ವಜ್ರ ಮಹೋತ್ಸವದ ಸಂಭ್ರಮದಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆ ಕಟ್ಟಡ

ತುಮಕೂರು ಜಿಲ್ಲಾ ಆಸ್ಪತ್ರೆಯು ಎಪ್ಪತ್ತೈದು ವಸಂತಗಳನ್ನು ಪೂರೈಸಿ ವಜ್ರ ಮಹೋತ್ಸವದ ಸಂಭ್ರಮದಲ್ಲಿದೆ.

1898ರಲ್ಲಿ ಜಿಲ್ಲಾಸ್ಪತ್ರೆಃ

ಈ ಜಿಲ್ಲಾ ಆಸ್ಪತ್ರೆಯು ಒಂದು ಸಣ್ಣ ಔಷಧಾಲಯವಾಗಿ 1898ರಲ್ಲಿ ಈಗಿನ ಕ್ಷಯರೋಗ ಕೇಂದ್ರದಲ್ಲಿ ಪ್ರಾರಂಭವಾದ ನಂತರ 1926ರಲ್ಲಿ ಈಗಿನ ಜಿಲ್ಲಾಧಿಕಾರಿಗಳ ಕಚೇರಿ ಹತ್ತಿರದ ಸಮಾಜ ಕಲ್ಯಾಣ ಇಲಾಖೆ ಸುಪರ್ದಿಯಲ್ಲಿರುವ ಕಟ್ಟಡದಲ್ಲಿ ಹೆರಿಗೆ ಆಸ್ಪvಯನ್ನು ಪ್ರಾರಂಭಿಸಲಾಯಿತಾದರೂ 1948ರ ಜನವರಿ 30ರಂದು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಟ್ಟಡಕ್ಕೆ ಜಿಲ್ಲಾಸ್ಪತ್ರೆಯನ್ನು ಸ್ಥಳಾಂತರಿಸಲಾಯಿತು.

1948ರ ಜನವರಿ 30ಕ್ಕೆ ನೂತನ ಕಟ್ಟಡಕ್ಕೆ ಸ್ಥಳಾಂತರಃ

ಜಿಲ್ಲಾಸ್ಪತ್ರೆ ಕಟ್ಟಡಕ್ಕೆ 1939ರಲ್ಲಿ ಮೈಸೂರಿನ ದಿವಾನರಾದ ಮಿರ್ಜಾ ಇಸ್ಮಾಯಿಲ್ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಕಟ್ಟಡ ಪೂರ್ಣಗೊಂಡ ಬಳಿಕ ಈಗಿನ ಕಟ್ಟಡಕ್ಕೆ 1948ರ ಜನವರಿ 30ಕ್ಕೆ ಸ್ಥಳಾಂತರವಾಗಿ ಜಿಲ್ಲೆಯಲ್ಲದೆ ಹೊರ ಜಿಲ್ಲೆ ರೋಗಿಗಳಿಗೂ ಉತ್ತಮ ಚಿಕಿತ್ಸೆ ಕಲ್ಪಿಸುತ್ತಾ ಬರುತ್ತಿದೆ.

ಕಟ್ಟಡಕ್ಕೆ ಓಟ್ಟೋ ಕೋಸಿಗ್ಸ್ ಬರ್ಗರ್ ಅವರ ವಿನ್ಯಾಸಃ

ಮೈಸೂರು ಸಾಮ್ರಾಜ್ಯದ ಆಗಿನ ಮುಖ್ಯವಾಸ್ತು ಶಿಲ್ಪಿ ಓಟ್ಟೋ ಕೋಸಿಗ್ಸ್‌ಬರ್ಗರ್ ಅವರ ವಿನ್ಯಾಸದಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಕಟ್ಟಡದ ಉದ್ಘಾಟನೆಗೆ ಆಗಿನ ಮೈಸೂರು ರಾಜ್ಯದ ರಾಜಪ್ರಮುಖರಾಗಿದ್ದ ಶ್ರೀ ಜಯಚಾಮರಾಜ ಓಡೆಯರ್ ಅವರು ಭಾಗವಹಿಸಬೇಕಾಗಿತ್ತು. ಆದರೆ ಅದೇ ದಿನ ಮಹಾತ್ಮ ಗಾಂಧೀಜಿಯವರು ಹುತಾತ್ಮರಾದ ಕಾರಣ ಮಹಾರಾಜರು ಅರ್ಧದಾರಿಯಿಂದಲೇ ಮೈಸೂರಿಗೆ ಹಿಂತಿರುಗಿದರೆಂದು ಇತಿಹಾಸ ಹೇಳುತ್ತದೆ.

