ಹೊಸಕೆರೆ : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಮತ್ತೆ ರಾಜ್ಯದಲ್ಲಿ ಬಿಜೆಪಿ ಸರಕಾರಕ್ಕೆ ಅರ್ಶಿವಾದ ಮಾಡಲಿದ್ದಾರೆ ಎಂದು ಬಿಜೆಪಿ ಮುಖಂಡ ಪಿ.ಬಿ.ಚಂದ್ರಶೇಖರಬಾಬು ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಹೊಸಕೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನರೇಂದ್ರ ಮೋಧಿಯವರು ಮಾಡಿರುವ ಜನಪರ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸುವರ ಮೂಲಕ ಜನಸಾಮಾನ್ಯರಿಗೆ ಸರ್ಕಾರ ಸೌಲಭ್ಯಗಳನ್ನು ತಿಳಿಸಲಾಗುತ್ತಿದೆ.ಹಾಗಲವಾಡಿ ಹೋಬಳಿಯಲ್ಲಿ ಮತದಾರರು ಉತ್ತಮ ಪ್ರತಿಕ್ರಿಯೇ ನೀಡುತ್ತಿದ್ದು ಮತ್ತೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಎರಡು ಮಾತಿಲ್ಲ ತಾಲ್ಲೂಕಿನಲ್ಲಿ ಎಲದಲ ಕಡೆಗಳಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಪ್ರತಿ ಮನೆಗೆ ತಲುಪಿಸಲಾಗಿದೆ ಎಂದ ಅವರು ಡಬಲ್ ಇಂಜಿನ್ ಸರ್ಕಾರದ ಸಾಧನೆಗಳನ್ನು ಮುಂದೆ ಇಟ್ಟುಕೊಂಡು ಮುಂಬರುವ ಚುನಾವಣೆಯಲ್ಲಿ ಮತ ಕೇಳಲಿದ್ದೇವೆ ಎಂದರು.ಪಿಎಂಕಿಸಾನ್ ಯೋಜನೆ ಬಹುತೇಖ ರೈತರು ಹತ್ತು ಸಾವಿರ ಹಣವನ್ನು ವರ್ಷಕ್ಕೆ ಪಡೆಯುತ್ತಿದ್ದಾರೆ ನೇರವಾಗಿ ರೈತರ ಖಾತೆಗೆ ಜಮ ಆಗುತ್ತಿದೆ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಬಿಜೆಪಿ ತಾಲ್ಲೂಕ್ ಉಪಾಧ್ಯಕ್ಷ ಎಕೆಪಿರಾಜು , ತಾಲ್ಲೂಕ್ ಪಂಚಾಯಿತಿ ಮಾಜಿ ಸದಸ್ಯ ಹೆಚ್ ಎಸ್ ಯೋಗೀಶ್ , ಪಿಎಲ್ ಬ್ಯಾಂಕ್ ನಿರ್ದೇಶಕ ಟಿ.ಸದಾಶಿವಯ್ಯ , ಶಕ್ತಿ ಕೇಂದ್ರದ ಮುಖಂಡರಾದ ರಂಗನಾಥ್ , ರಾಜ್ ಕುಮಾರು , ನಿರಂಜನ್. ನಟೇಶ್ , ಮಲ್ಲೇಶ್ , ಬಸವರಾಜು , ಈಶಣ್ಣ ಹಾಗೂ ಬೂತ್ ಅಧ್ಯಕ್ಷರು ಭಾಗವಹಿಸಿದ್ದರು.