿದಂತೆ ಹೊರ ರಾಜ್ಯದಿಂದ ಬರುವಂತಹ ಅಪಾರ ಸಂಖ್ಯೆಯಲ್ಲಿ ಭಕ್ತರು ಹೊಂದಿರುವ ಶ್ರೀ ಕಮನೀಯ ಕ್ಷೇತ್ರದಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿಯ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ಕಿ.ಲೋ ವರೆಗೂ ಬಿಸಿಲಿನಲ್ಲಿ ನಿಂತು ಬೇಸರ ಒಂದೆಡೆಯಾದರೆ ಹೆಸರಾಂತ ಧಾರ್ಮಿಕ ಕ್ಷೇತ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೂ ಸಹ ಇಲ್ಲದಿರುವುದು ಶೋಚನೀಯ…
ಕೋರೋನಾದಿಂದಾಗಿ 2ವರ್ಷಗಳಿಂದ ಸಡಗರದಿಂದ ನಡೆಯಬೇಕಿದ್ದ ಜಾತ್ರಾ ಮಹೋತ್ಸವ ಸ್ಥಗಿತಗೊಂಡಿದ್ದವು ಈ ಬಾರಿ ಜಾತ್ರೆಗೆ ಹೆಚ್ಚು ಭಕ್ತಾದಿಗಳು ಬರುವ ನಿರೀಕ್ಷೆ ಇದ್ದರು ಕೂಡ ಸ್ಥಳೀಯ ಆಡಳಿತ ಮಂಡಳಿ ಹಾಗೂ ಮುಜರಾಯಿ ಇಲಾಖೆ ಬಂದಂತಹ ಭಕ್ತಾದಿಗಳಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿಲ್ಲ.
*ಮಾರುತಿ. ಭಕ್ತಾಧಿ ಬೆಂಗಳೂರು.