ವಿವಿಧ ಆರೋಗ್ಯ ಕೇಂದ್ರಗಳಿಂದ ವಿಸ್ತಾರಗೊಂಡ ಜಿಲ್ಲಾಸ್ಪತ್ರೆಃ

ಮೊದಲು 110 ಹಾಸಿಗೆ ಸಾಮರ್ಥ್ಯದಿಂದ ಪ್ರಾರಂಭವಾದ ಈ ಆಸ್ಪತ್ರೆಯಲ್ಲಿ 1968ರಲ್ಲಿ 235 ಹಾಸಿಗೆ ಸಾಮರ್ಥ್ಯಕ್ಕೆ ಏರಿಸಲಾಯಿತು. 1961ರಲ್ಲಿ ಶುಶ್ರೂಷಾ ಶಾಲೆ ಹಾಗೂ 1966ರಲ್ಲಿ ಸಹಾಯಕ ನರ್ಸ್ ಸೂಲಗಿತ್ತಿ (ANM) ತರಬೇತಿ ಶಾಲೆಯನ್ನು ಹಾಗೂ 1960ರಲ್ಲಿ ಕುಟುಂಬ ಕಲ್ಯಾಣ ಕೇಂದವನ್ನು ಪ್ರಾರಂಭಿಸಲಾಯಿತಲ್ಲದೆ 1962ರಲ್ಲಿ ಶ್ರೀ ಸತ್ಯಸಾಯಿಬಾಬಾ ಅವರಿಂದ ಆಯುರ್ವೇದ ಹಾಗೂ ಯುನಾನಿ ಬ್ಲಾಕ್ ಉದ್ಘಾಟನೆಯಾಯಿತು. ಈ ಕುಟುಂಬ ಕಲ್ಯಾಣ ಕೇಂದ್ರದಲ್ಲಿ 1967ರಲ್ಲಿ 320 ಶಸ್ತ್ರಚಿಕಿತ್ಸೆ ನೆರವೇರಿಸಿದ ಹೆಗ್ಗಳಿಕೆಯಿದೆ.

1964ರ ಫೆಬ್ರವರಿಯಲ್ಲಿ ಹಳೆಯ ಔಷಧಾಲಯವನ್ನು 30 ಒಳರೋಗಿ ಸಾಮರ್ಥ್ಯ ಹೊಂದಿರುವ ಜಿಲ್ಲಾ ಕ್ಷಯರೋಗ ಕೇಂದ್ರವನ್ನಾಗಿ ಮಾರ್ಪಡಿಸಿ ಕೇಂದ್ರದ ಕಾರ್ಯನಿರ್ವಹಣೆ ಜಿಲ್ಲಾ ಶಸ್ತ್ರಚಿಕಿತ್ಸಕರಿಂದಲೇ ನಡೆಯುತ್ತಿತ್ತು.

ಮಾರ್ಚ್ 1967ರಲ್ಲಿ ಗುಹ್ಯ ರೋಗ ಕೇಂದ್ರ ಹಾಗೂ ಏಪ್ರಿಲ್ 1967ರಲ್ಲಿ ದಂತ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಯಿತು. ಜುಲೈ 1967ರಲ್ಲಿ ದಂತ ವೈದ್ಯರ ನೇಮಕದೊಂದಿಗೆ ಪೂರ್ಣ ಪ್ರಮಾಣದ ದಂತ ಚಿಕಿತ್ಸಾ ಕೇಂದ್ರವಾಯಿತು.

ಜಿಲ್ಲಾಸ್ಪತ್ರೆಗೆ ಸ್ನಾತಕೋತ್ತರ ಕೇಂದ್ರಃ

ಜಿಲ್ಲಾಸ್ಪತ್ರೆಗೆ 2021-22ನೇ ಸಾಲಿನಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೇಂದ್ರ ಮಂಜೂರಾಗಿದೆ. 1968ರಲ್ಲಿ ಪ್ರತಿ ದಿನ ಸುಮಾರು 200 ಒಳರೋಗಿ ಹಾಗೂ 600 ಹೊರ ರೋಗಿಗಳಿಗೆ ಚಿಕಿತ್ಸೆ ನೀಡಿದ ಈ ಆಸ್ಪತ್ರೆಯು ಈಗ ಪ್ರತಿ ದಿನ ಎರಡು ಸಾವಿರಕ್ಕೂ ಹೆಚ್ಚು ಹೊರರೋಗಿ ಹಾಗೂ 150ಕ್ಕೂ ಹೆಚ್ಚು ಒಳರೋಗಿಗಳಿಗೆ ಚಿಕಿತ್ಸೆ ನೀಡುವ 450 ಹಾಸಿಗೆಗಳ ಸುಸಜ್ಜಿತ ಕೇಂದ್ರವಾಗಿದೆ. ಪ್ರತಿದಿನ ಇಪ್ಪತ್ತಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತಿದೆ.

ಕಾಯಕಲ್ಪ ಪ್ರಶಸ್ತಿ ಮುಡಿಗೇರಿಸಿಕೊಂಡ ಜಿಲ್ಲಾಸ್ಪತ್ರೆಃ

2018-19ರ ಸಾಲಿನಲ್ಲಿ ಕೇಂದ್ರ ಸರ್ಕಾರ ನೀಡಿದ ಕಾಯಕಲ್ಪ ಪ್ರಶಸ್ತಿ ಮುಡಿಗೇರಿಸಿಕೊಂಡ ಈ ಆಸ್ಪತ್ರೆ, ರಾಜ್ಯದ ಮೊದಲ ರಾಷ್ಟ್ರೀಯ ಗುಣಮಟ್ಟದ ಭರವಸೆ ಮಾನದಂಡ (NQAS)ಪ್ರಮಾಣೀಕೃತ ಆಸ್ಪತ್ರೆಯಾಗಿದೆ. 2019ರಲ್ಲಿ ಆಸ್ಪತ್ರೆಯ ಹೆರಿಗೆ ಹಾಗೂ ಶಸ್ತ್ರಚಿಕಿತ್ಸಾ ಕೇಂದ್ರಗಳು ಕೇಂದ್ರ ಸರ್ಕಾರವು ನೀಡುವ ಗುಣಮಟ್ಟ ಸುಧಾರಣೆ ಉಪಕ್ರಮದ (LAQSHYA) ದೃಢೀಕರಣವನ್ನು ಪಡೆದುಕೊಂಡಿದೆ. 2017ರಲ್ಲಿ ಅರೆವೈದ್ಯಕೀಯ ಕೋರ್ಸ್ ಹಾಗೂ 2017ರಲ್ಲಿ ಬಿ.ಎಸ್ಸಿ. ನರ್ಸಿಂಗ್ ಕೋರ್ಸ್ ಪ್ರಾರಂಭ ಮಾಡಲಾಗಿದೆ. 2018ರಲ್ಲಿ ಈ ಆಸ್ಪತ್ರೆಯು ಎಂ.ಡಿ/ಎಂ.ಎಸ್.ಗೆ ಸರಿಸಮಾನವಾದ ಡಿ.ಎನ್.ಬಿ (Diplomate of National Board) ತರಬೇತಿ ಸಂಸ್ಥೆಯಾಗಿ ಅಂಗೀಕೃತಕೊಂಡು, ಪ್ರಸ್ತುತ ೮ಕ್ಕೂ ಹೆಚ್ಚು ವಿಭಾಗಗಳಲ್ಲಿ 46ಕ್ಕೂ ಹೆಚ್ಚು ದೇಶದ ಎಲ್ಲಾ ಮೂಲೆಗಳಿಂದ ಬಂದ ವೈದ್ಯರು ವ್ಯಾಸಂಗಮಾಡುತ್ತಿದ್ದು, ಈ ತರಬೇತಿ ಸಂಸ್ಥೆಯಲ್ಲಿ ಉತ್ತೀರ್ಣಗೊಂಡ ವೈದ್ಯರು ದೇಶದ ಎಲ್ಲೆಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಉಚಿತ ಸಿಟಿ/ಎಂಆರ್‌ಐ ಸ್ಕ್ಯಾನ್ಃ

2017ರಲ್ಲಿ ಉಚಿತ ಸಿ.ಟಿ ಮತ್ತು ಎಂ.ಆರ್.ಐ ಸ್ಕ್ಯಾನ್ ಪ್ರಾರಂಭಗೊಂಡು ರೋಗಿಗಳಿಗೆ ಸೇವೆ ಒದಗಿಸುತ್ತಿದೆ. ಅದೇ ರೀತಿ 13 ಯಂತ್ರಗಳ ಉಚಿತ ಡಯಾಲಿಸಿಸ್ ಘಟಕವಿದ್ದು, ಮೂರು ಪಾಳಿಗಳಲ್ಲಿ ಪ್ರತಿದಿನ ಮೂವತ್ತಕ್ಕೂ ಹೆಚ್ಚು ಮೂತ್ರಪಿಂಡ ವೈಫಲ್ಯದ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ 2D Echo, ಸ್ತನಕ್ಯಾಸ್ಸರ್ ಪತ್ತೆ ಹಚ್ಚುವ ಮ್ಯಾಮೊಗ್ರಫಿ ಯಂತ್ರವಿದ್ದು, Audiometry (ಶ್ರವಣದೋಷ ಕಂಡುಹಿಡಿಯುವ ಯಂv) ಮತ್ತು BERA, Cytology,, ಸಂಪೂರ್ಣ ಗಣಕೀಕೃತ biochemistry analyzerಯಂvಗಳನ್ನು ಕೂಡ ಜಿಲ್ಲಾ ಆಸ್ಪತ್ರೆ ಹೊಂದಿದೆ.

5೦ಕ್ಕೂ ಹೆಚ್ಚು ಸುಸಜ್ಜಿತ ತೀವ್ರ ನಿಗಾ ಘಟಕ ಸೌಲಭ್ಯಃ

2010ರಲ್ಲಿ 6 ಹಾಸಿಗೆಗಳ ಸಾಮರ್ಥ್ಯವಿದ್ದ ತೀ ನಿಗಾ ಘಟಕವು ಇಂದು 5೦ಕ್ಕೂ ಹೆಚ್ಚು ಸುಸಜ್ಜಿತ ತೀ ನಿಗಾ ಘಟಕಗಳನ್ನು ಹೊಂದಿದೆ. ಈ ಆಸ್ಪತ್ರೆ, ತುಮಕೂರಿನ ಜನತೆಗಲ್ಲದೆ ಸುತ್ತಮುತ್ತಲಿನ ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಹಾಗೂ ಆಂಧ್ರಪ್ರದೇಶದ ಮಡಕಶಿರಾ, ಅನಂತಪುರ ಜಿಲ್ಲೆಯ ಜನತೆಗೂ ಸಹ ಸೇವೆ ನೀಡುತ್ತಿದೆ.

ಖ್ಯಾತ ವೈದ್ಯರ ಸೇವೆಃ

ದಿವಂಗತ ಡಾ|| ಶಿವಪ್ರಸಾದ್, ದಿವಂಗತ ಡಾ|| ಮರಿಹೊನ್ನಯ್ಯ, ಡಾ|| ಹುಲಿನಾಯ್ಕರ್, ಡಾ|| ಹನುಮಕ್ಕ, ಡಾ|| ಅನುಸೂಯ ಅವರಂತಹ ತುಮಕೂರಿನ ಖ್ಯಾತ ವೈದ್ಯರು ಸೇವೆ ಸಲ್ಲಿಸಿದ ಹಿರಿಮೆ ಈ ಆಸ್ಪತ್ರೆಗಿದೆ. ತುಮಕೂರಿನ ದಾನಿಗಳಾದ ಕಂಟ್ರಾಕ್ಟರ್ ಬಸಪ್ಪ, ತರೂರು ಕೆಂಪಹೊನ್ನಯ್ಯ, ಮೇಸ್ತ್ರಿ ರಂಗಣ ಮತ್ತು ರಂಗಮ್ಮ, ಅನಂತರಾಮಶೆಟ್ಟಿ, ಚಂzಶೇಖರ್ ಮುಂತಾದವರ ಸಹಕಾರದಿಂದ ಆಸ್ಪv ಈ ಬೃಹತ್ ರೂಪ ಪಡೆದುಕೊಂಡಿದೆ.

25೦೦ಕ್ಕೂ ಹೆಚ್ಚು ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆಃ

ಕೋವಿಡ್ ಸಮಯದಲ್ಲಿ ಜಿಲ್ಲಾ ಆಸ್ಪvಯು 250೦ಕ್ಕೂ ಹೆಚ್ಚು ಒಳರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿದೆ. ಪ್ರಸ್ತುತ 1೦೦ ಹಾಸಿಗೆ ಸಾಮರ್ಥ್ಯದ ಟ್ರಾಮಾಕೇರ್ ಬ್ಲಾಕ್ ಉದ್ಘಾಟನೆಗೆ ಸಜ್ಜುಗೊಂಡಿದೆ. 1೦೦ ಹಾಸಿಗೆ ಸಾಮರ್ಥ್ಯದ ತಾಯಿ ಹಾಗೂ ಮಕ್ಕಳ ಆಸ್ಪತ್ರೆ ಹಾಗೂ ಐವತ್ತು ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆಯ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ.

75ವರ್ಷ ಸುದೀರ್ಘ ಸೇವೆ ನೀಡಿದ ದೊಡ್ಡಾಸ್ಪತ್ರೆ ಬಳಗದಿಂದ ಅಭಿನಂದನೆಃ

ಸುತ್ತಮುತ್ತಲಿನ ಜಿಲ್ಲೆಗಳ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಸೇವೆ ಒದಗಿಸಿ ಖ್ಯಾತಿಯನ್ನು ಹೊಂದಿರುವ ತುಮಕೂರು ದೊಡ್ಡಾಸ್ಪತ್ರೆ (ಗ್ರಾಮೀಣ ಜನರು ಕರೆಯುವ ಅಚ್ಚುಮೆಚ್ಚಿನ ಪದ) ಎಪ್ಪತ್ತೈದು ಸಾರ್ಥಕ ವರ್ಷಗಳನ್ನು ಪೂರೈಸಿದೆ. ಆಸ್ಪತ್ರೆ ಖ್ಯಾತಿಯಲ್ಲಿ ಪಾಲುದಾರರಾದ ವೈದ್ಯರು, ಶುಶ್ರೂಷಕರು, ನೌಕರರು ಮತ್ತು ಇತರೆ ಸಿಬ್ಬಂದಿ ವರ್ಗವು ಈ ಪಯಣದಲ್ಲಿ ಸಹಾಯ ಹಸ್ತ ನೀಡಿ ಸಹಕರಿಸಿದ ಎಲ್ಲಾ ಜನ ತಿನಿಧಿಗಳು, ಅಧಿಕಾರಿಗಳು, ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ಜಿಲ್ಲಾಸ್ಪತ್ರೆ ಬಳಗ ಅಭಿನಂದಿಸುತ್ತದೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!